ಟೋಕಿಯೊ ಪ್ಯಾರಾಲಿಂಪಿಕ್ ನಲ್ಲಿ 19 ಪದಕಗಳನ್ನು ಪಡೆಯುವ ಮೂಲಕ ಭಾರತೀಯ ತಂಡವು ಕ್ರೀಡಾಕೂಟದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಹಿನ್ನಲೆಯಲ್ಲಿ ಈ ಸಾಧನೆ ಭಾರತದ ಕ್ರೀಡಾ ಇತಿಹಾಸದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುತ್ತದೆ ಎಂದು ಪ್ರಧಾನಿ ಮೋದಿ ಪ್ರಶಂಸೆ ವ್ಯಕ್ತಪಡಿಸಿದರು.
ಭಾರತದ ಮನೋಜ್ ಸರ್ಕಾರ್ ಜಪಾನ್ನ ಡೈಸುಕೆ ಫುಜಿಹರಾ ಅವರನ್ನು ಸೋಲಿಸಿ, ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್ಎಲ್ 3 ಸ್ಪರ್ಧೆಯಲ್ಲಿ ಕಂಚು ಗೆದ್ದಿದ್ದಾರೆ.
ಶುಕ್ರವಾರದಂದು ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಪುರುಷರ ವೈಯಕ್ತಿಕ ರಿಕರ್ವ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಬಿಲ್ಲುಗಾರ ಹರ್ವಿಂದರ್ ಸಿಂಗ್ ಇತಿಹಾಸವನ್ನು ಸೃಷ್ಟಿಸಿದ್ದಾರೆ.
Tokyo Paralympics: ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಪುರುಷರ ಎತ್ತರ ಜಿಗಿತದಲ್ಲಿ (ಟಿ 64) ಭಾರತೀಯ ಆಟಗಾರ ಪ್ರವೀಣ್ ಕುಮಾರ್ (ಕ್ರೀಡಾ ವಿಭಾಗ ಟಿ 44) ಬೆಳ್ಳಿ ಪದಕ ಗೆದ್ದಿದ್ದಾರೆ. ಪ್ರವೀಣ್ 2.07 ಮೀಟರ್ ಹೈ ಜಂಪ್ ಮೂಲಕ ಬೆಳ್ಳಿ ಪದಕ ಗೆದ್ದರು. ಈ ಜಂಪ್ನೊಂದಿಗೆ, ಪ್ರವೀಣ್ ಅವರ ಹೆಸರಿನಲ್ಲಿ ಹೊಸ ಏಷ್ಯನ್ ದಾಖಲೆಯನ್ನು ಸಹ ಮಾಡಿದರು.
ಸುಮಿತ್ ಆಂಟಿಲ್ ಪುರುಷರ ಜಾವೆಲಿನ್ ಎಫ್ 64 ತರಗತಿಯ ಫೈನಲ್ ಗೆದ್ದ ನಂತರ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ.
ಅವರು ಜಾವೆಲಿನ್ ನಲ್ಲಿ 68.85 ಮೀ ಎಸೆದು ಹೊಸ ವಿಶ್ವದಾಖಲೆಯನ್ನು ಸೃಷ್ಟಿಸಿದ್ದಾರೆ.
ಅಹಮದಾಬಾದ್ನ ಭಾವಿನಾ ಪಟೇಲ್, (Bhavina Patel) 2016 ರಿಯೊ ಪ್ಯಾರಾಲಿಂಪಿಕ್ (Paralympics) ಚಿನ್ನದ ಪದಕ ವಿಜೇತ ಸೆರ್ಬಿಯಾದ ಬೋರಿಸ್ಲಾವಾ ಪೆರಿಚ್ ರಾಂಕೋವಿಚ್ ಅವರನ್ನು ನೇರ ಗೇಮ್ಗಳಲ್ಲಿ 3-0 ಅಂತರದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.