Venus Transit: 2 ದಿನಗಳ ನಂತರ ಈ ರಾಶಿಗಳ ಭವಿಷ್ಯವೇ ಬದಲಾಗಲಿದೆ, ದೊಡ್ಡ ಯಶಸ್ಸು ಸಿಗಲಿದೆ!

ಶುಕ್ರ ಗ್ರಹವು ಡಿಸೆಂಬರ್ 5ರಂದು ತನ್ನ ರಾಶಿಯನ್ನು ಬದಲಾಯಿಸಲಿದೆ. ಅದು ಈ ದಿನ ಧನು ರಾಶಿಗೆ ಪ್ರವೇಶಿಸಲಿದ್ದು, ಡಿಸೆಂಬರ್ 29ರವರೆಗೆ ಅಲ್ಲಿಯೇ ಇರಲಿದೆ. ಈ ರಾಶಿ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಯಾವ ರಾಶಿಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಅನ್ನೋದನ್ನು ತಿಳಿಯಿರಿ.

Written by - Puttaraj K Alur | Last Updated : Dec 3, 2022, 07:11 AM IST
  • ವೃಷಭ ರಾಶಿಯವರ ಹೊಸ ಆದಾಯದ ಮೂಲಗಳಿಂದ ನಿಮ್ಮ ಹಣಕಾಸಿನ ಸ್ಥಿತಿಗತಿ ಬಲಗೊಳ್ಳುತ್ತದೆ
  • ಕರ್ಕಾಟಕ ರಾಶಿಯವರು ಹೊಸ ಆಸ್ತಿ ಖರೀದಿಸುವುದು ಅಥವಾ ಮಾರಾಟ ಮಾಡುವುದನ್ನು ನಿಲ್ಲಿಸಿ
  • ತುಲಾ ರಾಶಿಯ ಯುವಕರು ಸೋಮಾರಿತನ ಬಿಟ್ಟು ಪರಿಶ್ರಮ ಪಡಬೇಕು, ಅಂದಾಗ ಮಾತ್ರ ಯಶಸ್ಸು ಸಿಗುತ್ತದೆ
Venus Transit: 2 ದಿನಗಳ ನಂತರ ಈ ರಾಶಿಗಳ ಭವಿಷ್ಯವೇ ಬದಲಾಗಲಿದೆ, ದೊಡ್ಡ ಯಶಸ್ಸು ಸಿಗಲಿದೆ! title=
ಶುಕ್ರ ಗೋಚರ 2022

ನವದೆಹಲಿ: ಜ್ಯೋತಿಷ್ಯದಲ್ಲಿ ಶುಕ್ರನನ್ನು ಮಂಗಳಕರ ಮತ್ತು ಫಲಪ್ರದ ಗ್ರಹವೆಂದು ಪರಿಗಣಿಸಲಾಗಿದೆ. ಶುಕ್ರವು ಮಂಗಳನ ರಾಶಿಯನ್ನು ಬಿಟ್ಟು ಡಿಸೆಂಬರ್ 5ರಂದು ಧನು ರಾಶಿಯನ್ನು ಪ್ರವೇಶಿಸುತ್ತದೆ, ಅದು ಡಿಸೆಂಬರ್ 29ರವರೆಗೆ ಅಲ್ಲಿಯೆ ಇರುತ್ತದೆ. ಶುಕ್ರನು ಲೌಕಿಕ ಸಂತೋಷ ಮತ್ತು ಭೌತಿಕ ಸೌಕರ್ಯಗಳಿಂದ ವ್ಯಕ್ತಿಯ ಜೀವನವನ್ನು ಬದಲಾಯಿಸುತ್ತಾನೆ. ವೈವಾಹಿಕ ಜೀವನದಲ್ಲಿ ಪ್ರೀತಿ, ಯಶಸ್ಸು ಮತ್ತು ಸಂತೋಷವನ್ನು ನೀಡುತ್ತಾನೆ.

ಮೇಷ ರಾಶಿ: ಸ್ಪಷ್ಟ ಗುರಿಯೊಂದಿಗೆ ಕೆಲಸ ಮಾಡುವುದರಿಂದ ದೊಡ್ಡ ಯಶಸ್ಸು ಸಿಗುತ್ತದೆ. ಸೌಕರ್ಯಗಳಿಂದ ಕೂಡಿದ ಆಧ್ಯಾತ್ಮಿಕ ಪ್ರಯಾಣ ಮಾಡಬಹುದು. ಶೀಘ್ರವೇ ನಿಮಗೆ ಶುಭಸುದ್ದಿ ಸಿಗಲಿದೆ.

ವೃಷಭ ರಾಶಿ: ಹೊಸ ಆದಾಯದ ಮೂಲಗಳಿಂದ ನಿಮ್ಮ ಹಣಕಾಸಿನ ಸ್ಥಿತಿಗತಿ ಬಲಗೊಳ್ಳುತ್ತದೆ. ವಾಹನ ಅಥವಾ ಯಾವುದೇ ಅಗತ್ಯ ವಸ್ತುಗಳನ್ನು ಖರೀದಿಸುವುದರಿಂದ ಭೌತಿಕ ಸಂತೋಷಗಳು ಹೆಚ್ಚಾಗುತ್ತವೆ. ನಿಮ್ಮ ಕೆಲಸ ಹಿರಿಯರ ಮೆಚ್ಚುಗೆಗೆ ಪಾತ್ರವಾಗಲಿದೆ.

ಮಿಥುನ ರಾಶಿ: ವಿದೇಶದಲ್ಲಿ ಉದ್ಯೋಗ ಅಥವಾ ಉನ್ನತ ಶಿಕ್ಷಣವನ್ನು ಬಯಸುವವರ ಆಸೆ ಈಡೇರಲಿದೆ. ನಿಮ್ಮ ಸಂಗಾತಿಯೊಂದಿಗೆ ವಿವಾದಗಳನ್ನು ಪ್ರೋತ್ಸಾಹಿಸಬೇಡಿ, ಇಲ್ಲದಿದ್ದರೆ ಸಂಬಂಧದ ಬಂಧವು ದುರ್ಬಲವಾಗಿರುತ್ತದೆ.

ಇದನ್ನೂ ಓದಿ: Sapta Dhanya Remedy: ಶನಿಯ ಸಾಡೆಸಾತಿಯಿಂದ ಮುಕ್ತಿ ಪಡೆಯಲು ಶನಿಗೆ ಇದನ್ನು ಅರ್ಪಿಸಿ

ಕರ್ಕಾಟಕ ರಾಶಿ: ಹೊಸ ಆಸ್ತಿಯನ್ನು ಖರೀದಿಸುವುದು ಅಥವಾ ಮಾರಾಟ ಮಾಡುವುದನ್ನು ನಿಲ್ಲಿಸಿ, ಇಲ್ಲದಿದ್ದರೆ ವ್ಯವಹಾರದಲ್ಲಿ ನಷ್ಟವಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಿರಲಿ.

ಸಿಂಹ ರಾಶಿ: ಹೊಸ ಜನರ ಸಂಪರ್ಕಕ್ಕೆ ಬರುವಿರಿ, ಇದರಿಂದ ವಿವಿಧ ಕ್ಷೇತ್ರಗಳಿಂದ ಲಾಭವನ್ನು ನಿರೀಕ್ಷಿಸಲಾಗಿದೆ. ವ್ಯಾಪಾರಕ್ಕೆ ಸಂಬಂಧಿಸಿದ ಜನರು ಪ್ರಗತಿಯನ್ನು ಪಡೆಯಬಹುದು. ಪಾಲುದಾರರೊಂದಿಗೆ ಒತ್ತಡದ ಪರಿಸ್ಥಿತಿಯನ್ನು ತಪ್ಪಿಸಿ.

ಕನ್ಯಾ ರಾಶಿ: ರಿಯಲ್ ಎಸ್ಟೇಟ್ ಅಥವಾ ಆಸ್ತಿಯಲ್ಲಿನ ಹೂಡಿಕೆಯು ನಿರೀಕ್ಷಿತ ಲಾಭವನ್ನು ತರುತ್ತದೆ, ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ. ಬಾಸ್ ನಿಮ್ಮ ಕೆಲಸದಿಂದ ಸಂತೋಷವಾಗಿರುತ್ತಾರೆ.

ತುಲಾ ರಾಶಿ: ಯುವಕರು ಸೋಮಾರಿತನ ಬಿಟ್ಟು ಪರಿಶ್ರಮ ಪಡಬೇಕು, ಅಂದಾಗ ಮಾತ್ರ ಯಶಸ್ಸು ಸಿಗುತ್ತದೆ. ಮಧುಮೇಹ ಅಥವಾ ರಕ್ತದೊತ್ತಡ ರೋಗಿಗಳು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕು.

ಇದನ್ನೂ ಓದಿ: Horoscope Today: ಈ ರಾಶಿಯವರಿಗೆ ಉದ್ಯೋಗದಲ್ಲಿ ಯಶಸ್ಸಿನ ಜೊತೆಗೆ ಧನಲಾಭವಾಗಲಿದೆ

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಶಕ್ತಿಯಿಂದ ಸಮಾಜದಲ್ಲಿ ಹೊಸ ಗುರುತು ಸೃಷ್ಟಿಯಾಗಲಿದೆ. ಸ್ನೇಹಿತರೊಂದಿಗೆ ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡಲು ನೀವು ಪ್ರಸ್ತಾಪವನ್ನು ಪಡೆಯಬಹುದು.

ಧನು ರಾಶಿ: ಕರಿದ-ಹುರಿದ ಆಹಾರ ಸೇವಿಸುವುದನ್ನು ತಪ್ಪಿಸಿ, ಇಲ್ಲದಿದ್ದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಸಹೋದ್ಯೋಗಿಗಳೊಂದಿಗೆ ಜಾಗರೂಕರಾಗಿರಿ, ಅವರ ಸ್ವಭಾವದಲ್ಲಿ ಕಠಿಣತೆ ಇರುತ್ತದೆ.

ಮಕರ ರಾಶಿ: ವಿದ್ಯಾರ್ಥಿಗಳು ತಮ್ಮ ಪ್ರಯತ್ನಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ, ಜೊತೆಗೆ ಮುಂಬರುವ ಸಮಯವು ಬಹಳ ಫಲಪ್ರದವಾಗಿದೆ ಎಂದು ಸಾಬೀತುಪಡಿಸುತ್ತದೆ. ಉನ್ನತ ಶಿಕ್ಷಣ ಮತ್ತು ಬಹುರಾಷ್ಟ್ರೀಯ ಕಂಪನಿಗೆ ಸಂಬಂಧಿಸಿದಂತೆ ನೀವು ವಿದೇಶಕ್ಕೆ ಹೋಗಬಹುದು.

ಕುಂಭ ರಾಶಿ: ವ್ಯಾಪಾರಸ್ಥರು ಸಾಲವಾಗಿ ಕೊಟ್ಟ ಹಣವನ್ನು ವಾಪಸ್ ಪಡೆಯಲಿದ್ದಾರೆ. ಹಠಾತ್ ಧನಲಾಭವಾಗುವ ಸಾಧ‍್ಯತೆ ಇದೆ. ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಪ್ರಭಾವಶಾಲಿಯಾಗಿ ಬೆಳೆಯುತ್ತೀರಿ. ಇದರ ಮೂಲಕ ನೀವು ಜನರೊಂದಿಗೆ ಸಂಪರ್ಕಕ್ಕೆ ಬರುತ್ತೀರಿ.

ಮೀನ ರಾಶಿ: ನೀವು ಹಲವಾರು ಸವಾಲುಗಳನ್ನು ಎದುರಿಸಬೇಕಾಗುವುದು, ಅವು ಫಲಪ್ರದವೂ ಆಗುವುದು. ವ್ಯಾಪಾರ ವಿಸ್ತರಣೆಯ ಕ್ರಮಗಳು ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು. ನಿಮ್ಮ ಭಾಷಾ ಶೈಲಿ ಬದಲಾಗಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News