ಶುಕ್ರ ಅಸ್ತ 2023 ಪರಿಣಾಮ: ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಗ್ರಹವು ಅದರ ನಿಗದಿತ ಸಮಯದಲ್ಲಿ ಉದಯಿಸುವುದು, ಅಸ್ತಮಿಸುವುದು ಮತ್ತು ಹಿಮ್ಮೆಟ್ಟಿಸುವುದು. ಇದು ಎಲ್ಲಾ ರಾಶಿಗಳ ಸ್ಥಳೀಯರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮುಂದಿನ ತಿಂಗಳು ಆಗಸ್ಟ್ನಲ್ಲಿ ಶುಕ್ರವು ಸಿಂಹರಾಶಿಯಲ್ಲಿ ಅಸ್ತಮಿಸಲಿದೆ. ಈ ಸಮಯದಲ್ಲಿ ಯಾವ ರಾಶಿಯವರು ಎಚ್ಚರವಾಗಿರಬೇಕು ಎಂದು ತಿಳಿಯಿರಿ.
Maa Lakshmi Favorite Zodiac Signs: ತಾಯಿ ಲಕ್ಷ್ಮಿದೇವಿಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮಿದೇವಿ ದಯೆ ತೋರುವ ವ್ಯಕ್ತಿಗೆ ಜೀವನದಲ್ಲಿ ಯಾವುದರ ಕೊರತೆಯೂ ಕಾಡುವುದಿಲ್ಲ. ಆತನ ಕುಟುಂಬವು ಸಂತೋಷ ಮತ್ತು ಸಮೃದ್ಧಿಯಿಂದ ಇರುತ್ತದೆ.
Weekly Horoscope 1 to 7 May 2023: ವಾರದ ಆರಂಭದಲ್ಲಿ ಸಂಪತ್ತು ಮತ್ತು ಸಮೃದ್ಧಿಯ ಅಂಶವಾದ ಶುಕ್ರ ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಈ ಕಾರಣದಿಂದ ಅನೇಕ ರಾಶಿಗಳು ಮಂಗಳಕರ ಫಲಿತಾಂಶಗಳನ್ನು ಪಡೆಯುತ್ತವೆ
Shukra Mahadasha: ಯಾವುದೇ ವ್ಯಕ್ತಿಯ ಜಾತಕದಲ್ಲಿ ದಶಾ ನಿರ್ಣಾಯಕ ಪಾತ್ರವನ್ನು ಹೊಂದಿದೆ. ಶುಕ್ರನನ್ನು ಭೌತಿಕ ಸುಖ, ಸೌಕರ್ಯವನ್ನು ಕಲ್ಪಿಸುವ ಗ್ರಹ ಎಂದು ಪರಿಗಣಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಜೀವನದಲ್ಲಿ ಶುಕ್ರ ಮಹಾದಶ ಇದ್ದಾಗ ಅಂತಹ ವ್ಯಕ್ತಿಯು ಎರಡು ದಶಕಗಳ ಕಾಲ ರಾಜನಂತೆ ಜೀವನ ನಡೆಸುತ್ತಾನೆ ಎಂದು ನಂಬಲಾಗಿದೆ. ಶುಕ್ರ ಮಹಾದಶಾ ಪರಿಣಾಮಗಳು ಮತ್ತದರ ಪರಿಹಾರಗಳ ಕುರಿತು ಇಲ್ಲಿದೆ ಮಹತ್ವದ ಮಾಹಿತಿ.
Rahu Budh and Shukra Yuti in Aries: ಗ್ರಹಗಳ ರಾಶಿಯ ಬದಲಾವಣೆಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಅದೇ ರೀತಿ, ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳ ಸಂಯೋಜನೆಯನ್ನು ಸಹ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ.
Solar System: ಈ ಅದ್ಭುತ ದೃಶ್ಯವನ್ನು ನೋಡಲು, ಜನರು ತಮ್ಮ ಮನೆಗಳ ಛಾವಣಿಯ ಮೇಲೆ ಹತ್ತಿ ಈ ಐತಿಹಾಸಿಕ ಖಗೋಳ ಘಟನೆಯನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿಯುತ್ತಿರುವುದು ಕಂಡುಬಂದಿತು. ಇದನ್ನು ನೋಡಿದ ನಂತರ, ಈ ಅದ್ಭುತ ದೃಶ್ಯದ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
Today Moon Pic: ಇಂದು ಖಗೋಳದಲ್ಲಿ ವಿಸ್ಮಯಕಾರಿ ಘಟನೆಯೊಂದು ನಡೆದಿದೆ. ಭೂಮಿಯಿಂದ ನೋಡಿದಾಗ ಶುಕ್ರ ಗ್ರಹವು ಚಂದ್ರನ ಕತ್ತಲೆಯ ಅಂಚಿನಲ್ಲಿ ನಿಧಾನವಾಗಿ ಕಣ್ಮರೆಯಾಗುತ್ತಿದ್ದಂತೆ ಕಾಣುತ್ತಿದೆ. ಇದೊಂದು ಮಹಾ ಸಂಯೋಗದಂತೆ ಗೋಚರವಾಗುತ್ತಿದ್ದರೂ ಸಹ, ಎರಡೂ ಗ್ರಹಗಳು ತಮ್ಮ ಪಥದಲ್ಲಿಯೇ ಸಾಗುತ್ತಿದೆ.
ಶುಕ್ರ ರಾಶಿ ಪರಿವರ್ತನ 2023: ಮಾರ್ಚ್ 12 ರಂದು ಪ್ರಣಯ-ಐಷಾರಾಮದ ಗ್ರಹವಾದ ಶುಕ್ರ ಮೀನದಲ್ಲಿ ಸಂಕ್ರಮಿಸಿದೆ ಮತ್ತು ಮಾರ್ಚ್ 13ರಂದು ಮಂಗಳ ಗ್ರಹವು ಮಿಥುನದಲ್ಲಿ ಸಂಕ್ರಮಿಸಿದೆ. ಈ 2 ಶಕ್ತಿಶಾಲಿ ಗ್ರಹಗಳ ರಾಶಿ ಬದಲಾವಣೆಯಿಂದ 5 ರಾಶಿಗಳ ಅದೃಷ್ಟವು ತೆರೆಯಲಿದೆ.
Venus Transit 2023 : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂದು ಮಾರ್ಚ್ 12 ರಂದು ಶುಕ್ರ ಗ್ರಹವು ಸಂಕ್ರಮಣದ ನಂತರ ಮೇಷ ರಾಶಿಯನ್ನು ಪ್ರವೇಶಿಸಿದೆ. ಮೇಷ ರಾಶಿಯಲ್ಲಿ ಶುಕ್ರನ ಸಂಕ್ರಮವು ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ಮುಖ್ಯವಾಗಿದೆ.
ಸಾಪ್ತಾಹಿಕ ಭವಿಷ್ಯ: ಮಾರ್ಚ್ 3ನೇ ವಾರವು ಕೆಲವು ರಾಶಿಗಳಿಗೆ ಬಹಳ ವಿಶೇಷವಾಗಿರುತ್ತದೆ. ಮಂಗಳ ಮತ್ತು ಶುಕ್ರರ ಸಂಚಾರವು ಈ ರಾಶಿಯ ಜನರಿಗೆ ಬಲವಾದ ಹಣ ಮತ್ತು ಪ್ರಗತಿಯನ್ನು ನೀಡುತ್ತದೆ.
ಫೆಬ್ರವರಿ 3ನೇ ವಾರದಲ್ಲಿ 2 ದೊಡ್ಡ ಗ್ರಹಗಳಾದ ಸೂರ್ಯ ಮತ್ತು ಶುಕ್ರ ತಮ್ಮ ರಾಶಿಗಳನ್ನು ಬದಲಾಯಿಸುತ್ತಿವೆ. ಈ ಗ್ರಹಗಳ ಸಂಚಾರವು ಎಲ್ಲಾ ರಾಶಿಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಯಾವ ರಾಶಿಯವರಿಗೆ ಹೆಚ್ಚು ಹಣ ಮತ್ತು ಲಾಭ ಸಿಗುತ್ತದೆ ಎಂದು ತಿಳಿಯಿರಿ.
ವೈದಿಕ ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಗ್ರಹವು ತನ್ನದೇ ಆದ ಸಮಯದಲ್ಲಿ ತನ್ನ ಸ್ಥಳವನ್ನು ಬದಲಾಯಿಸುತ್ತದೆ. ಈ ವರ್ಷ ಅನೇಕ ದೊಡ್ಡ ಗ್ರಹಗಳು ಸಂಚಾರ ನಡೆಸಲಿವೆ. ಇಂತಹ ಪರಿಸ್ಥಿತಿಯಲ್ಲಿ ಫೆಬ್ರವರಿ ತಿಂಗಳಲ್ಲಿ 3 ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಈ 3 ಗ್ರಹಗಳ ಬಗ್ಗೆ ತಿಳಿಯಿರಿ.
Saturn-Venus Conjunction: ಕುಂಭ ರಾಶಿಯಲ್ಲಿ ಶನಿ ಹಾಗೂ ಶುಕ್ರರ ಸಂಯೋಜನೆ ನೆರವೇರಿದೆ. ಈ ಎರಡು ದೊಡ್ಡ ಗ್ರಹಗಳ ಈ ಯುತಿ ಯಾವ ರಾಶಿಗಳ ಜಾತಕದವರ ಪಾಲಿಗೆ ಅತ್ಯಂತ ಫಲದಾಯಿ ಸಾಬೀತಾಗಲಿದೆ ತಿಳಿದುಕೊಳ್ಳೋಣ ಬನ್ನಿ,
2023 ರಲ್ಲಿ ಅನೇಕ ದೊಡ್ಡ ಗ್ರಹಗಳು ರಾಶಿಗಳನ್ನು ಬದಲಾಯಿಸಲಿವೆ. ಜನವರಿ 22ರಂದು ಶುಕ್ರನು ಶನಿಯು ಅದೇ ರಾಶಿಯಲ್ಲಿ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಮಯದಲ್ಲಿ ಎಲ್ಲಾ ರಾಶಿಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳು ಉಂಟಾಗುತ್ತವೆ. ಶುಕ್ರನ ಸಂಚಾರದಿಂದ ಯಾವ ರಾಶಿಯವರು ಶ್ರೀಮಂತರಾಗುತ್ತಾರೆ ಎಂದು ತಿಳಿಯಿರಿ.
2023 ರಲ್ಲಿಶುಕ್ರನ ಸಂಕ್ರಮಣದಿಂದ ಮಾಳವ್ಯ ರಾಜಯೋಗ ರೂಪುಗೊಳ್ಳುತ್ತಿದೆ. ಇದು ಮೂರು ರಾಶಿಯವರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದಾಗಿ ಮುಂದಿನ ವರ್ಷ ಅಂದರೆ 2023 ರಲ್ಲಿ ಈ ರಾಶಿಯವರಿಗೆ ಇದ್ದಕ್ಕಿದ್ದಂತೆ ಧನ ಲಾಭವಾಗುತ್ತದೆ. ಎಲ್ಲಾ ಕೆಲಸದಲ್ಲಿಯೂ ಪ್ರಗತಿ ಸಿಗಲಿದೆ.
ಡಿಸೆಂಬರ್ 2022 ರ ಕೊನೆಗೊಳ್ಳುತ್ತಿರುವುದು ಜ್ಯೋತಿಷ್ಯದ ದೃಷ್ಟಿಕೋನದಿಂದ ಬಹಳ ಮಹತ್ವದ್ದಾಗಿದೆ. ಮಕರ ರಾಶಿಯಲ್ಲಿ ಶನಿ, ಬುಧ ಮತ್ತು ಶುಕ್ರರ ಸಂಯೋಜನೆಯಿಂದ ಈ ತ್ರಿಗ್ರಾಹಿ ಯೋಗ ರೂಪುಗೊಳ್ಳುತ್ತದೆ. ಇದು 4 ರಾಶಿಯವರಿಗೆ ತುಂಬಾ ಶುಭಕರವಾಗಿದೆ.
ಜನ್ಮ ಜಾತಕದಲ್ಲಿ ಶುಕ್ರಣ ಸ್ಥಾನ ಉತ್ತಮವಾಗಿದ್ದರೆ ಅವರ ಭವಿಷ್ಯ ಕೂಡಾ ಪ್ರಕಾಶಮಾನವಾಗಿ ಬೆಳಗುತ್ತದೆ. ಶುಕ್ರ ದೆಸೆ ನಡೆಯುತ್ತಿದ್ದರೆ ಆ ವ್ಯಕ್ತಿ ಮುಟ್ಟಿದ್ದೆಲ್ಲಾ ಚಿನ್ನ ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ವ್ಯಕ್ತಿಯ ಜಾತಕದಲ್ಲಿ ಶುಕ್ರ ದೆಸೆ ನಡೆಯುತ್ತಿರುವಾಗಲೇ ಒಳ್ಳೆಯ ಕೆಲಸಗಳನ್ನು ಮಾಡುವಂತ ಸೂಚಿಸಲಾಗುತ್ತದೆ.
ಶುಕ್ರ ಗ್ರಹವು ಡಿಸೆಂಬರ್ 5ರಂದು ತನ್ನ ರಾಶಿಯನ್ನು ಬದಲಾಯಿಸಲಿದೆ. ಅದು ಈ ದಿನ ಧನು ರಾಶಿಗೆ ಪ್ರವೇಶಿಸಲಿದ್ದು, ಡಿಸೆಂಬರ್ 29ರವರೆಗೆ ಅಲ್ಲಿಯೇ ಇರಲಿದೆ. ಈ ರಾಶಿ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಯಾವ ರಾಶಿಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಅನ್ನೋದನ್ನು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.