ಇನ್ನು ಈ ನಾಲ್ಕು ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ! ಹೋದಲೆಲ್ಲಾ ಯಶಸ್ಸು ನೀಡುತ್ತಾರೆ ಗುರು ಮತ್ತು ಶುಕ್ರ

ಗುರು ಮತ್ತು ಶುಕ್ರರ ಈ ಸ್ಥಿತಿಯು  4 ರಾಶಿಯವರ ಜೀವನದ ಮೇಲೆ ಅಪಾರ ಪರಿಣಾಮ ಬೀರುತ್ತದೆ. ಇದರಿಂದಾಗಿ ಅವರ ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ ಕಂಡು ಬರುತ್ತದೆ. 

Written by - Ranjitha R K | Last Updated : Mar 10, 2023, 03:39 PM IST
  • ದೇವಗುರು ಗುರು ಮತ್ತು ಶುಕ್ರ ಈಗಷ್ಟೇ ಯೌವನದ ಹಂತವನ್ನು ಪ್ರವೇಶ
  • 4 ರಾಶಿಯವರ ಜೀವನದ ಮೇಲೆ ಅಪಾರ ಪರಿಣಾಮ
  • ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ ಕಂಡು ಬರುತ್ತದೆ.
ಇನ್ನು ಈ ನಾಲ್ಕು ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ! ಹೋದಲೆಲ್ಲಾ ಯಶಸ್ಸು ನೀಡುತ್ತಾರೆ ಗುರು ಮತ್ತು ಶುಕ್ರ   title=

ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ತಮ್ಮ ಚಲನೆಯ ಮೂಲಕ ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ಈ ಗ್ರಹಗಳು ಕುಮಾರ, ಯೌವನ ಮತ್ತು ವೃದ್ಧಾಪ್ಯ ಹೀಗೆ ಬೇರೆ ಬೇರೆ ಅವಸ್ಥೆಯಲ್ಲಿ ಸಾಗುತ್ತವೆ. ಗ್ರಹಗಳ ಈ ಸ್ಥಿತಿ ಮನುಕುಲದ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮ ಬೀರುತ್ತದೆ. ದೇವಗುರು ಗುರು ಮತ್ತು ಶುಕ್ರ ಈಗಷ್ಟೇ ಯೌವನದ ಹಂತವನ್ನು ಪ್ರವೇಶಿಸಿದ್ದಾರೆ. ಗುರು ಮತ್ತು ಶುಕ್ರರ ಈ ಸ್ಥಿತಿಯು  4 ರಾಶಿಯವರ ಜೀವನದ ಮೇಲೆ ಅಪಾರ ಪರಿಣಾಮ ಬೀರುತ್ತದೆ. ಇದರಿಂದಾಗಿ ಅವರ ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ ಕಂಡು ಬರುತ್ತದೆ.  

ವೃಷಭ ರಾಶಿ :
ಗುರು ಮತ್ತು ಶುಕ್ರನ ಚಲನೆಯು ವೃಷಭ ರಾಶಿಯವರಿಗೆ ಲಾಭದಾಯಕವಾಗಿರಲಿದೆ. ಈ ಸಮಯದಲ್ಲಿ, ಈ ರಾಶಿಯವರು ತಾವು ಕೈ ಹಾಕುವ ಎಲ್ಲಾ ಕೆಲಸದಲ್ಲಿಯೂ ಯಶಸ್ಸು ಕಾಣುತ್ತಾರೆ. ವಿದೇಶದಲ್ಲಿ ವ್ಯಾಪಾರ ಮಾಡುವವರು ಭಾರೀ ಲಾಭವನ್ನು ಗಳಿಸುತ್ತಾರೆ. ಇದರಿಂದಾಗಿ ಬಹಳಷ್ಟು ಹಣ ಗಳಿಸುವುದು ಕೂಡಾ ಸಾಧ್ಯವಾಗುತ್ತದೆ. 

ಇದನ್ನೂ ಓದಿ : Surya Gochar 2023 : ಸೂರ್ಯ ಗೋಚರದಿಂದ ಈ 5 ರಾಶಿಯವರಿಗೆ ಭಾರಿ ಆರ್ಥಿಕ ಲಾಭದ ಜೊತೆಗೆ, ಶ್ರೀಮಂತಿಕೆ ಭಾಗ್ಯ!

ಧನು ರಾಶಿ : 
ಗುರು ಮತ್ತು ಶುಕ್ರ ಸಂಚಾರವು ಧನು ರಾಶಿಯವರಿಗೆ ಒಳ್ಳೆಯ ಸುದ್ದಿ ನೀಡಲಿದೆ. ಕುಟುಂಬ ಸದಸ್ಯರ ಸಹಕಾರ ಸಿಗಲಿದೆ. ವಿಶೇಷವಾಗಿ ಸಹೋದರ ಸಹೋದರಿಯರೂ ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ. ಸಾಮಾಜಿಕ ಗೌರವ ಹೆಚ್ಚಾಗುವುದು ಮತ್ತು ದೈಹಿಕ ಸಂತೋಷದ ಸಾಧನಗಳು ಹೆಚ್ಚಾಗುವುದು.

ಕಟಕ ರಾಶಿ :
ಎರಡೂ ಗ್ರಹಗಳ ಚಲನೆಯು ಕರ್ಕಾಟಕ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ. ಸೌಕರ್ಯಗಳಲ್ಲಿ ಹೆಚ್ಚಳವಾಗಲಿದೆ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಇರುತ್ತದೆ. ಹಠಾತ್ ಧನಲಾಭವಾಗಲಿದೆ. ಇದರಿಂದಾಗಿ ಆರ್ಥಿಕ ಬಿಕ್ಕಟ್ಟಿನ ಸಮಸ್ಯೆಯಿಂದ ಪರಿಹಾರ ಸಿಗಲಿದೆ.

ಇದನ್ನೂ ಓದಿ : Shani Nakshatra Gochar 2023: ಶತಭಿಷಾ ನಕ್ಷತ್ರದಲ್ಲಿ ಶನಿಯ ಭ್ರಮಣೆ, ಈ ರಾಶಿಗಳ ಜನರು ಎಚ್ಚರಿಕೆಯಿಂದಿರಬೇಕು.. ಇಲ್ದಿದ್ರೆ!

ಮೀನ ರಾಶಿ :
ಗುರು ಮತ್ತು ಶುಕ್ರರ ಸಂಚಾರವು ಮೀನ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿಯವರ ಜಾತಕದಲ್ಲಿ, ಗುರುವು ಹಂಸ ರಾಜಯೋಗವನ್ನು ಸೃಷ್ಟಿಸಿದ್ದು, ಶುಕ್ರನು ಮಾಳವ್ಯ ರಾಜಯೋಗವನ್ನೂ ಸೃಷ್ಟಿಸಿದ್ದಾನೆ. ಇದರೊಂದಿಗೆ ಪ್ರತಿಯೊಂದು ಕೆಲಸ ಮತ್ತು ವ್ಯವಹಾರದಲ್ಲಿ ಯಶಸ್ಸುಸಿಗಲಿದೆ. ವ್ಯಾಪಾರಸ್ಥರಿಗೆ ಲಾಭವಾಗುವುದು.  ಆದಾಯದಲ್ಲಿ ಹೆಚ್ಚಳವಾಗುವುದು. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News