Thirsty Cobra Video: ಬಾಯಾರಿಕೆಯಿಂದ ಬಳಲುತ್ತಿದ್ದ ಕಿಂಗ್ ಕೋಬ್ರಾಗೆ ನೀರು ಕುಡಿಸಿದ ಭೂಪ

Big Venomous Monocled Cobra:  ಅಂತರ್ಜಾಲದಲ್ಲಿ ಬಾಯಾರಿಕೆಯಿಂದ ಬಳಲುತ್ತಿರುವ ನಾಗರಹಾವಿನ ವೀಡಿಯೊ ವೈರಲ್ ಆಗಿದ್ದು, ಇದರಲ್ಲಿ ವ್ಯಕ್ತಿಯೊಬ್ಬ ಈ ವಿಷಪೂರಿತ ಕೊಬ್ರಾಗೆ ನೀರು ಕುದಿಸುತ್ತಿರುವುದನ್ನು ಕಾಣಬಹುದಾಗಿದೆ.

Written by - Yashaswini V | Last Updated : Jun 8, 2022, 11:57 AM IST
  • ಮೀನಿನ ಬಲೆಯಲ್ಲಿ ಸಿಕ್ಕಿಬಿದ್ದಿದ್ದ ವಿಷಪೂರಿತ ಮೊನೊಕ್ಲ್ಡ್ ನಾಗರಹಾವು
  • ನಾಗರಹಾವು ಬಾಯಾರಿಕೆಯಿಂದ ಬಳಲುತ್ತಿತ್ತು
  • ವ್ಯಕ್ತಿಯೊಬ್ಬ ಬಾಯಾರಿದ ಹಾವಿಗೆ ನೀರಿನ ಬಾಟಲಿಯಿಂದ ನೀರು ಕೊಟ್ಟು ಬಾಯಾರಿಕೆ ನೀಗಿಸುತ್ತಿರುವುದನ್ನು ಈ ವೈರಲ್ ವಿಡಿಯೋದಲ್ಲಿ ಕಾಣಬಹುದು
Thirsty Cobra Video: ಬಾಯಾರಿಕೆಯಿಂದ ಬಳಲುತ್ತಿದ್ದ ಕಿಂಗ್ ಕೋಬ್ರಾಗೆ ನೀರು ಕುಡಿಸಿದ ಭೂಪ  title=
King Cobra Video

ಬಾಯಾರಿದ ನಾಗರಹಾವಿನ ವಿಡಿಯೋ: "ದಯೆಯೇ  ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ. ದಯವಿಲ್ಲದ ಧರ್ಮವೆದೇವುದಯ್ಯ? ದಯವೇ ಧರ್ಮದ ಮೂಲವಯ್ಯ" ಎಂಬ ಬಸವಣ್ಣನವರ ವಚನದಂತೆ ದಯಾಗುಣವು ಧರ್ಮಕ್ಕೆ ಆಧಾರ ಸ್ವರೂಪವಾಗಿದೆ. ದಯೆ ಇಲ್ಲದೆ ಧರ್ಮವನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಯಾರೇ ಆದರೂ ಕಷ್ಟದಲ್ಲಿರುವವರಿಗೆ ದಯೆ ತೋರುವುದರಲ್ಲಿ ತಪ್ಪೇನೂ ಇಲ್ಲ. ಹಾಗಿರುವಾಗ, ಬಾಯಾರಿಕೆಯಿಂದ ಬಳಲುತ್ತಿರುವ ನಾಗರಹಾವಿಗೆ ಏಕೆ ದಯೆ ತೋರಬಾರದು..! ಹೌದು, ಇತ್ತೀಚಿಗೆ ಅಂತರ್ಜಾಲದಲ್ಲಿ ಅಂತಹದ್ದೇ ಒಂದು ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬಾಯಾರಿಕೆಯಿಂದ ಬಳಲುತ್ತಿದ್ದ  ವಿಷಪೂರಿತ ನಾಗರಹಾವಿಗೆ ಸಹಾಯ ಮಾಡಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾನೆ.

ಮೀನಿನ ಬಲೆಯಲ್ಲಿ ಸಿಕ್ಕಿಬಿದ್ದಿದ್ದ ವಿಷಪೂರಿತ ಮೊನೊಕ್ಲ್ಡ್ ನಾಗರಹಾವು:
ವೈರಲ್ ಆಗುತ್ತಿರುವ ವೀಡಿಯೊ ಪ್ರಕಾರ, ಒಡಿಶಾದ ಭದ್ರಕ್ ಪ್ರದೇಶದಲ್ಲಿ ಸ್ಥಳೀಯರು ರಕ್ಷಿಸುವ ಮೊದಲು ಸುಮಾರು 6 ದಿನಗಳ ಕಾಲ ಮೀನಿನ ಬಲೆಯಲ್ಲಿ ದೊಡ್ಡ ವಿಷಪೂರಿತ ಮೊನೊಕ್ಲ್ಡ್ ನಾಗರಹಾವು ಸಿಕ್ಕಿಬಿದ್ದಿತ್ತು ಎನ್ನಲಾಗಿದೆ. ಬಲೆಯಲ್ಲಿ ಸಿಕ್ಕಿಬಿದ್ದಿದ್ದ ನಾಗರಹಾವು ಬಾಯಾರಿಕೆಯಿಂದ ಬಳಲುತ್ತಿತ್ತು ಎನ್ನಲಾಗಿದ್ದು, ವ್ಯಕ್ತಿಯೊಬ್ಬ ಬಾಯಾರಿದ ಹಾವಿಗೆ ನೀರಿನ ಬಾಟಲಿಯಿಂದ ನೀರು ಕೊಟ್ಟು ಬಾಯಾರಿಕೆ ನೀಗಿಸುತ್ತಿರುವುದನ್ನು ಈ ವೈರಲ್ ವಿಡಿಯೋದಲ್ಲಿ ಕಾಣಬಹುದು. ಈ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ. ತನ್ನ ಪ್ರಾಣವನ್ನೂ ಲೆಕ್ಕಿಸದೆ ಬಾಯಾರಿದ ವಿಷ ನಾಗರಕ್ಕೂ ನೀರು ಕುಡಿಸುತ್ತಿರುವ ವ್ಯಕ್ತಿಯ ಹೃದಯಸ್ಪರ್ಶಿ ಸಾಹಸವನ್ನು ಕಂಡು ಜನರು ಆಶ್ಚರ್ಯಚಕಿತರಾದಿದ್ದಾರೆ. ಹಲವರು ಹಾವಿಗೆ ಸಹಾಯ ಮಾಡಿದ್ದಕ್ಕಾಗಿ ವ್ಯಕ್ತಿಗೆ ಧನ್ಯವಾದವನ್ನೂ ಅರ್ಪಿಸುತ್ತಿದ್ದಾರೆ.

ಇದನ್ನೂ ಓದಿ- Snake Viral Video: ನದಿಯಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ವಿಷಪೂರಿತ ಹಾವು...

ವಿಡಿಯೋವನ್ನು ಇಲ್ಲಿ ವೀಕ್ಷಿಸಿ:-

ಈ ವಿಡಿಯೋಗೆ ಹಲವರು ಕಾಮೆಂಟ್ ಮಾಡುತ್ತಿದ್ದು, 'ಈ ಹಾವನ್ನು ಉಳಿಸಿದ್ದಕ್ಕಾಗಿ ಅಭಿನಂದನೆಗಳು. ದೇವರು ನಿಮ್ಮನ್ನು ಆಶೀರ್ವದಿಸಲಿ! ನಿಮಗೆ ಗೌರವ ಮತ್ತು ಅಭಿನಂದನೆಗಳು ಎಂದು ಬಳಕೆದಾರರೊಬ್ಬರು ಅಭಿನಂದಿಸಿದ್ದಾರೆ. ಇನ್ನೋರ್ವ ಬಳಕೆದಾರರು, 'ಹಾವಿಗೆ ಎಷ್ಟು ಬಾಯಾರಿಕೆಯಾಗಿತ್ತು. ಮಿರ್ಜಾ ಸರ್ ಹಾವಿನ ಬಾಯಾರಿಕೆಯನ್ನು ನೀಗಿಸಿ ರಕ್ಷಿಸಿದರು. ಇಡೀ ತಂಡಕ್ಕೆ ಧನ್ಯವಾದಗಳು ಎಂದು  ಕಾಮೆಂಟ್ ಬಾಕ್ಸ್ ನಲ್ಲಿ ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಅದ್ಭುತ. ಪಾರುಗಾಣಿಕಾ ಮತ್ತು ನೀರಿಗಾಗಿ ಹಾವು ತುಂಬಾ ಕೃತಜ್ಞರಾಗಿರಬೇಕು ಎಂದಿದ್ದಾರೆ. ಏತನ್ಮಧ್ಯೆ, ಅಂತಹ ವಿಷಕಾರಿ ಜೀವಿಗಳನ್ನು ನಿಭಾಯಿಸಲು ನೀವು ಪರಿಣತರಾಗಿರಬೇಕು ಮತ್ತು ನೀವು ಪರಿಣತಿಯನ್ನು ಹೊಂದಿಲ್ಲದಿದ್ದರೆ ಎಂದಿಗೂ ಇಂತಹ ಸಾಹಸಕ್ಕೆ ಕೈ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ- Snake Viral Video: ಎರಡು ಕಿಂಗ್ ಕೋಬ್ರಾಗಳ ನಡುವೆ ಭೀಕರ ಕಾಳಗ, ಹೇಗಿದೆ ನೋಡಿ...

ಯೂಟ್ಯೂಬ್‌ನಲ್ಲಿ ಇದುವರೆಗೂ 7 ಮಿಲಿಯನ್ ವೀಕ್ಷಣೆ ವೀಡಿಯೊ: 
ಸುಮಾರು 9 ನಿಮಿಷಕ್ಕೂ ಹೆಚ್ಚು ಅವಧಿಯ ವೀಡಿಯೋದಲ್ಲಿ ಹಾವು ಬಲೆಗೆ ಸಿಕ್ಕಿ ನರಳುತ್ತ ಇರುವುದನ್ನು ನೋಡಬಹುದು ಮತ್ತು ನಂತರ ಉರಗ ತಜ್ಞರು ಅದನ್ನು ಉಳಿಸಲು ಜೊತೆಯಾಗಿದ್ದಾರೆ. ಹಾವನ್ನು ರಕ್ಷಿಸಿದ ಬಳಿಕ ಕಾಡಿಗೆ ಬಿಡಲಾಗಿದೆ ಎಂದು ತಿಳಿದುಬಂದಿದೆ. ಈ ವಿಡಿಯೋವನ್ನು ಇದುವರೆಗೆ ಸುಮಾರು 70 ಲಕ್ಷ ಬಾರಿ ವೀಕ್ಷಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News