Maa Lakshmi Favorite Zodiac Signs: ತಾಯಿ ಲಕ್ಷ್ಮಿದೇವಿಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮಿದೇವಿ ದಯೆ ತೋರುವ ವ್ಯಕ್ತಿಗೆ ಜೀವನದಲ್ಲಿ ಯಾವುದರ ಕೊರತೆಯೂ ಕಾಡುವುದಿಲ್ಲ. ಆತನ ಕುಟುಂಬವು ಸಂತೋಷ ಮತ್ತು ಸಮೃದ್ಧಿಯಿಂದ ಇರುತ್ತದೆ.
ತಾಯಿ ಲಕ್ಷ್ಮಿದೇವಿಯ ಮೆಚ್ಚಿನ ರಾಶಿಗಳು: ತಾಯಿ ಲಕ್ಷ್ಮಿದೇವಿಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮಿದೇವಿ ದಯೆ ತೋರುವ ವ್ಯಕ್ತಿಗೆ ಜೀವನದಲ್ಲಿ ಯಾವುದರ ಕೊರತೆಯೂ ಕಾಡುವುದಿಲ್ಲ. ಆತನ ಕುಟುಂಬವು ಸಂತೋಷ ಮತ್ತು ಸಮೃದ್ಧಿಯಿಂದ ಇರುತ್ತದೆ. ಆದರೆ ಪ್ರತಿಯೊಬ್ಬರೂ ತಾಯಿಯ ಅನುಗ್ರಹವನ್ನು ಪಡೆಯುವುದಿಲ್ಲ. ಈ ಕಾರಣಕ್ಕಾಗಿಯೇ ಜನರು ಲಕ್ಷ್ಮಿದೇವಿ ಆಶೀರ್ವಾದ ಪಡೆಯಲು ವಿವಿಧ ರೀತಿಯಲ್ಲಿ ಪೂಜಿಸುತ್ತಾರೆ. ಆದರೆ ಕೆಲವು ರಾಶಿಗಳಿಗೆ ಯಾವಾಗಲೂ ತಾಯಿಯ ಆಶೀರ್ವಾದವಿರುತ್ತದೆ. ಈ ರಾಶಿಗಳನ್ನು ತಾಯಿಗೆ ತುಂಬಾ ಪ್ರಿಯವೆಂದು ಪರಿಗಣಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಶುಕ್ರನು ವೃಷಭ ರಾಶಿಯ ಅಧಿಪತಿಯಾಗಿದ್ದು, ಈ ಗ್ರಹವನ್ನು ಸಂತೋಷ-ಸಮೃದ್ಧಿ ಮತ್ತು ಸಂಪತ್ತು-ಧಾನ್ಯಗಳ ಸಂಕೇತವೆಂದು ಪರಿಗಣಿಸಲಾಗಿದೆ. ಈ ರಾಶಿಯ ಜನರು ತಾಯಿ ಲಕ್ಷ್ಮಿದೇವಿಗೆ ತುಂಬಾ ಪ್ರಿಯರು. ಇವರು ಜೀವನದಲ್ಲಿ ಎಂದಿಗೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವುದಿಲ್ಲ. ವೃಷಭ ರಾಶಿಯವರಿಗೆ ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ಸದಾ ಇರುತ್ತದೆ.
ಸೂರ್ಯ ದೇವರನ್ನು ಸಿಂಹ ರಾಶಿಯ ಗುರು ಎಂದು ಪರಿಗಣಿಸಲಾಗುತ್ತದೆ. ಸೂರ್ಯದೇವನು ಎಲ್ಲಾ ಗ್ರಹಗಳ ರಾಜ. ಇವರ ತೀಕ್ಷ್ಣತೆ, ಉತ್ಸಾಹ ಮತ್ತು ನಿರ್ಣಯದ ಪರಿಣಾಮವು ಸಿಂಹ ರಾಶಿಯ ಜನರಲ್ಲೂ ಸಹ ಉತ್ತಮವಾಗಿರುತ್ತದೆ. ಇಂತಹವರಿಗೆ ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ಸುರಿಮಳೆಯಾಗುತ್ತದೆ. ಈ ರಾಶಿಯವರು ತಮ್ಮ ಕಠಿಣ ಪರಿಶ್ರಮದ ಬಲದಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುತ್ತಾರೆ. ಇವರ ಆರ್ಥಿಕ ಸ್ಥಿತಿ ತುಂಬಾ ಪ್ರಬಲವಾಗಿರುತ್ತದೆ.
ತುಲಾ ರಾಶಿಯ ಅಧಿಪತಿಯೂ ಶುಕ್ರನೇ. ತಾಯಿ ಲಕ್ಷ್ಮಿದೇವಿಯ ಆಶೀರ್ವಾದದಿಂದ ಈ ರಾಶಿಯ ಜನರ ಜೀವನ ನಾಗಾಲೋಟದಲ್ಲಿ ಸಾಗುತ್ತದೆ. ಈ ರಾಶಿಯವರು ಎಂದಿಗೂ ಯಾವುದೇ ರೀತಿಯ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ. ಈ ಜನರು ತಾಯಿ ಲಕ್ಷ್ಮಿದೇವಿಯ ಅನುಗ್ರಹದಿಂದ ಯಾವಾಗಲೂ ಸಂತೋಷವನ್ನು ಅನುಭವಿಸುತ್ತಾರೆ.
ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಮಂಗಳವನ್ನು ಗ್ರಹಗಳ ಕಮಾಂಡರ್ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಶೌರ್ಯ, ಶಕ್ತಿ, ಧೈರ್ಯ ಮತ್ತು ಶಕ್ತಿಯ ಅಂಶವೆಂದು ಹೇಳಲಾಗುತ್ತದೆ. ಈ ರಾಶಿಯವರಿಗೆ ಲಕ್ಷ್ಮಿದೇವಿಯ ಆಶೀರ್ವಾದ ದೊರೆಯುತ್ತದೆ. ಇವರು ಉದ್ಯೋಗ-ವ್ಯವಹಾರದಲ್ಲಿ ಯಶಸ್ಸಿನ ಉತ್ತುಂಗವನ್ನು ಮುಟ್ಟುತ್ತಾರೆ.
ಮೀನವು ಲಕ್ಷ್ಮಿದೇವಿಯ ನೆಚ್ಚಿನ ರಾಶಿಗಳಲ್ಲಿ ಒಂದಾಗಿದೆ. ಈ ರಾಶಿಯ ಜನರು ಎಂದಿಗೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಿಲ್ಲ. ತಾಯಿ ಲಕ್ಷ್ಮಿದೇವಿಯ ಆಶೀರ್ವಾದವು ಈ ಜನರೊಂದಿಗೆ ಯಾವಾಗಲೂ ಇರುತ್ತದೆ. ತಾಯಿಯ ಕೃಪೆಯಿಂದ ಈ ಜನರ ಜೇಬು ಯಾವಾಗಲೂ ಹಣದಿಂದ ತುಂಬಿರುತ್ತವೆ.