ಪಿರಿಯಡ್ಸ್‌ ವೇಳೆ ಅದನ್ನ ಕಂಟ್ರೋಲ್‌ ಮಾಡೋಕೆ ಆಗಲಿಲ್ಲ..! ಬಿಗ್‌ ಬಾಸ್‌ ಮನೆಯಿಂದ ಹೊರ ಬರುತ್ತಲೇ ಶಾಕಿಂಗ್‌ ಹೇಳಿಕೆ ನೀಡಿದ ಸ್ಪರ್ಧಿ

Vishnupriya Bhimeneni : ಬಿಗ್ ಬಾಸ್ ತೆಲುಗು ಸೀಸನ್ 8 ರಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ ಎನ್ನುವ ಕಾರಣಕ್ಕೆ ವಿಷ್ಣುಪ್ರಿಯಾ ಮನೆಯಿಂದ ಹೊರ ಬಂದಿದ್ದಾರೆ. ಕನಿಷ್ಠ ಫೈನಲ್‌ ಹಂತದ ವರೆಗೂ ದೊಡ್ಮನೆಯಲ್ಲಿ ಇರಲು ಅವರಿಂದ ಸಾಧ್ಯವಾಗಲಿಲ್ಲ. ಸದ್ಯ ಬಿಗ್‌ಹೌಸ್‌ನಿಂದ ಹೊರ ಬಂದಿರುವ ವಿಷ್ಣು ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆ ಸಖತ್‌ ವೈರಲ್‌ ಆಗುತ್ತಿದೆ.
 

1 /5

ಇತ್ತೀಚೆಗೆ ಬಿಗ್ ಬಾಸ್ ತೆಲುಗು ಸೀಸನ್ 8 ಕೊನೆಗೊಂಡಿದೆ. ಕನ್ನಡದ ನಟ ನಿಖಿಲ್ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ವಿಷ್ಣುಪ್ರಿಯಾ ಟೈಟಲ್ ವಿನ್ನರ್ ಆಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಫೈನಲ್‌ಗೂ ಹೋಗಲು ಸುಂದರಿಗೆ ಸಾಧ್ಯವಾಗಲಿಲ್ಲ.   

2 /5

ವಿಷ್ಣುಪ್ರಿಯಾ ಆಟ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ವಿಶೇಷವಾಗಿ ಆಕೆ ಪೃಥ್ವಿರಾಜ್ ಜೊತೆ ಪ್ರೀತಿಯಲ್ಲಿ ಬಿದ್ದದ್ದು, ಪ್ರೇಕ್ಷಕರು ಇಷ್ಟಪಡಲಿಲ್ಲ. ವಿಷ್ಣುಪ್ರಿಯಾ ಯಾವ ಹಂತದಲ್ಲೂ ತನ್ನ ಛಾಪು ಮೂಡಿಸಲು ಸಾಧ್ಯವಾಗಲಿಲ್ಲ. ಮನೆಯಲ್ಲಿ ಹೆಚ್ಚಾಗಿ ರೊಮ್ಯಾನ್ಸ್ ಮಾಡುವ ಮೂಲಕ ಸಮಯ ಕಳೆದಳು.   

3 /5

ಮನೆಯಲ್ಲಿ ಹತ್ತು ವಾರಗಳಿದ್ದರೂ ಯಾವ ಲೆವೆಲ್‌ನಲ್ಲಿಯೂ ಈಕೆ ಮಿಂಚಲಿಲ್ಲ.. ಬಿಗ್‌ ಬಾಸ್‌ ಎಚ್ಚರಿಸಿದರೂ ವಿಷ್ಣುಪ್ರಿಯಾ ಬದಲಾಗಲಿಲ್ಲ. ಇದರಿಂದಾಗಿ 14ನೇ ವಾರದಲ್ಲಿ ಎಲಿಮಿನೇಟ್ ಆದರು. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ವಿಷ್ಣುಪ್ರಿಯಾ ಮೊದಲ ಬಾರಿಗೆ ಸಂದರ್ಶನ ನೀಡಿದ್ದಾರೆ..   

4 /5

ಈ ನಿಟ್ಟಿನಲ್ಲಿ ಶಾಕಿಂಗ್‌ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಸೀಸನ್ 3ಯಲ್ಲಿಯೇ ನನಗೆ ಬಿಗ್ ಬಾಸ್ ಆಫರ್ ಬಂದಿತ್ತು. ಆದರೆ ನಾನು ಹೋಗಲಿಲ್ಲ. ಕೋಟಿ ರೂಪಾಯಿ ಕೊಟ್ಟರೂ ಬಿಗ್ ಬಾಸ್ ಶೋಗೆ ಹೋಗುವುದಿಲ್ಲ ಎಂದು ನಾನು ಈ ಹಿಂದೆ ಮಾಡಿದ ಕಾಮೆಂಟ್‌ಗಳ ಆಧಾರದ ಮೇಲೆ ನನ್ನನ್ನು ಟ್ರೋಲ್ ಮಾಡಿದ್ದಾರೆ.    

5 /5

ಆದರೆ, ನನ್ನ ಗುರುಗಳ ಸಲಹೆ ಮೇರೆಗೆ ನಾನು ಬಿಗ್ ಬಾಸ್ ಶೋಗೆ ಹೋಗಿದ್ದೆ. ನನಗೆ ಆಧ್ಯಾತ್ಮಿಕ ಕಾಳಜಿ ಇತ್ತು.. ನನ್ನನ್ನು ನಾನು ಎಷ್ಟರಮಟ್ಟಿಗೆ ಹತೋಟಿಯಲ್ಲಿಟ್ಟುಕೊಳ್ಳಬಲ್ಲೆ ಎಂದು ತಿಳಿಯಲು ನಾನು ಶೋನಲ್ಲಿ ಭಾಗವಹಿಸಿದೆ.. ಕೆಲವೊಮ್ಮೆ ನಾನು ನಿಯಂತ್ರಣವನ್ನು ಕಳೆದುಕೊಂಡಿದ್ದೇನೆ. ಪಿರಿಯಡ್ ಟೈಮ್ ಹಾರ್ಮೋನ್ ಬ್ಯಾಲೆನ್ಸ್ ನಿಂದಾಗಿ ನಾನು ಸರಿಯಾಗಿ ಆಡಲಿಲ್ಲ ಎಂದು ವಿಷ್ಣುಪ್ರಿಯಾ ಹೇಳಿಕೊಂಡಿದ್ದಾರೆ.