ಮಾಳವ್ಯ ರಾಜಯೋಗ ರೂಪಿಸುವ ಶುಕ್ರ ಹೊಸ ವರ್ಷದಲ್ಲಿ ಈ ಮೂರು ರಾಶಿಯವರ ಕಷ್ಟಗಳಿಗೆ ಹಾಕಲಿದ್ದಾನೆ ಪೂರ್ಣ ವಿರಾಮ.!

 2023 ರಲ್ಲಿಶುಕ್ರನ ಸಂಕ್ರಮಣದಿಂದ  ಮಾಳವ್ಯ ರಾಜಯೋಗ ರೂಪುಗೊಳ್ಳುತ್ತಿದೆ. ಇದು ಮೂರು ರಾಶಿಯವರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದಾಗಿ   ಮುಂದಿನ ವರ್ಷ ಅಂದರೆ 2023 ರಲ್ಲಿ ಈ ರಾಶಿಯವರಿಗೆ  ಇದ್ದಕ್ಕಿದ್ದಂತೆ ಧನ ಲಾಭವಾಗುತ್ತದೆ. ಎಲ್ಲಾ ಕೆಲಸದಲ್ಲಿಯೂ ಪ್ರಗತಿ ಸಿಗಲಿದೆ. 

Written by - Ranjitha R K | Last Updated : Dec 21, 2022, 02:28 PM IST
  • ಗ್ರಹ ಮತ್ತು ನಕ್ಷತ್ರಪುಂಜಗಳ ಬದಲಾವಣೆಗೆ ಭಾರೀ ಮಹತ್ವವಿದೆ
  • ಫೆಬ್ರವರಿ 15, 2023 ರಂದು ಶುಕ್ರ ಗ್ರಹ ಸ್ಥಾನವನ್ನು ಬದಲಾಯಿಸಲಿದೆ
  • ಶುಕ್ರ ಸಂಕ್ರಮಣದಿಂದ ರೂಪುಗೊಳ್ಳುತ್ತಿದೆ ಮಾಳವ್ಯ ರಾಜಯೋಗ
ಮಾಳವ್ಯ ರಾಜಯೋಗ ರೂಪಿಸುವ ಶುಕ್ರ ಹೊಸ ವರ್ಷದಲ್ಲಿ ಈ ಮೂರು ರಾಶಿಯವರ ಕಷ್ಟಗಳಿಗೆ ಹಾಕಲಿದ್ದಾನೆ  ಪೂರ್ಣ ವಿರಾಮ.!  title=
Venus transit effect

ಬೆಂಗಳೂರು : ಜ್ಯೋತಿಷ ಶಾಸ್ತ್ರದ ಪ್ರಕಾರ ಗ್ರಹ ಮತ್ತು ನಕ್ಷತ್ರಪುಂಜಗಳ ಬದಲಾವಣೆಗೆ ಭಾರೀ ಮಹತ್ವವಿದೆ.  ಗ್ರಹ ಮತ್ತು ನಕ್ಷತ್ರಗಳ ಸ್ಥಾನದಲ್ಲಿನ ಬದಲಾವಣೆಯು ವ್ಯಕ್ತಿಯ ಜಾತಕದ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ,  ಫೆಬ್ರವರಿ 15, 2023 ರಂದು ಶುಕ್ರ ಗ್ರಹವು ತನ್ನ ಸ್ಥಾನವನ್ನು ಬದಲಾಯಿಸಿಕೊಂಡು ಮೀನ ರಾಶಿಯನ್ನು ಪ್ರವೇಶಿಸುತ್ತದೆ. ಯಾವುದೇ ಒಬ್ಬ ವ್ಯಕ್ತಿಯ ಜನ್ಮ ಜಾತಕದಲ್ಲಿ ಶುಕ್ರನ ಸ್ಥಾನವು ವಿಶೇಷ ಪ್ರಾಮುಖ್ಯತೆ ವಹಿಸಿದೆ. 

ಶುಕ್ರ ಸಂಕ್ರಮಣದಿಂದ ರೂಪುಗೊಳ್ಳುತ್ತಿದೆ ಮಾಳವ್ಯ  ರಾಜಯೋಗ : 
ಶುಕ್ರ ಗ್ರಹ ವೈಭವ, ಐಶ್ವರ್ಯ, ದೈಹಿಕ ಸಂತೋಷ, ಕಲೆ-ಸಂಗೀತ ಮತ್ತು ವೈವಾಹಿಕ ಜೀವನದ ಪ್ರತೀಕ ಎಂದು ಹೇಳಲಾಗುತ್ತದೆ. 2023 ರಲ್ಲಿಶುಕ್ರನ ಸಂಕ್ರಮಣದಿಂದ  ಮಾಳವ್ಯ ರಾಜಯೋಗ ರೂಪುಗೊಳ್ಳುತ್ತಿದೆ. ಇದು ಮೂರು ರಾಶಿಯವರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದಾಗಿ   ಮುಂದಿನ ವರ್ಷ ಅಂದರೆ 2023 ರಲ್ಲಿ ಈ ರಾಶಿಯವರಿಗೆ  ಇದ್ದಕ್ಕಿದ್ದಂತೆ ಧನ ಲಾಭವಾಗುತ್ತದೆ. ಎಲ್ಲಾ ಕೆಲಸದಲ್ಲಿಯೂ ಪ್ರಗತಿ ಸಿಗಲಿದೆ. 

ಇದನ್ನೂ ಓದಿ Garuda Puran: ಮೃತದೇಹವನ್ನು ಒಂಟಿಯಾಗಿ ಬಿಟ್ಟರೆ ಏನಾಗುತ್ತೆ ಗೊತ್ತಾ? ಕಲ್ಪನೆಗೂ ಮೀರಿ ನಡೆಯುವ ಘಟನೆ ಅದು!!

ಮಿಥುನ ರಾಶಿಗೆ ಹೊಸ ಉದ್ಯೋಗಾವಕಾಶ :
 ಶುಕ್ರ ಸಂಕ್ರಮಣದ ನಂತರ ರಚನೆಯಾಗುತ್ತಿರುವ ಮಾಳವ್ಯ ರಾಜಯೋಗದ ಫಲವಾಗಿ ಮಿಥುನ ರಾಶಿಯವರಿಗೆ ಧನ ಲಾಭವಾಗಲಿದೆ. ಆಕಸ್ಮಿಕ ಧನಲಾಭದ ಜೊತೆಗೆ ಹೊಸ ಉದ್ಯೋಗದ ಪ್ರಸ್ತಾಪ ಕೂಡಾ ಬರಬಹುದು. ಇದಲ್ಲದೆ, ಕೆಲಸದ ಸ್ಥಳದಲ್ಲಿ ನೀವು ಮಾಡುವ ಕೆಲಸಕ್ಕೆ ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗುತ್ತದೆ. ಉದ್ಯೋಗದಲ್ಲಿ ಬಡ್ತಿ ಮತ್ತು ವೇತನ ಹೆಚ್ಚಳದ ಅವಕಾಶಗಳಿರುತ್ತವೆ. 
 
ಕನ್ಯಾ ರಾಶಿಯವರಿಗೆ ವೈವಾಹಿಕ ಜೀವನದಲ್ಲಿ ಯಶಸ್ಸು  :
ಮಾಳವ್ಯ ರಾಜಯೋಗದಿಂದ ಕನ್ಯಾ ರಾಶಿಯವರ ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಕನ್ಯಾ ರಾಶಿಯ ಜನರ ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಅವಿವಾಹಿತರಿಗೆ ಮದುವೆ ನಿಶ್ಚಯವಾಗಬಹುದು. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರಿಗೆ ಲಾಭವಾಗಲಿದೆ. 

ಇದನ್ನೂ ಓದಿ : Chanakya Niti: ಈ ಕಾರಣದಿಂದ ಮಹಿಳೆಯರನ್ನು ಶಕ್ತಿ ಸ್ವರೂಪಿ ಎನ್ನಲಾಗುತ್ತದೆ, ಇದನ್ನು ಬಹುತೇಕ ಪುರುಷರು ಒಪ್ಕೊಳ್ತಾರೆ

ಧನು ರಾಶಿಯವರಿಗೆ ವಾಹನ ಮತ್ತು ಆಸ್ತಿ  ಖರೀದಿ ಭಾಗ್ಯ : 
ಹೊಸ ವರ್ಷದಲ್ಲಿ ಧನು ರಾಶಿಯವರಿಗೆ ವಾಹನ ಮತ್ತು ಆಸ್ತಿ ಖರೀದಿ ಯೋಗವಿದೆ. ಶುಕ್ರ ಸಂಕ್ರಮಣದ ನಂತರ ರೂಪುಗೊಳ್ಳುವ ಮಾಳವ್ಯ ರಾಜಯೋಗದಿಂದ ಧನು ರಾಶಿಯವರ ಉತ್ತಮ ದಿನಗಳು ಪ್ರಾರಂಭವಾಗಬಹುದು. ಧನು ರಾಶಿಯವರೂ ಮಾಡುವ ಕೆಲಸಗಳಿಗೆ ತಾಯಿಯ ಬೆಂಬಲ ಸಿಗಲಿದೆ. ಉದ್ಯೋಗಿಗಳಿಗೆ ಹೊಸ ಉದ್ಯೋಗದ ಆಫರ್ ಬರಬಹುದು.  

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News