ರೂಪುಗೊಳ್ಳಲಿದೆ ಪ್ರಭಾವಿ ಯೋಗ, ನಾಲ್ಕು ರಾಶಿಗಳ ಜೀವನದ ಮಹಾ ಬದಲಾವಣೆಗೆ ಕಾರಣರಾಗುತ್ತಾರೆ ಬುಧ, ಶುಕ್ರ ಮತ್ತು ಶನಿ

ಡಿಸೆಂಬರ್ 2022 ರ ಕೊನೆಗೊಳ್ಳುತ್ತಿರುವುದು ಜ್ಯೋತಿಷ್ಯದ ದೃಷ್ಟಿಕೋನದಿಂದ ಬಹಳ ಮಹತ್ವದ್ದಾಗಿದೆ. ಮಕರ ರಾಶಿಯಲ್ಲಿ ಶನಿ, ಬುಧ ಮತ್ತು ಶುಕ್ರರ ಸಂಯೋಜನೆಯಿಂದ ಈ ತ್ರಿಗ್ರಾಹಿ ಯೋಗ ರೂಪುಗೊಳ್ಳುತ್ತದೆ. ಇದು 4 ರಾಶಿಯವರಿಗೆ ತುಂಬಾ ಶುಭಕರವಾಗಿದೆ. 

Written by - Ranjitha R K | Last Updated : Dec 19, 2022, 08:46 AM IST
  • ಜ್ಯೋತಿಷ್ಯದ ದೃಷ್ಟಿಕೋನದಿಂದ ಬಹಳ ಮಹತ್ವ ಡಿಸೆಂಬರ್ ಕೊನೆಯ ದಿನಗಳು
  • ರೂಪುಗೊಳ್ಳುತ್ತಿದೆ ತ್ರಿಗ್ರಾಹಿ ಯೋಗ
  • ತ್ರಿಗ್ರಾಹಿ ಯೋಗದಿಂದ 4 ರಾಶಿಯವರ ಭವಿಷ್ಯವೇ ಬದಲಾಗಲಿದೆ
ರೂಪುಗೊಳ್ಳಲಿದೆ ಪ್ರಭಾವಿ ಯೋಗ, ನಾಲ್ಕು ರಾಶಿಗಳ ಜೀವನದ ಮಹಾ ಬದಲಾವಣೆಗೆ ಕಾರಣರಾಗುತ್ತಾರೆ ಬುಧ, ಶುಕ್ರ ಮತ್ತು ಶನಿ   title=
Saturn Venus Mercury in Capricorn 2022 Effect on Zodiac Signs

ಬೆಂಗಳೂರು : ಡಿಸೆಂಬರ್ 2022 ರ ಕೊನೆಗೊಳ್ಳುತ್ತಿರುವುದು ಜ್ಯೋತಿಷ್ಯದ ದೃಷ್ಟಿಕೋನದಿಂದ ಬಹಳ ಮಹತ್ವದ್ದಾಗಿದೆ. 2022 ರ ಕೊನೆಯಲ್ಲಿ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸಂಯೋಜನೆಯು ತ್ರಿಗ್ರಾಹಿ ಯೋಗವನ್ನು ರೂಪಿಸುತ್ತಿದೆ.  ಮಕರ ರಾಶಿಯಲ್ಲಿ ಶನಿ, ಬುಧ ಮತ್ತು ಶುಕ್ರರ ಸಂಯೋಜನೆಯಿಂದ ಈ ತ್ರಿಗ್ರಾಹಿ ಯೋಗ ರೂಪುಗೊಳ್ಳುತ್ತದೆ. ಇದು 4 ರಾಶಿಯವರಿಗೆ ತುಂಬಾ ಶುಭಕರವಾಗಿದೆ. ಡಿಸೆಂಬರ್ 28 ರಂದು, ಬುಧವು ಧನು ರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಇದಾದ ಬಳಿಕ ಮಾರನೇ ದಿನ ಶುಕ್ರ ಕೂಡಾ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಶನಿಯು ಈಗಾಗಲೇ ಮಕರ ರಾಶಿಯಲ್ಲಿಯೇ ಇರುವುದರಿಂದ ಮೂರು ಗ್ರಹಗಳು ಒಟ್ಟಿಗೆ ಸೇರಿ ತ್ರಿಗ್ರಾಹಿ ಯೋಗ ರೂಪುಗೊಳ್ಳುತ್ತಿದೆ. 

ತ್ರಿಗ್ರಾಹಿ ಯೋಗದಿಂದ 4 ರಾಶಿಯವರ ಭವಿಷ್ಯವೇ ಬದಲಾಗಲಿದೆ : 
ಮೇಷ ರಾಶಿ : ಮಕರ ರಾಶಿಯಲ್ಲಿ ರೂಪುಗೊಳ್ಳುತ್ತಿರುವ ತ್ರಿಗ್ರಾಹಿ ಯೋಗವು ಮೇಷ ರಾಶಿಯವರಿಗೆ ಸಾಕಷ್ಟು ಲಾಭವನ್ನು ನೀಡುತ್ತದೆ. ಈ ರಾಶಿಯವರು  ತಮ್ಮ ವೃತ್ತಿಜೀವನದಲ್ಲಿ ಉತ್ತಮ ಸಾಧನೆಯನ್ನು ಮಾಡಬಹುದು. ಹೊಸ ವ್ಯಾಪಾರ ಆರಂಭಿಸಳು ಇದು ಉತ್ತಮ ಸಮಯ. ಉದ್ಯೋಗಸ್ಥರಿಗೆ ಬಡ್ತಿ ದೊರೆಯಬಹುದು. ಪೂರ್ವಿಕರ ಆಸ್ತಿಯಿಂದ ಲಾಭವಾಗಬಹುದು. ಒಟ್ಟಾರೆಯಾಗಿ, ಸಮಯವು ಎಲ್ಲಾ ರೀತಿಯಲ್ಲೂ ಅನುಕೂಲಕರವಾಗಿರುತ್ತದೆ. 

ಇದನ್ನೂ ಓದಿ :  Dream Science: ಅವಿವಾಹಿತರೇ.. ನೀವೂ ಈ ರೀತಿಯ ಕನಸು ನೋಡಿದ್ದೀರಾ ? ಹಾಗಾದ್ರೆ ಕುಣಿದು ಕುಪ್ಪಳಿಸಿ, ಕಾರಣ ಇಲ್ಲಿದೆ

ಕರ್ಕಾಟಕ ರಾಶಿ : ಶನಿ, ಬುಧ ಮತ್ತು ಶುಕ್ರರ ಸಂಯೋಗದಿಂದ ರೂಪುಗೊಳ್ಳುವ ತ್ರಿಗ್ರಾಹಿ ಯೋಗವು ಭಾರೀ ಪ್ರಬಲ ಯೋಗವಾಗಿರಲಿದೆ. ಇದು ಕರ್ಕಾಟಕ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿಯವರು ಸಂಪತ್ತಿನ ವಿಷಯದಲ್ಲಿ ದೊಡ್ಡ ಪ್ರಯೋಜನಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. ಆಸ್ತಿಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿದ್ದರೆ ತೀರ್ಪು ನಿಮ್ಮ ಪರವಾಗಿ ಬರಬಹುದು. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವುದು. ವ್ಯಾಪಾರ ಚೆನ್ನಾಗಿ ನಡೆಯಲಿದೆ. 

ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ತ್ರಿಗ್ರಾಹಿ ಯೋಗ ಕೂಡ ಶುಭ ಫಲ ನೀಡಲಿದೆ. ನೀವು ನಿರೀಕ್ಷಿಸುತ್ತಿದ್ದ ಪ್ರಗತಿಯನ್ನು ಈಗ ಸಾಧಿಸಬಹುದು. ಉದ್ಯೋಗದಲ್ಲಿ ಬಡ್ತಿ ಸಿಕ್ಕಿ ವೇತನ ಹೆಚ್ಚಳವಾಗಬಹುದು. ವಿವಾಹಿತರ ಜೀವನದಲ್ಲಿ ಸಂತೋಷ ಇರುತ್ತದೆ. 

ಇದನ್ನೂ ಓದಿ : Chanakya Niti : ಅಪ್ಪಿತಪ್ಪಿಯೂ ಯಾರೊಂದಿಗೂ ಈ ವಿಷಯ ಹಂಚಿಕೊಳ್ಳಬೇಡಿ, ಇಲ್ಲದಿದ್ದರೆ ಜೀವನವೇ ಹಾಳಾಗುತ್ತೆ
 
ಮೀನ ರಾಶಿ : ಶನಿಯ ರಾಶಿಯಲ್ಲಿ ರೂಪುಗೊಳ್ಳುವ ತ್ರಿಗ್ರಾಹಿ ಯೋಗವು ಮೀನ ರಾಶಿಯವರಿಗೆ ದಿಢೀರನೆ ಬಹಳಷ್ಟು ಹಣವನ್ನು ನೀಡಬಹುದು. ಹೊಸ ಉದ್ಯೋಗದ ಆಫರ್ ಸಿಗಬಹುದು. ಸಾಲದಿಂದ ಮುಕ್ತಿ ಸಿಗಲಿದೆ. ಜೀವನದಲ್ಲಿ ಸಂತೋಷಡ ಹೊನಲು ಹರಿಯಲಿದೆ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News