Tokyo Paralympics: ಕಂಚಿನ ಪದಕ ಕಳೆದುಕೊಂಡ ವಿನೋದ್ ಕುಮಾರ್

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಡಿಸ್ಕಸ್ ಥ್ರೋ ಫೈನಲ್ ಎಫ್ 52 ನಲ್ಲಿ ಕಂಚಿನ ಪದಕ ಗೆದ್ದಿದ್ದ ವಿನೋದ್ ಕುಮಾರ್ ಸೋಮವಾರದಂದು ಪದಕ ಕಳೆದುಕೊಂಡಿದ್ದಾರೆ.

Written by - Zee Kannada News Desk | Last Updated : Aug 30, 2021, 04:57 PM IST
  • ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಡಿಸ್ಕಸ್ ಥ್ರೋ ಫೈನಲ್ ಎಫ್ 52 ನಲ್ಲಿ ಕಂಚಿನ ಪದಕ ಗೆದ್ದಿದ್ದ ವಿನೋದ್ ಕುಮಾರ್ ಸೋಮವಾರದಂದು ಪದಕ ಕಳೆದುಕೊಂಡಿದ್ದಾರೆ.
Tokyo Paralympics: ಕಂಚಿನ ಪದಕ ಕಳೆದುಕೊಂಡ ವಿನೋದ್ ಕುಮಾರ್  title=
Photo Courtesy: Twitter

ನವದೆಹಲಿ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಡಿಸ್ಕಸ್ ಥ್ರೋ ಫೈನಲ್ ಎಫ್ 52 ನಲ್ಲಿ ಕಂಚಿನ ಪದಕ ಗೆದ್ದಿದ್ದ ವಿನೋದ್ ಕುಮಾರ್ ಸೋಮವಾರದಂದು ಪದಕ ಕಳೆದುಕೊಂಡಿದ್ದಾರೆ.

ಟೋಕಿಯೊ ಪ್ಯಾರಾಲಿಂಪಿಕ್ಸ್ ತಾಂತ್ರಿಕ ಪ್ರತಿನಿಧಿಗಳು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ, ಅವರು ಭಾರತೀಯ ಪ್ಯಾರಾ ಅಥ್ಲೀಟ್ ಡಿಸ್ಕಸ್ ಎಫ್ 52 ತರಗತಿಗೆ ಅರ್ಹರಲ್ಲ ಎಂದು ಹೇಳಿದ್ದಾರೆ.ವರ್ಗೀಕರಣ ಸಮಿತಿಯ ಮರು ಮೌಲ್ಯಮಾಪನದ ನಂತರ, ಕ್ರೀಡಾಪಟು ವಿನೋದ್ ಕುಮಾರ್ (Vinod Kumar) ಪುರುಷರ ಎಫ್ 52 ಡಿಸ್ಕಸ್ ಪದಕ ಸ್ಪರ್ಧೆಗೆ ಅನರ್ಹರು ಮತ್ತು ಆ ಸ್ಪರ್ಧೆಯಲ್ಲಿ ಅವರ ಫಲಿತಾಂಶಗಳು ಅನೂರ್ಜಿತವಾಗಿದೆ.

ವಿನೋದ್ 19.91 ಮೀ.ದಾಖಲಿಸಿದ ನಂತರ ಕಂಚಿನ ಪದಕ ಪಡೆದರು.ಅವರು ಪೋಲೆಂಡ್‌ನ ಪಿಯೊಟರ್ ಕೊಸೆವಿಚ್ (20.02 ಮೀ) ಮತ್ತು ಕ್ರೊಯೇಷಿಯಾದ ವೆಲಿಮಿರ್ ಸ್ಯಾಂಡರ್ (19.98 ಮೀ) ನಂತರದ ಸ್ಥಾನ ಪಡೆದರು.

ಇದನ್ನೂ ಓದಿ: Tokyo Paralympics: ಡಿಸ್ಕಸ್ ಥ್ರೋ ನಲ್ಲಿ ವಿನೋದ್ ಕುಮಾರ್ ಗೆ ಕಂಚು

ಪಿಟಿಐಯ ವರದಿಯ ಪ್ರಕಾರ, F52 ರಲ್ಲಿ ದುರ್ಬಲಗೊಂಡ ಸ್ನಾಯು ಶಕ್ತಿ, ನಿರ್ಬಂಧಿತ ಚಲನೆಯ ವ್ಯಾಪ್ತಿ, ಅಂಗಗಳ ಕೊರತೆ ಅಥವಾ ಕಾಲಿನ ಉದ್ದ ವ್ಯತ್ಯಾಸ ಹೊಂದಿರುವ ಕ್ರೀಡಾಪಟುಗಳಿಗೆ, ಆಗಸ್ಟ್ 22 ರಂದು ಆಯೋಜಕರು ಪರೀಕ್ಷೆ ಮಾಡಿದ್ದರು.

ಈ ದಿನದ ಮುಂಚೆ, ಶೂಟರ್ ಅವನಿ ಲೇಖಾರ ಪ್ಯಾರಾಲಿಂಪಿಕ್ಸ್ (Tokyo Paralympics) ಚಿನ್ನದ ಪದಕ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಇತಿಹಾಸವನ್ನು ಸೃಷ್ಟಿಸಿದರು.ಚೀನಾದ ಜಾಂಗ್ ಕುಪಿಂಗ್ (ಬೆಳ್ಳಿ) ಮತ್ತು ಉಕ್ರೇನ್‌ನ ಇರಿನಾ ಶ್ಚೆಟ್ನಿಕ್ (ಕಂಚು) ಅವರನ್ನು ಸೋಲಿಸಿ ಅವನಿ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ SH1 ಪ್ರಶಸ್ತಿಯನ್ನು ಗೆದ್ದರು.

ಟೋಕಿಯೊದಲ್ಲಿ ಚಿನ್ನದ ಪದಕ ವಿಜೇತ ಪ್ರದರ್ಶನದೊಂದಿಗೆ ಮಹಿಳಾ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್ 1 ವಿಭಾಗವನ್ನು ಗೆಲ್ಲಲು ಅವನಿ ಪ್ರಸ್ತುತ ವಿಶ್ವ ದಾಖಲೆಯನ್ನು ಸರಿಗಟ್ಟಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News