ಟೋಕಿಯೊ: ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ ಒಲಿಂಪಿಕ್ಸ್ನಲ್ಲಿ ಭಾರತದ ಭಾವಿನಾ ಪಟೇಲ್ (Bhavina Patel) ಅದ್ಭುತ ಸಾಧನೆ ಮಾಡಿದ್ದಾರೆ. ಭಾವಿನಾ ಮಹಿಳಾ ಟೇಬಲ್ ಟೆನಿಸ್ ಸಿಂಗಲ್ಸ್ ಕ್ಲಾಸ್ 4 ರ ಸೆಮಿಫೈನಲ್ ತಲುಪುವ ಮೂಲಕ ಪದಕ ಖಚಿತ ಪಡಿಸಿದ್ದಾರೆ.
ಪ್ಯಾರಾಲಿಂಪಿಕ್ ನಲ್ಲಿ ಭಾರತದ ಪದಕ ಖಚಿತ:
ಅಹಮದಾಬಾದ್ನ ಭಾವಿನಾ ಪಟೇಲ್, (Bhavina Patel) 2016 ರಿಯೊ ಪ್ಯಾರಾಲಿಂಪಿಕ್ (Paralympics) ಚಿನ್ನದ ಪದಕ ವಿಜೇತ ಸೆರ್ಬಿಯಾದ ಬೋರಿಸ್ಲಾವಾ ಪೆರಿಚ್ ರಾಂಕೋವಿಚ್ ಅವರನ್ನು ನೇರ ಗೇಮ್ಗಳಲ್ಲಿ 3-0 ಅಂತರದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. 19 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಭಾವಿನಾ 11-5, 11-6, 11-7ರಲ್ಲಿ ರಾಂಕೋವಿಚ್ ಅವರನ್ನು ಸೋಲಿಸಿದ್ದಾರೆ.
A stellar match @BhavinaPatel6!! Not only have you made history by becoming 1st #IND woman to reach @Paralympics #TableTennis semifinal, you did this at your maiden Games defeating an experienced #Paralympics medalist & World no. 2!! Keep this momentum going #Praise4Para https://t.co/YlFVxQhSSw
— Paralympic India 🇮🇳 #Cheer4India #Praise4Para (@ParalympicIndia) August 27, 2021
ಇದನ್ನೂ ಓದಿ: India vs Eng 3rd Test: ಭಾರತ ಈ ಟೆಸ್ಟ್ ಪಂದ್ಯದಲ್ಲಿ ಸೋಲಲಿದೆ-ಮೈಕಲ್ ವಾನ್
ಪ್ಯಾರಾಲಿಂಪಿಕ್ (Tokyo Paralympics) ಕ್ರೀಡಾಕೂಟದ ಸೆಮಿಫೈನಲ್ಗೆ ಪ್ರವೇಶಿಸಿದ ಭಾರತದ ಮೊದಲ ಮಹಿಳಾ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಆಗಿದ್ದು, ಶನಿವಾರ ನಡೆಯುವ ಸೆಮಿಫೈನಲ್ನಲ್ಲಿ ಚೀನಾದ ಜಾಂಗ್ ಮಿಯಾ ಅವರನ್ನು ಎದುರಿಸಲಿದ್ದಾರೆ.
ಸೆಮಿಫೈನಲ್ ಪ್ರವೇಶಿಸಿದ ಭಾವಿನಾ :
ಭಾವಿನ ಪಟೇಲ್ ಎ ಗುಂಪಿನ ಪಂದ್ಯದಲ್ಲಿ ಚೀನಾದ ಜೊವು ಯಿಂಗ್ ಕೈಯಲ್ಲಿ ಸೋಲನ್ನು ಎದುರಿಸಬೇಕಾಯಿತು. ಈ ಸೋಲಿನ ನಂತರ, ಅವರು ಉತ್ತಮ ರೀತಿಯಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಎರಡು ನಾಕೌಟ್ ಪಂದ್ಯಗಳನ್ನು ಗೆದ್ದು, ಪದಕ ಖಚಿತಪಡಿಸಿದ್ದಾರೆ.
ರೌಂಡ್ -16 ರಲ್ಲಿ 23 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಭಾವಿನಾ ಪಟೇಲ್ ಅವರು, ಬ್ರೆಜಿಲ್ನ ಜಿಯೋಸಿ ಡಿ ಒಲಿವೇರಿಯಾ ಅವರನ್ನು 12-10, 13-11, 11-6ರಿಂದ ಸೋಲಿಸಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದರು.
ಇದನ್ನೂ ಓದಿ: Ind Vs Eng Test Series: Sachin Tendulkar ಸಿಡ್ನಿಯಲ್ಲಿ ಮಾಡಿದ್ದನ್ನು Virat Kohli ಪುನರಾವರ್ತಿಸಬೇಕು - ಗಾವಸ್ಕರ್
ಟೋಕಿಯೊ ಪ್ಯಾರಾಲಿಂಪಿಕ್ ಟೇಬಲ್ ಟೆನಿಸ್ನಲ್ಲಿ (Table tennies)ಕಂಚಿನ ಪದಕದ ಪ್ಲೇ-ಆಫ್ ಪಂದ್ಯ ಇರುವುದಿಲ್ಲ ಮತ್ತು ಸೆಮಿಫೈನಲ್ನಲ್ಲಿ ಸೋತ ಇಬ್ಬರೂ ಆಟಗಾರರು ಕಂಚಿನ ಪದಕಗಳನ್ನು ಪಡೆಯುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.