Snake Viral Video: ನದಿಯಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ವಿಷಪೂರಿತ ಹಾವು...

Snake Viral Video: ನದಿಯಲ್ಲಿ ಕಾಲು ಬಿಟ್ಟು ಕುಳಿತು ಮೊಬೈಲ್ ನೋಡುತ್ತಿದ್ದ ಯುವಕನ ಬಳಿ ಇದ್ದಕ್ಕಿದ್ದಂತೆ ವಿಷಪೂರಿತ ಹಾವು ಕಾಣಿಸಿಕೊಂಡರೆ ಹೇಗಿರುತ್ತೇ... ಅಬ್ಬಬ್ಬಾ ಅದನ್ನು ನೆನೆಸಿಕೊಂಡರೂ ಎದೆ ನಡುಗುತ್ತದೆ...

Written by - Yashaswini V | Last Updated : May 25, 2022, 02:43 PM IST
  • ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಕೆಲವರು ನದಿಯಲ್ಲಿ ಈಜುತ್ತಿರುವುದನ್ನು ಕಾಣಬಹುದು.
  • ಇದೇ ವೇಳೆ ಯುವಕನೊಬ್ಬ ನದಿ ಮಧ್ಯೆಯಲ್ಲಿ ಮೊಬೈಲ್ ನೋಡುತ್ತಾ ಕುಳಿತಿರುವುದನ್ನು ಕಾಣಬಹುದು.
  • ಅಷ್ಟರಲ್ಲಿ ಉದ್ದನೆಯ ಹಾವೊಂದು ಆತನ ಕಡೆಗೆ ಚಲಿಸುತ್ತದೆ.
Snake Viral Video: ನದಿಯಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ವಿಷಪೂರಿತ ಹಾವು... title=
Snake Viral Video

ಹಾವಿನ ವೈರಲ್ ವಿಡಿಯೋ: ಹಾವು ಎಂದರೆ ಎಂತಹವರಿಗೂ ಭಯ ಇದ್ದೇ ಇರುತ್ತದೆ. ಹೆಚ್ಚಿನ ಜಾತಿಯ ಹಾವುಗಳು ವಿಷಕಾರಿ ಆಗಿರುವುದೇ ಇದಕ್ಕೆ ಪ್ರಮುಖ ಕಾರಣ. ಕೆಲವರು ಕನಸಿನಲ್ಲಿ ಹಾವನ್ನು ಕಂಡರೂ ಸಹ ಬೆಚ್ಚಿ ಬೀಳುತ್ತಾರೆ. ಹೀಗಿರುವಾಗ ನದಿಯಲ್ಲಿ ಕಾಲು ಬಿಟ್ಟು ಕುಳಿತು ಮೊಬೈಲ್ ನಲ್ಲಿ ಮುಳುಗಿದ್ದವರ ಮುಂದೆ ಏಕಾಏಕಿ ವಿಷಪೂರಿತ ಹಾವು ಹರಿದು ಬಂದರೆ ಹೇಗಿರುತ್ತೇ... ಅಬ್ಬಬ್ಬಾ... ಇದನ್ನು ಊಹಿಸಿಕೊಂಡರೂ ಎದೆ ಝಲ್ ಎಂದೆನಿಸುತ್ತದೆ.  ಇದೀಗ ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 

ಹೌದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಕೆಲವರು ನದಿಯಲ್ಲಿ ಈಜುತ್ತಿರುವುದನ್ನು ಕಾಣಬಹುದು. ಇದೇ ವೇಳೆ ಯುವಕನೊಬ್ಬ ನದಿ ಮಧ್ಯೆಯಲ್ಲಿ ಮೊಬೈಲ್ ನೋಡುತ್ತಾ ಕುಳಿತಿರುವುದನ್ನು ಕಾಣಬಹುದು. ಅಷ್ಟರಲ್ಲಿ ಉದ್ದನೆಯ ಹಾವೊಂದು ಆತನ ಕಡೆಗೆ ಚಲಿಸುತ್ತದೆ. ಹಾವು ತನ್ನೆಡೆ ಬರುತ್ತಿರುವುದನ್ನು ಗಮನಿಸಿದ ಆತ ಗಾಬರಿಯಿಂದ ತಕ್ಷಣವೇ ಅಲ್ಲಿಂದ ಎದ್ದು ಹೊರಡುತ್ತಾನೆ. ಆಗ ಹಾವು ಮಾಡಿದ್ದೇನು ಗೊತ್ತಾ...

ಈ ವಿಡಿಯೋ ನೋಡಿ...

 
 
 
 

 
 
 
 
 
 
 
 
 
 
 

A post shared by Wildistic ™ (@wildistic)

ಇದನ್ನೂ ಓದಿ- Snake Viral Video: ಎರಡು ಕಿಂಗ್ ಕೋಬ್ರಾಗಳ ನಡುವೆ ಭೀಕರ ಕಾಳಗ, ಹೇಗಿದೆ ನೋಡಿ...

ವಾಸ್ತವವಾಗಿ, ಆ ಯುವಕನು ಹಾವನ್ನು ಕಂಡು ಅಲ್ಲಿಂದ ಎದ್ದು ನದಿಯಿಂದ ಹೊರ ಬರುತ್ತಾನೆ. ಆದರೆ, ಆತನ ಬೆಂಬಿಡದ ಹಾವು ಆತನನ್ನೇ ಅರಸಿ ಬಂದಂತೆ ಅವನ ಹಿಂದೆಯೇ ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು. ಅವನು ಎಲ್ಲಿಗೆ ಹೋದರೂ ಹಾವು ಅವನನ್ನು ಹಿಂಬಾಲಿಸುತ್ತದೆ. ಹಾವನ್ನು ಕಂಡು ಅಲ್ಲಿದ್ದವರೆಲ್ಲ ಹೆದರುತ್ತಾರೆ. 

ಇದನ್ನೂ ಓದಿ- Viral video : ಹುಡುಗಿಯ ಈ ವರ್ತನೆಯಿಂದ ರೊಚ್ಚಿಗೆದ್ದ ಆನೆ , ಇಲ್ಲಿದೆ ನೋಡಿ ಶಾಕಿಂಗ್ ವಿಡಿಯೋ

ವೈಲ್ಡ್ಸ್ಟಿಕ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊವನ್ನು ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು, ಸಹೋದರ ಇದು ನೀರಿನ ಹಾವು, ಇದು ಅಪಾಯಕಾರಿ ಅಲ್ಲ, ಇದು ಮೀನು ಮತ್ತು ಕಪ್ಪೆಗಳನ್ನು ಮಾತ್ರ ತಿನ್ನುತ್ತದೆ ಎಂದು ಬರೆದಿದ್ದಾರೆ. ಇಲ್ಲಿಯವರೆಗೆ ಈ ವೀಡಿಯೊ ಲಕ್ಷಾಂತರ ವೀಕ್ಷಣೆ ಮತ್ತು ಲೈಕ್‌ಗಳನ್ನು ಪಡೆದುಕೊಂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News