Tokyo Paralympics: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನ, ಹೈಜಂಪ್‌ನಲ್ಲಿ ಬೆಳ್ಳಿ ಗೆದ್ದ ಪ್ರವೀಣ್ ಕುಮಾರ್

Tokyo Paralympics: ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಪುರುಷರ ಎತ್ತರ ಜಿಗಿತದಲ್ಲಿ (ಟಿ 64) ಭಾರತೀಯ ಆಟಗಾರ ಪ್ರವೀಣ್ ಕುಮಾರ್ (ಕ್ರೀಡಾ ವಿಭಾಗ ಟಿ 44) ಬೆಳ್ಳಿ ಪದಕ ಗೆದ್ದಿದ್ದಾರೆ. ಪ್ರವೀಣ್ 2.07 ಮೀಟರ್ ಹೈ ಜಂಪ್ ಮೂಲಕ ಬೆಳ್ಳಿ ಪದಕ ಗೆದ್ದರು. ಈ ಜಂಪ್‌ನೊಂದಿಗೆ, ಪ್ರವೀಣ್ ಅವರ ಹೆಸರಿನಲ್ಲಿ ಹೊಸ ಏಷ್ಯನ್ ದಾಖಲೆಯನ್ನು ಸಹ ಮಾಡಿದರು.

Written by - Yashaswini V | Last Updated : Sep 3, 2021, 10:49 AM IST
  • ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನ
  • ಟ್ವೀಟ್ ಮೂಲಕ್ ಪ್ರಧಾನಿ ಮೋದಿ ಅಭಿನಂದನೆ
  • ಪ್ಯಾರಾಲಿಂಪಿಕ್ಸ್‌ನಲ್ಲಿ ಪ್ರವೀಣ್ ಕುಮಾರ್ ತಮ್ಮ ಶಕ್ತಿಯನ್ನು ತೋರಿಸಿದರು
Tokyo Paralympics: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನ, ಹೈಜಂಪ್‌ನಲ್ಲಿ ಬೆಳ್ಳಿ ಗೆದ್ದ ಪ್ರವೀಣ್ ಕುಮಾರ್ title=
Tokyo Paralympics: Praveen Kumar won silver in high jump

ಟೋಕಿಯೊ: ಭಾರತೀಯ ಆಟಗಾರ ಪ್ರವೀಣ್ ಕುಮಾರ್ (Praveen Kumar) (ಕ್ರೀಡಾ ವಿಭಾಗ ಟಿ 44) ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಎತ್ತರ ಜಿಗಿತದಲ್ಲಿ (ಟಿ 64) ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ. ಪ್ರವೀಣ್ 2.07 ಮೀಟರ್ ಹೈ ಜಂಪ್‌ನಲ್ಲಿ ಬೆಳ್ಳಿ ಪದಕ ಪಡೆದರು. ಇದರೊಂದಿಗೆ ಪ್ರವೀಣ್ ಅವರ ಹೆಸರಿನಲ್ಲಿ ಹೊಸ ಏಷ್ಯನ್ ದಾಖಲೆಯನ್ನು ಸಹ ಮಾಡಿದರು. ಪಂದ್ಯದುದ್ದಕ್ಕೂ ಪ್ರವೀಣ್ ಅತ್ಯುತ್ತಮ ಲಯದಲ್ಲಿ ಕಾಣಿಸಿಕೊಂಡರು, ಆದರೆ ಕೊನೆಯ ಕ್ಷಣಗಳಲ್ಲಿ ಪೋಲೆಂಡ್ ಆಟಗಾರ ಜೊನಾಥನ್ ಅವರು ಪ್ರವೀಣ್ ಕುಮಾರ್ ಅವರನ್ನು ಸೋಲಿಸಿ 2.10 ಮೀಟರ್ ಜಿಗಿಯುವ ಮೂಲಕ ಚಿನ್ನವನ್ನು ಪಡೆದರು. ಇದು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ 11 ನೇ ಪದಕವಾಗಿದೆ.

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನ:
ಇದು ಪ್ಯಾರಾಲಿಂಪಿಕ್ಸ್‌ನಲ್ಲಿ (Tokyo Paralympics) ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ ಮತ್ತು ಹಲವು ವರ್ಷಗಳ ನಂತರ ದೇಶದ ಪದಕಗಳ ಸಂಖ್ಯೆ ಎರಡು ಅಂಕಿಗಳನ್ನು ತಲುಪಿದೆ. ಟೋಕಿಯೊ ಕ್ರೀಡಾಕೂಟದ ಹೈ ಜಂಪ್‌ನಲ್ಲಿ ಭಾರತವು 4 ಪದಕಗಳನ್ನು ಪಡೆದುಕೊಂಡಿದೆ.  ಇದಕ್ಕೂ ಮೊದಲು ಭಾರತದ ಮರಿಯಪ್ಪನ್ ತಂಗವೇಲು ಹೈಜಂಪ್ ಟಿ 63 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರೆ, ಶರದ್ ಕುಮಾರ್ ಕಂಚು ಪಡೆದರು. ನಿಶಾದ್ ಕುಮಾರ್ T47 ನಲ್ಲಿ ಏಷ್ಯನ್ ದಾಖಲೆಯೊಂದಿಗೆ ಬೆಳ್ಳಿ ಪದಕ ಗೆದ್ದರು. 

ಇದನ್ನೂ ಓದಿ- IND vs ENG 4th Test: ಟೀಮ್ ಇಂಡಿಯಾದ ಪ್ರಚಂಡ ಕಮ್ ಬ್ಯಾಕ್, ಇಂಗ್ಲೆಂಡ್ ನ ಮೂರು ವಿಕೆಟ್ ಪತನ

ಟ್ವೀಟ್ ಮೂಲಕ್ ಪ್ರಧಾನಿ ಮೋದಿ ಅಭಿನಂದನೆ: 
ಪ್ರವೀಣ್ ಕುಮಾರ್ (Praveen Kumar) ಅವರ ಈ ಅದ್ಭುತ ಸಾಧನೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, 'ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಪ್ರವೀಣ್ ಕುಮಾರ್ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇವೆ. ಈ ಪದಕವು ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಫಲಿತಾಂಶವಾಗಿದೆ. ಅನೇಕ ಅಭಿನಂದನೆಗಳು ಎಂದು ಬರೆದಿದ್ದಾರೆ.

ಇದನ್ನೂ ಓದಿ- Richest Indian Cricketer: ವಿರಾಟ್,ಧೋನಿ ಅಲ್ಲ ಈ ಕ್ರಿಕೆಟಿಗ ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟಿಗ, ಒಂದೂ ಅಂತಾರಾಷ್ಟ್ರೀಯ ಪಂದ್ಯ ಆಡಿಲ್ಲ

ಪ್ರವೀಣ್ ಕುಮಾರ್ ತಮ್ಮ ಶಕ್ತಿಯನ್ನು ತೋರಿಸಿದರು:
ಫೈನಲ್ ಪಂದ್ಯದಲ್ಲಿ ಪ್ರವೀಣ್ ಪೋಲೆಂಡ್ ಆಟಗಾರ ಜಿಬಿಆರ್ ಜೊನಾಥನ್ ಅವರಿಂದ ಕಠಿಣ ಸ್ಪರ್ಧೆಯನ್ನು ಪಡೆದರು ಮತ್ತು ಚಿನ್ನಕ್ಕಾಗಿ ಇಬ್ಬರ ನಡುವೆ ಕಠಿಣ ಹೋರಾಟ ನಡೆಯಿತು. ಪ್ರವೀಣ್ ಪೋಲೆಂಡ್ ನ ಈ ಆಟಗಾರನಿಗೆ ಕಠಿಣ ಹೋರಾಟ ನೀಡುತ್ತಿದ್ದರು, ಆದರೆ ಜೋನಾಥನ್ ಅವರ 2.10 ಮೀಟರ್ ಲಾಂಗ್ ಜಂಪ್ ಅನ್ನು ಹೊಂದಲು ಸಾಧ್ಯವಾಗಲಿಲ್ಲ ಮತ್ತು ಬೆಳ್ಳಿಗೆ ತೃಪ್ತಿಪಡಬೇಕಾಯಿತು. ಹೈಜಂಪ್‌ನಲ್ಲಿ ಭಾರತಕ್ಕೆ ಇದು ಮೂರನೇ ಪದಕವಾಗಿದೆ. ಈ ಮೊದಲು ಮರಿಯಪ್ಪನ್ ತಂಗವೇಲು ಮತ್ತು ಶರದ್ ಕುಮಾರ್ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದರು. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವು ಇದುವರೆಗೆ 2 ಚಿನ್ನ, 6 ಬೆಳ್ಳಿ ಮತ್ತು 3 ಕಂಚಿನೊಂದಿಗೆ ಒಟ್ಟು 11 ಪದಕಗಳನ್ನು ಗೆದ್ದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News