ನವದೆಹಲಿ: ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಪುರುಷರ ಡಿಸ್ಕಸ್ ಥ್ರೋ ಎಫ್ 52 ಫೈನಲ್ ನಲ್ಲಿ 42 ವರ್ಷದ ವಿನೋದ್ ಕುಮಾರ್ ಅವರು ಕಂಚಿನ ಪದವನ್ನು ಗೆದ್ದಿದ್ದಾರೆ.
ಆ ಮೂಲಕ ಭಾರತಕ್ಕೆ ಈಗ ಟೋಕಿಯೊ ಪ್ಯಾರಾಲಿಂಪಿಕ್ಸ್ (Tokyo Paralympics) ನಲ್ಲಿ ಮೂರನೇ ಪದಕ ಲಭಿಸಿದಂತಾಗಿದೆ. ವಿನೋದ್ ಅವರ ಅತ್ಯುತ್ತಮ ಪ್ರಯತ್ನವನ್ನು 19.1 ಮಿನಲ್ಲಿ ದಾಖಲಿಸುವ ಮೂಲಕ ಹೊಸ ಏಷ್ಯನ್ ದಾಖಲೆಯನ್ನು ಸೃಷ್ಟಿಸಿದರು.
ಇದನ್ನೂ ಓದಿ-Viral Video: ಕೆ.ಎಲ್.ರಾಹುಲ್ ಔಟ್; ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದ ಜಾನಿ ಬೈರ್‌ಸ್ಟೋ
ಏತನ್ಮಧ್ಯೆ, ಇದು ಭಾರತದ ದಿನದ ಮೂರನೇ ಪದಕವಾಗಿದೆ. ಇದಕ್ಕೂ ಮುನ್ನ ಭಾರತೀಯ ಪ್ಯಾಡ್ಲರ್ ಭಾವಿನಾ ಪಟೇಲ್ ಪ್ಯಾರಾಲಿಂಪಿಕ್ಸ್‌ನಲ್ಲಿ ದೇಶದ ಖಾತೆಯನ್ನು ತೆರೆದರು ಮತ್ತು ಮಹಿಳಾ ಟೇಬಲ್ ಟೆನಿಸ್ ಫೈನಲ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದರು.ಇನ್ನೊಂದೆಡೆಗೆ ಹೈ ಜಂಪರ್ ನಿಶಾದ್ ಕುಮಾರ್ ಕೂಡ ತಮ್ಮ ವಿಭಾಗದ ಅಂತಿಮ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದರು. ಅವರ 2.06 ಮೀಟರ್ ಪ್ರಯತ್ನವು ಪುರುಷರ ಹೈಜಂಪ್ T45-T47 ವಿಭಾಗದಲ್ಲಿ ಹೊಸ ಏಷ್ಯನ್ ದಾಖಲೆಯನ್ನು ಸೃಷ್ಟಿಸಿತು.
ಇದನ್ನೂ ಓದಿ-Anand Mahindra Tweet: ಬಾಲಕನೋರ್ವನ ಕಳರಿಪಯಟ್ಟು ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹಿಂದ್ರಾ
And in no time another medal from #VinodKumar, today has been special.. he took to sports in late 30s and now at 42yrs creating an Asian Record and winning a @Paralympics medal. True grit and determination. #Bronze @ianuragthakur @narendramodi @Media_SAI #Praise4Para @Tokyo2020 pic.twitter.com/uWyoPasUef
— Deepa Malik (@DeepaAthlete) August 29, 2021
ರಿಯೋ ಪ್ಯಾರಾಲಿಂಪಿಕ್ಸ್ ಪದಕ ವಿಜೇತೆ ದೀಪಾ ಮಲಿಕ್ ವಿನೋದ್ ಅವರ ಪ್ರಯತ್ನವನ್ನು ಶ್ಲಾಘಿಸಿದರು ಮತ್ತು ಅವರ ಪ್ರಯಾಣದ ಉಪಾಖ್ಯಾನಗಳನ್ನು ಹಂಚಿಕೊಳ್ಳುವ ಕಿರು ವಿಡಿಯೋವನ್ನು ಬಿಡುಗಡೆ ಮಾಡಿದರು. "ಅವರು 30ನೇ ವಯಸ್ಸಿನಲ್ಲಿ ಈ ಕ್ರೀಡೆಯಲ್ಲಿ ತೊಡಗಿಸಿಕೊಂಡರು ಮತ್ತು ಈಗ 42 ವಯಸ್ಸಿನಲ್ಲಿ ಏಷ್ಯನ್ ದಾಖಲೆಯನ್ನು ನಿರ್ಮಿಸುವುದರ ಜೊತೆಗೆ ಪ್ಯಾರಾಲಿಂಪಿಕ್ಸ್ ಪದಕವನ್ನು ಗೆದ್ದಿದ್ದಾರೆ. ನಿಜವಾದ ಧೈರ್ಯ ಮತ್ತು ನಿರ್ಣಯ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.