ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ರಾತ್ರಿ ದೆಹಲಿಯ ಏಮ್ಸ್ ನಲ್ಲಿ ನಿಧನರಾದರು. ಅವರು ತಮ್ಮ 92 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. 2004ರಿಂದ 2014ರ ವರೆಗೆ ಪ್ರಧಾನಿ ಹುದ್ದೆಯಲ್ಲಿದ್ದ ಮನಮೋಹನ್ ಸಿಂಗ್ ಅವರಿಗೆ ವಿತ್ತ ಸಚಿವ ಸ್ಥಾನ ನೀಡಿದ್ದು, ದೇಶ ಭಾರೀ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದ ಸಂದರ್ಭದಲ್ಲೇ. 1991ರಲ್ಲಿ, ಅವರಿಗೆ ಹಣಕಾಸು ಸಚಿವಾಲಯದ ಜವಾಬ್ದಾರಿಯನ್ನು ನೀಡಿದಾಗ, ಭಾರತದ ಬಳಿ ಕೇವಲ 890 ಮಿಲಿಯನ್ ಡಾಲರ್ ಮೌಲ್ಯದ ವಿದೇಶಿ ಕರೆನ್ಸಿ ಉಳಿದಿತ್ತು. ಈ ಹಣದಿಂದ ಕೇವಲ ಎರಡು ವಾರಗಳ ಆಮದು ವೆಚ್ಚವನ್ನು ಭರಿಸಬಹುದಾಗಿತ್ತು ಅಷ್ಟೇ. ಆದರೆ ಅಧಿಕಾರ ಸ್ವೀಕರಿಸಿದ ನಂತರ ಮನಮೋಹನ್ ಸಿಂಗ್ ಭಾರತದ ಅರ್ಥ ವ್ಯವಸ್ಥೆಯನ್ನೇ ಬದಲಿಸಿ ಬಿಟ್ಟರು. ಮನಮೋಹನ್ ಸಿಂಗ್ ಹಣಕಾಸು ಸಚಿವರಾದ ಕತೆಯೇ ರೋಚಕ.
ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು ಭಾರತ :
ಜೂನ್ 1991 ರಲ್ಲಿ, ಅಂದಿನ ಭಾರತದ ಪ್ರಧಾನಿ ಪಿವಿ ನರಸಿಂಹ ರಾವ್ ಅಧಿಕಾರ ವಹಿಸಿಕೊಂಡಾಗ, ದೇಶದ ಆರ್ಥಿಕ ಸ್ಥಿತಿ ಬಹಳ ಹದಗೆಟ್ಟಿತ್ತು. ಭಾರತದ ಸೊರಗಿದ ಅರ್ಥ ವ್ಯವಸ್ಥೆಯ ಬಗ್ಗೆ ಪ್ರಧಾನಿ ರಾವ್ ಅವರಿಗೆ ಎಂಟು ಪುಟಗಳ ನೋಟ್ ವೊಂದನ್ನು ಸಂಪುಟ ಕಾರ್ಯದರ್ಶಿ ನರೇಶ್ ಚಂದ್ರ ನೀಡಿದ್ದರು. ಇದರಲ್ಲಿ ಭಾರತವು ಗಂಭೀರ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗುತ್ತಿದ್ದು, ಪ್ರಧಾನಿ ಯಾವ ಕಾರ್ಯಗಳಿಗೆ ಪ್ರಾಮುಖ್ಯತೆ ನೀಡಬೇಕು ಎನ್ನುವುದನ್ನು ವಿವರಿಸಲಾಗಿತ್ತು. ದೇಶದಲ್ಲಿ ಅತಿ ಕಡಿಮೆ ವಿದೇಶಿ ಕರೆನ್ಸಿ ಉಳಿದಿದ್ದು, ಇದರಿಂದ ಕೆಲವೇ ವಾರಗಳ ಆಮದು ಮಾಡಿಕೊಳ್ಳಬಹುದು ಎನ್ನುವುದನ್ನು ಸ್ಪಷ್ಟವಾಗಿ ಹೇಳಲಾಗಿತ್ತು.
ಇದನ್ನೂ ಓದಿ : ಹೊಸ ವರ್ಷದಲ್ಲಿ ಹೊಸ ನಿಯಮ !ಗ್ಯಾಸ್ ಸಿಲಿಂಡರ್ನಿಂದ ಪಿಂಚಣಿವರೆಗೆ ಪ್ರಮುಖ ನಿಯಮಗಳಲ್ಲಿಯೇ ಬದಲಾವಣೆ
ಎರಡು ವಾರಗಳ ಆಮದು ವೆಚ್ಚಗಳೊಂದಿಗೆ ಉಳಿದಿತ್ತು ದೇಶ :
1990ರಲ್ಲಿ ಕೊಲ್ಲಿ ಯುದ್ಧದ ಕಾರಣ, ತೈಲ ಬೆಲೆಗಳು ಹಲವಾರು ಪಟ್ಟು ಹೆಚ್ಚಾಯಿತು. ಭಾರತವು ತನ್ನ ಸಾವಿರಾರು ನಾಗರಿಕರನ್ನು ಕುವೈತ್ನಿಂದ ಮರಳಿ ಕರೆತರಬೇಕಾಯಿತು. ಪರಿಣಾಮವಾಗಿ ಅವರು ಕಳುಹಿಸುವ ವಿದೇಶಿ ಕರೆನ್ಸಿ ಸಂಪೂರ್ಣವಾಗಿ ನಿಂತುಹೋಯಿತು. ಇದಲ್ಲದೆ, ದೇಶದಲ್ಲಿ ರಾಜಕೀಯ ಅಸ್ಥಿರತೆ ಮತ್ತು ಮಂಡಲ್ ಆಯೋಗದ ಶಿಫಾರಸುಗಳ ವಿರುದ್ಧದ ಪ್ರತಿಭಟನೆಗಳು ಆರ್ಥಿಕತೆಯನ್ನು ದುರ್ಬಲಗೊಳಿಸಿದವು. ಆಗ ದೇಶದ ಆರ್ಥಿಕ ಸವಾಲುಗಳ ವಿರುದ್ಧ ಹೋರಾಡಲು ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಹುಡುಕಿಕೊಂಡ ದಾರಿಯೇ ಡಾ.ಮನಮೋಹನ್ ಸಿಂಗ್.
ಮನಮೋಹನ್ ಸಿಂಗ್ ಗೆ ಹಣಕಾಸು ಸಚಿವ ಸ್ಥಾನದ ಆಫರ್ :
80ರ ದಶಕದಲ್ಲಿ ಭಾರತ ತೆಗೆದುಕೊಂಡ ಅಲ್ಪಾವಧಿ ಸಾಲದ ಬಡ್ಡಿ ದರ ಹೆಚ್ಚಿತ್ತು. ಹಣದುಬ್ಬರ ದರ ಶೇ.16.7ಕ್ಕೆ ಏರಿಕೆಯಾಗಿತ್ತು. ಈ ಕ್ಲಿಷ್ಟಕರ ಸನ್ನಿವೇಶಗಳನ್ನು ಕಂಡ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಬಲ್ಲ ವಿತ್ತ ಸಚಿವರನ್ನು ತಮ್ಮ ಸಂಪುಟದಲ್ಲಿ ಸೇರಿಸಿಕೊಳ್ಳುವ ನಿರ್ಧಾರಕ್ಕೆ ಬರುತ್ತಾರೆ. ಈ ಬಗ್ಗೆ ನರಸಿಂಹರಾವ್ ಅವರು ಇಂದಿರಾ ಗಾಂಧಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದ ತಮ್ಮ ಸ್ನೇಹಿತ ಪಿ.ಸಿ.ಅಲೆಕ್ಸಾಂಡರ್ ಅವರೊಂದಿಗೆ ಮಾತುಕತೆ ನಡೆಸುತ್ತಾರೆ. ಅಲೆಕ್ಸಾಂಡರ್ ಅವರಿಗೆ ಆರ್ಬಿಐ ಮಾಜಿ ಗವರ್ನರ್ಗಳಾದ ಐಜಿ ಪಟೇಲ್ ಮತ್ತು ಮನಮೋಹನ್ ಸಿಂಗ್ ಬಗ್ಗೆ ಹೇಳುತ್ತಾರೆ.ಅಲೆಕ್ಸಾಂಡರ್ ಮನಮೋಹನ್ ಸಿಂಗ್ ಪರವಾಗಿದ್ದುದರಿಂದ ಮನಮೋಹನ್ ಸಿಂಗ್ ಅವರೊಂದಿಗೆ ಮಾತುಕತೆಯ ಸಮಯ ನಿಗದಿಯಾಗುತ್ತದೆ.
ಇದನ್ನೂ ಓದಿ : MTR ಹುಟ್ಟಿದ್ದು ಎಲ್ಲಿ ಮತ್ತು ಹೇಗೆ ಗೊತ್ತಾ? ಇಲ್ಲಿದೆ ನೀವೆಂದೂ ಕೇಳಿರದ ಕಂಪನಿಯ ಇತಿಹಾಸ...!
ಪಿಸಿ ಅಲೆಕ್ಸಾಂಡರ್ ಆತ್ಮಚರಿತ್ರೆಯಲ್ಲಿ ಉಲ್ಲೇಖ :
ಪಿಸಿ ಅಲೆಕ್ಸಾಂಡರ್ ಆತ್ಮಚರಿತ್ರೆ 'ಥ್ರೂ ದಿ ಕಾರಿಡಾರ್ಸ್: ಆನ್ ಇನ್ಸೈಡ್ ಸ್ಟೋರಿ' ಪ್ರಕಾರ, ಜೂನ್ 20 ರಂದು ಅವರು ಮನಮೋಹನ್ ಸಿಂಗ್ ಅವರ ಮನೆಗೆ ಅಲೆಕ್ಸಾಂಡರ್ ಭೇಟಿ ನೀಡುತ್ತಾರೆ. ಆಗ ಅವರ ಅವರ ಮನೆ ಕೆಲಸದವರು ಸಿಂಗ್ ಯುರೋಪಿಗೆ ಹೋಗಿದ್ದು, ತಡರಾತ್ರಿಯೊಳಗೆ ದೆಹಲಿಗೆ ಹಿಂತಿರುಗುವುದಾಗಿ ತಿಳಿಸುತ್ತಾರೆ. ಜೂನ್ 21 ರಂದು ಬೆಳಿಗ್ಗೆ 5.30ಕ್ಕೆ ಮತ್ತೆ ಫೋನಾಯಿಸಿದಾಗ ಸಾಹೇಬರು ಗಾಢ ನಿದ್ರೆಯಲ್ಲಿದ್ದಾರೆ, ಈ ಕ್ಷಣ ಅವರನ್ನು ಎಬ್ಬಿಸಲು ಸಾಧ್ಯವಿಲ್ಲ ಎನ್ನುವ ಉತ್ತರ ಅವರ ಕೆಲಸದವರಿನ ಬರುತ್ತದೆ. ಒತ್ತಾಯದ ನಂತರ ಕೆಲಸದವರು ಮನಮೋಹನ್ ಸಿಂಗ್ ಅವರನ್ನು ಎಬ್ಬಿಸುವುದಕ್ಕೆ ಒಪ್ಪುತ್ತಾರೆ. ಈ ಸಮಯದಲ್ಲಿ ನಾನು ನಿಮ್ಮನ್ನು ಭೇಟಿಯಾಗುವುದು ಬಹಳ ಮುಖ್ಯ ಎನ್ನುವ ವಿಚಾರವನ್ನು ಮನಮೋಹನ್ ಸಿಂಗ್ ಗೆ ಪಿಸಿ ಅಲೆಕ್ಸಾಂಡರ್ ಮನದಟ್ಟು ಮಾಡುತ್ತಾರೆ. ಇದಾದ ನಂತರ ಪ್ರಧಾನಿ ನರಸಿಂಹರಾವ್ ಅವರೊಂದಿಗಿನ ಮಾತುಕತೆಯ ಬಗ್ಗೆ ಅಲೆಕ್ಸಾಂಡರ್ ವಿವರಿಸುತ್ತಾರೆ.
ಸ್ಪಷ್ಟ ಸಂದೇಶ ನೀಡಿದ್ದ ನರಸಿಂಹರಾವ್ :
ಇದಾದ ಬಳಿಕ ಮನಮೋಹನ್ ಸಿಂಗ್ ಅವರ ಹೆಸರನ್ನು ಹಣಕಾಸು ಸಚಿವರನ್ನಾಗಿ ಘೋಷಿಸಲಾಯಿತು.ಪ್ರಮಾಣವಚನ ಸ್ವೀಕರಿಸುವ ಮುನ್ನ ನರಸಿಂಹರಾವ್ ಅವರು ಮನಮೋಹನ್ ಸಿಂಗ್ ಅವರಿಗೆ ಕೆಲಸ ಮಾಡಲು ಸಂಪೂರ್ಣ ಸ್ವಾತಂತ್ರ್ಯ ನೀಡುವುದಾಗಿ ಹೇಳುತ್ತಾರೆ. ಇನ್ನು ನಮ್ಮ ನೀತಿ ಯಶಸ್ವಿಯಾದರೆ ನಾವೆಲ್ಲರೂ ಅದರ ಕ್ರೆಡಿಟ್ ತೆಗೆದುಕೊಳ್ಳುತ್ತೇವೆ. ಒಂದು ವೇಳೆ ಯೋಜನೆಗಳು ವಿಫಲವಾದರೆ, ನಿಮ್ಮ ಸ್ಥಾನದಿಂದ ನೀವು ಕೆಳಗಿಳಿಯಬೇಕಾಗುತ್ತದೆ ಎನ್ನುವುದನ್ನು ನರಸಿಂಹ ರಾವ್ ಸ್ಪಷ್ಟವಾಗಿ ತಿಳಿಸುತ್ತಾರೆ. ಜುಲೈ 24, 1991 ರಂದು ಮೊದಲ ಬಾರಿಗೆ ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿ ತಮ್ಮ ಭಾಷಣ ಮಾಡುತ್ತಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಇಲ್ಲಿಂದ ಭಾರತದ ಅರ್ಥ ವ್ಯವಸ್ಥೆ ಎದ್ದು ನಿಂತಿದ್ದು ಇತಿಹಾಸ.ಭಾರತದ ಅರ್ಥವ್ಯವಸ್ಥೆಗೆ ಆಪತ್ಬಾಂಧವರಾಗಿ ಬಂದಿದ್ದು ಡಾ. ಮನಮೋಹನ್ ಸಿಂಗ್. ಸೊರಗಿದ ಅರ್ಥ ವ್ಯವಸ್ಥೆಗೆ ಪುನಶ್ಚೇತನ ನೀಡಿದ್ದೇ ಇವರು. ಒಂದು ವೇಳೆ ಅಂದು ಡಾ. ಸಿಂಗ್ ಇರದೇ ಹೋಗಿದ್ದರೆ ಇಂದಿನ ಭಾರತ ಹೀಗಿರುತ್ತಿತ್ತೇ ?ಯೋಚಿಸಬೇಕಾದ ಪ್ರಶ್ನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.