Social Media Viral: ಇಂಟರ್ನೆಟ್ನಲ್ಲಿ ಪ್ರಾಣಿಗಳ ವೈರಲ್ ವೀಡಿಯೊ ಹೆಚ್ಚಾಗಿ ವೈರಲ್ ಆಗುತ್ತಿರುತ್ತದೆ. ಅದರಲ್ಲಿ ಅನೇಕ ವೀಡಿಯೊಗಳಲ್ಲಿ ಹಾವುಗಳು ಸಹ ಕಂಡುಬರುತ್ತವೆ. ಆದರೆ ಈಗ ವೈರಲ್ ಆಗುತಿರುವ ವಿಡಿಯೋ ಎಂಥವರ ಎದೆಯನ್ನು ಕೂಡಾ ಒಮ್ಮೆ ನಡುಗಿಸಿ ಬಿಡುತ್ತದೆ.
Snake Viral Video : ಹಾವು ಸಣ್ಣದಿರಲಿ ದೊಡ್ಡದಿರಲಿ ಮನಸ್ಸಿನಲ್ಲಿ ಭಯ ಆವರಿಸಿ ಬಿಡುತ್ತದೆ. ಅಂಥದ್ದರಲ್ಲಿ 8 ಅಡಿ ಉದ್ದದ ನಾಗರ ಹಾವು ಮನೆ ಬಾಗಿಲಿನಲ್ಲಿ ಬಂದು ನಿಂತರೆ ಹೇಗಾಗಬೇಡ. ಹಾವು ಬಂದು ನಿಂತಿದ್ದು ಮಾತ್ರವಲ್ಲ, ಏನೂ ಅರಿಯದ ಕಂದಮ್ಮ ಅದರ ಹೆಡೆ ಮೇಲೆ ಕಾಲು ಬೇರೆ ಇಟ್ಟಿದೆ.
ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಬಾಣಕಾರಗಲ್ಲಿ ಸಮೀಪದಲ್ಲಿ ಹಾವುಗಳ ಸರಸವಾಡಿವೆ. ಈ ಸುದ್ದಿ ಹಬ್ಬುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಜನ ಕೌತುಕದಿಂದ ಈ ದೃಶ್ಯ ಕಣ್ತುಂಬಿಕೊಂಡಿದ್ದಾರೆ..
Snake Viral Video: ಕೆಲವರು ಹಾವಿನ ಹೆಸರು ಕೇಳಿದರೆ ಸಾಕು ಹೆದರುತ್ತಾರೆ. ಇನ್ನೂ ಕೆಲವರಿಗೆ ಹಾವನ್ನು ನೆನೆಸಿಕೊಂಡರೆ ರಾತ್ರಿ ಕಣ್ಣು ಮುಚ್ಚಲೂ ಭಯವಾಗುತ್ತದೆ. ಆದರೆ, ಕುಳಿತುಕೊಳ್ಳುವ ಖುರ್ಚಿಯಲ್ಲೇ ಹಾವು ಇದ್ದರೆ ಹೇಗಿರುತ್ತೆ?
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳನ್ನು ಕಾಣಬಹುದು. ಅವುಗಳಲ್ಲಿ ಹಲವು ಬೆಚ್ಚಿಬೀಳಿಸುವಂತಹ ಹಾವಿನ ವಿಡಿಯೋಗಳು ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ಮುನ್ನಲೆಗೆ
Big Venomous Monocled Cobra: ಅಂತರ್ಜಾಲದಲ್ಲಿ ಬಾಯಾರಿಕೆಯಿಂದ ಬಳಲುತ್ತಿರುವ ನಾಗರಹಾವಿನ ವೀಡಿಯೊ ವೈರಲ್ ಆಗಿದ್ದು, ಇದರಲ್ಲಿ ವ್ಯಕ್ತಿಯೊಬ್ಬ ಈ ವಿಷಪೂರಿತ ಕೊಬ್ರಾಗೆ ನೀರು ಕುದಿಸುತ್ತಿರುವುದನ್ನು ಕಾಣಬಹುದಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಎಲ್ಲರೂ ಸಂತೋಷದಿಂದ ನದಿ ನೀರಿನಲ್ಲಿ ಆಟವಾಡುತ್ತಿರುವುದನ್ನು ಗಮನಿಸಬಹುದು. ಮಾತವಲ್ಲ ಈ ನದಿಯ ನೀರು ಕೂಡಾ ಬಹಳ ಶುಭ್ರವಾಗಿರುವುದನ್ನು ಕಾಣಬಹುದು .
Snake Viral Video: ನದಿಯಲ್ಲಿ ಕಾಲು ಬಿಟ್ಟು ಕುಳಿತು ಮೊಬೈಲ್ ನೋಡುತ್ತಿದ್ದ ಯುವಕನ ಬಳಿ ಇದ್ದಕ್ಕಿದ್ದಂತೆ ವಿಷಪೂರಿತ ಹಾವು ಕಾಣಿಸಿಕೊಂಡರೆ ಹೇಗಿರುತ್ತೇ... ಅಬ್ಬಬ್ಬಾ ಅದನ್ನು ನೆನೆಸಿಕೊಂಡರೂ ಎದೆ ನಡುಗುತ್ತದೆ...
Snake Viral Video: ಹಾವಿನ ಹೆಸರು ಕೇಳಿದರೆ ಒಂದು ಕ್ಷಣ ಎದೆ ಝಲ್ ಎಂದೆನಿಸುತ್ತದೆ. ಅದೇ ನಾಗರಹಾವು ಎಂದರೆ... ಅಬ್ಬಬ್ಬಾ... ಕನಸಿನಲ್ಲಿಯೂ ಇದರ ಹೆಸರು ಕೇಳಿದರೆ ಬೆಚ್ಚಿ ಬೀಳುತ್ತೇವೆ...
ಬೇಸಿಗೆ ಕಳೆದು ಮಳೆಗಾಲ ಆರಂಭವಾಗುತ್ತಿದ್ದಂತೆ ನಗರ ಪ್ರದೇಶದಲ್ಲಿ ಹಾವುಗಳು ಲಗ್ಗೆ ಇಡುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಮನೆ ಮುಂದೆ ಪಾರ್ಕಿಂಗ್ ಮಾಡುವ ಕಾರು ಬೈಕ್ ಗಳಲ್ಲೂ ಹಾವುಗಳು ಕಾಣಿಸಿಕೊಂಡಿರುವುದು ವರದಿಯಾಗಿದೆ. ಈಗ ಅವುಗಳ ಸಾಲಿನಲ್ಲಿ ಕಾರಿನ ಏರ್ ಫಿಲ್ಟರ್ ನಲ್ಲಿ ನಾಗರಹಾವು ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.
Snake Birth Video: ಈ ವೀಡಿಯೋ ನೋಡಿದ ಮೇಲೆ ಹಲವರು ನಿಸರ್ಗ ಈ ಭೂಮಿಯ ಮೇಲೆ ಎಷ್ಟು ವಿಚಿತ್ರಗಳನ್ನು ಸೃಷ್ಟಿ ಮಾಡಿದೆ ಎಂದು ಯೋಚಿಸಬಹುದು. ಈ ವಿಡಿಯೋದಲ್ಲಿ ಮೊಟ್ಟೆಯಲ್ಲಿ ಕುಳಿತಿರುವ ಹಾವಿನ ಮಗು ಬೇರೊಂದು ಜೀವಿಯ ಮಗುವಿನಂತೆ ಕಾಣುವುದನ್ನು ನೋಡಬಹುದು.
Child With Snake Video: ದೈತ್ಯ ಹಾವಿನೊಂದಿಗೆ ಆಟವಾಡುತ್ತಿರುವ ಹುಡುಗಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟ್ರೆಂಡ್ ಆಗುತ್ತಿದೆ. ಈ ವಿಡಿಯೋ ನೋಡಿದರೆ ಯಾರಾದರೂ ಸಹ ಒಂದು ಕ್ಷಣ ಅಬ್ಬಬ್ಬಾ ಎಂದು ಬಾಯಿ ಮೇಲೆ ಬೆರಳಿಡುತ್ತಾರೆ. ಪುಟ್ಟ ಹುಡುಗಿ ಮತ್ತು ಹಾವಿನ ಈ ವೀಡಿಯೊವನ್ನು ಕೆಲವೇ ನಿಮಿಷಗಳಲ್ಲಿ ಸಾವಿರಾರು ಬಾರಿ ವೀಕ್ಷಿಸಲಾಗಿದೆ ಮತ್ತು ಹೆಚ್ಚಿನ ಜನರು ಇದನ್ನು ಲೈಕ್ ಮಾಡಿದ್ದಾರೆ.
Thirsty Snake Video: ಬಿಸಿಲಿನ ತಾಪದಲ್ಲಿ ಹಾವೊಂದು ಬಾಯಾರಿಕೆಯಿಂದ ನರಳುತ್ತಿತ್ತು. ಈ ಸಮಯದಲ್ಲಿ, ಒಬ್ಬ ವ್ಯಕ್ತಿಯು ತನ್ನ ಅಂಗೈಯಲ್ಲಿ ನೀರನ್ನು ತೆಗೆದುಕೊಳ್ಳುವ ಮೂಲಕ ಹಾವಿನ ಬಾಯಾರಿಕೆಯನ್ನು ನೀಗಿಸುವ ದೃಶ್ಯದ ವಿಡಿಯೋ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.