Chaithra Kundapura : ಸದಾ ಒಂದಲ್ಲ ಒಂದು ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಿದ್ದ ಚೈತ್ರಾ ಕುಂದಾಪುರ ಸಧ್ಯ ಬಿಗ್ ಬಾಸ್ ಸ್ಪರ್ಧಿಯಾಗಿ ದೊಡ್ಮನೆ ಸೇರಿದ್ದಾರೆ.. ಅಲ್ಲಿಯೂ ತಮ್ಮ ತನವನ್ನು ಬಿಟ್ಟುಕೊಡದ ಗಟ್ಟಿಗಿತ್ತಿ ಸ್ಪರ್ಧಿಗಳ ಜೊತೆ ಜೋರಾಗಿಯೇ ಮಾತನಾಡುತ್ತ, ಟಕ್ಕರ್ ಕೊಡುತ್ತಾ ಆಟವಾಡುತ್ತಿದ್ದಾರೆ.. ಇದರ ನಡುವೆ ಚೈತ್ರಾ ಅವರ ವಯಸ್ಸಿಗೆ ಸಂಬಂಧಿಸಿ ವಿಚಾರವೊಂದು ಚರ್ಚೆಗೆ ಕಾರಣವಾಗಿದೆ..
ಭಾಷಣಗಾರ್ತಿಯಾಗಿ, ಸದಾ ಹಿಂದೂ ಧರ್ಮ ವಿಚಾರವಾಗಿ ಮಾತನಾಡುತ್ತ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ ಇದೀಗ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಯಾಗಿ ಮಿಂಚುತ್ತಿದ್ದಾರೆ.
ಇದರ ನಡುವೆ ಚೈತ್ರಾ ಕುಂದಾಪುರ ಅವರ ವಯಸ್ಸಿನ ವಿಚಾರವಾಗಿ ನೆಟ್ಟಿಗರು ಜೋರಾಗಿ ಚರ್ಚೆ ಶುರುಮಾಡಿದ್ದು, 28 ಅಂತ ಒಬ್ಬರು ಹೇಳಿದ್ರೆ ಇನ್ನೊಬ್ಬ 30 ಅಂತ ವಾದ ಮಾಡುತ್ತಿದ್ದಾರೆ..
ಅಲ್ಲದೆ, ಗೂಗಲ್ ಸರ್ಚ್ ಮೊರೆ ಹೋಗಿರುವ ಕೆಲವು ನೆಟ್ಟಿಗರು, ಬಿಗ್ಬಾಸ್ ಚೈತ್ರಾ ಕುಂದಾಪುರ ನಿಜವಾದ ವಯಸ್ಸು ಎಷ್ಟು ಅಂತ ಹುಡುಕಾಟ ನಡೆಸಿದ್ದಾರೆ.
ಇನ್ನು ವಯಸ್ಸಿನ ವಿಚಾರ ಒಂದು ಕಡೆ ಆದ್ರೆ, ಇನ್ನೂ ಕೆಲವರು ಮದುವೆ ಏಕೆ ಆಗಿಲ್ಲ.. ? ಚೈತ್ರಾ ಕುಂದಾಪುರ ಗಂಡ ಯಾರು ? ಹೀಗೆ ಹಲವು ವಿಚಾರಗಳ ಕುರಿತು ಸರ್ಚ್ ಮಾಡುತ್ತಿದ್ದಾರೆ.
ಇನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಜರ್ನಲಿಸಂ ಮತ್ತು ಮಾಸ್ ಕಮ್ಯೂನಿಕೇಷನ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಅನೇಕ ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಅವರ ನಿಜವಾದ ವಯಸ್ಸು ಹುಡುಕಲು ಹೊರಟ ನೆಟ್ಟಿಗರಿಗೆ ಗೂಗಲ್ ಕೊಟ್ಟ ಉತ್ತರ 28 ವರ್ಷ ಅಂತ..
ಆದ್ರೆ ಅವರ ನಿಜವಾದ ವಯಸ್ಸು 28 ಅಲ್ಲ.. 1993 ರಲ್ಲಿ ಹುಟ್ಟಿರುವ ಚೈತ್ರಾ ಕುಂದಾಪುರ ಅವರು 2014 ಸ್ನಾತಕೋತ್ತರ ಪದವಿ ಮುಗಿಸಿದ್ದಾರೆ ಅಂದ್ರೆ ನೀವೇ ಅರ್ಥಮಾಡಿಕೊಳ್ಳಿ.. ಅವರ ವಯಸ್ಸು ಎಷ್ಟಿರಬಹುದು ಅಂತ..