Viral Video: ಶಾಕಿಂಗ್! ಶೂನಲ್ಲಿ ಅಡಗಿದ್ದ ಹಾವು!

Viral Video: ಹಾವಿನ ಹೆಸರು ಕೇಳಿದರೆ ಸಾಕು ಕೆಲವರಿಗೆ ನಡುಕ ಉಂಟಾಗುತ್ತದೆ. ಆದರೆ, ಅಂತಹ ಹಾವು ನಮ್ಮ ಮನೆಯಲ್ಲಿ ಅದುವೇ ಚಪ್ಪಲಿ ಬಿಡುವ ಸ್ಟಾಂಡ್ನಲ್ಲಿ ಇದ್ದರೆ ಹೇಗಿರುತ್ತೇ..!

Written by - Yashaswini V | Last Updated : Jun 13, 2022, 12:20 PM IST
  • ಚಪ್ಪಲಿ ಸ್ಟಾಂಡ್ನಲ್ಲಿದ್ದ ಅಡಗಿ ಕುಳಿತಿದ್ದ ಹಾವು
  • ಮನೆಯೊಂದರಲ್ಲಿ ಶೂಗಳ ಮೇಲೆ ಕುಳಿತಿದ್ದ ಕೆರೆ ಹಾವು
  • ಈ ವೈರಲ್ ವಿಡಿಯೋದಲ್ಲಿ ಶೂಗಳ ಮೇಲೆ ಕುಳಿತಿರುವ ಕೆರೆ ಹಾವೊಂದು ಪದೇ ಪದೇ ನಾಲಿಗೆ ಹೊರ ತೆಗೆಯುವುದನ್ನು ಕಾಣಬಹುದು
Viral Video: ಶಾಕಿಂಗ್! ಶೂನಲ್ಲಿ ಅಡಗಿದ್ದ ಹಾವು! title=
Snake Viral Video

ಹಾವಿನ ವೈರಲ್ ವಿಡಿಯೋ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳನ್ನು ಕಾಣಬಹುದು. ಅವುಗಳಲ್ಲಿ ಹಲವು ಬೆಚ್ಚಿಬೀಳಿಸುವಂತಹ ಹಾವಿನ ವಿಡಿಯೋಗಳು ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ಮುನ್ನಲೆಗೆ ಬಂದಿದೆ. 

ಹಾವಿನ ಹೆಸರು ಕೇಳಿದರೆ ಸಾಕು ಕೆಲವರಿಗೆ ನಡುಕ ಉಂಟಾಗುತ್ತದೆ. ಆದರೆ, ಅಂತಹ ಹಾವು ನಮ್ಮ ಮನೆಯಲ್ಲಿ ಅದುವೇ ಚಪ್ಪಲಿ ಬಿಡುವ ಸ್ಟಾಂಡ್ನಲ್ಲಿ ಇದ್ದರೆ ಹೇಗಿರುತ್ತೇ..! ಅಬ್ಬಬ್ಬಾ, ನೆನೆಸಿಕೊಳ್ಳಲೂ ಭಯ ಆಗುತ್ತೆ ಅಲ್ವೇ... ಚಪ್ಪಲಿ ಸ್ಟಾಂಡ್ನಲ್ಲಿದ್ದ ಶೂ ಒಂದರಲ್ಲಿ ಕೆರೆ ಹಾವು ಅಡಗಿ ಕೂತಿದ್ದ ಘಟನೆ ಶಿವಮೊಗ್ಗ ಹೊರವಲಯದ ಅಗಸವಳ್ಳಿಯ ಮನೆಯೊಂದರಲ್ಲಿ ಬೆಳಕಿಗೆ ಬಂದಿದೆ. 

ಇದನ್ನೂ ಓದಿ- ನಡು ರಸ್ತೆಯಲ್ಲಿ ಅಂಗಾತ ಮಲಗಿದ ಜಾಂಬವಂತ- ವಿಡಿಯೋ ವೈರಲ್

ವೈರಲ್ ವಿಡಿಯೋದಲ್ಲಿ ಶೂಗಳ ಮೇಲೆ ಕುಳಿತಿರುವ ಕೆರೆ ಹಾವೊಂದು ಪದೇ ಪದೇ ನಾಲಿಗೆ ಹೊರ ತೆಗೆಯುವುದನ್ನು ಕಾಣಬಹುದು. 

ಇದನ್ನೂ ಓದಿ- Thirsty Cobra Video: ಬಾಯಾರಿಕೆಯಿಂದ ಬಳಲುತ್ತಿದ್ದ ಕಿಂಗ್ ಕೋಬ್ರಾಗೆ ನೀರು ಕುಡಿಸಿದ ಭೂಪ

ಚಪ್ಪಲಿ ಸ್ಟಾಂಡ್ನಲ್ಲಿ ಶೂ ಮೇಲೆ ಕೆರೆ ಹಾವನ್ನು ಕಂಡು ಮನೆಯವರು ಬೆಚ್ಚಿ ಬಿದ್ದಿದ್ದು ಕೂಡಲೇ ಹಾವನ್ನು ಹಿಡಿಯಲು ಸ್ಥಳೀಯರಾದ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಮನೆಗೆ ಧಾವಿಸಿದ ಸ್ನೇಕ್ ಕಿರಣ್ ಅವರು ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News