Viral Video : ಸ್ಪೋರ್ಟ್ಸ್ ಬೈಕ್ ಮೇಲೆ ದೈತ್ಯ ಹೆಬ್ಬಾವಿನ ಸವಾರಿ ..!

 ಈ ಹೆಬ್ಬಾವು ಮನೆ ಸಮೀಪ ಬರುತ್ತಿದ್ದಂತೆಯೇ ಅದಕ್ಕೆ ಮನೆ ಮುಂದೆ ನಿಂತಿರುವ ಸ್ಪೋರ್ಟ್ಸ್ ಬೈಕ್ ಕಣ್ಣಿಗೆ ಬಿದ್ದಿದೆ.

Written by - Ranjitha R K | Last Updated : Jun 27, 2022, 02:34 PM IST
  • ಹಾವಿನ ವಿಡಿಯೋಗಳನ್ನು ಹೆಚ್ಚಾಗಿ ಅಪ್ ಲೋಡ್ ಮಾಡಲಾಗುತ್ತದೆ.
  • ಇದೀಗ ದೈತ್ಯ ಹೆಬ್ಬಾವಿನ ವಿಡಿಯೋವೊಂದು ವೈರಲ್ ಆಗುತ್ತಿದೆ.
  • ಮನೆ ಮುಂದೆಯೇ ಕಾಣಿಸಿಕೊಂಡ ದೈತ್ಯ ಹೆಬ್ಬಾವು
Viral Video : ಸ್ಪೋರ್ಟ್ಸ್ ಬೈಕ್ ಮೇಲೆ ದೈತ್ಯ ಹೆಬ್ಬಾವಿನ ಸವಾರಿ ..! title=
VIral Video (photo instagram)

ಬೆಂಗಳೂರು : ಹಾವು ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ ಅದನ್ನು ನೋಡಿದ ಕೂಡಲೇ ಭಯ ಆವರಿಸಿ ಬಿಡುತ್ತದೆ. ಹಾವಿನ ಫೋಟೋ ಅಥವಾ ವಿಡಿಯೋಗಳನ್ನು ನೋಡುವಾಗಲೂ ಮೈ ಜುಮ್ಮೆನ್ನುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಕಾಡಿನ ಅಪಾಯಕಾರಿ ಪ್ರಾಣಿಗಳ ವೀಡಿಯೋಗಳನ್ನು ಹೆಚ್ಚಾಗಿ ಹಾಕಲಾಗುತ್ತದೆ. ಅದರಲ್ಲೂ ಹಾವಿನ ವಿಡಿಯೋಗಳನ್ನು ಹೆಚ್ಚಾಗಿ ಅಪ್ ಲೋಡ್ ಮಾಡಲಾಗುತ್ತದೆ. ಇದೀಗ ದೈತ್ಯ ಹೆಬ್ಬಾವಿನ ವಿಡಿಯೋವೊಂದು ವೈರಲ್ ಆಗುತ್ತಿದೆ. 

ಮನೆ ಮುಂದೆಯೇ ಕಾಣಿಸಿಕೊಂಡ ದೈತ್ಯ ಹೆಬ್ಬಾವು : 
ಸುಮಾರು ಇಪ್ಪತ್ತು ಅಡಿ ಉದ್ದದ ಹೆಬ್ಬಾವು ಏಕಾಏಕಿ ಮನೆಯೊಂದರ ಸಮೀಪಕ್ಕೆ ಬರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಹೆಬ್ಬಾವು ಮನೆ ಸಮೀಪ ಬರುತ್ತಿದ್ದಂತೆಯೇ ಅದಕ್ಕೆ ಮನೆ ಮುಂದೆ ನಿಂತಿರುವ ಸ್ಪೋರ್ಟ್ಸ್ ಬೈಕ್ ಕಣ್ಣಿಗೆ ಬಿದ್ದಿದೆ. ಕೂಡಲೇ ಹೆಬ್ಬಾವು ಬೈಕ್ ಮೇಲೆ ಹತ್ತಲಾರಂಭಿಸಿದೆ. ಈ ಹಾವಿನ ಗಾತ್ರ ಎಷ್ಟು ದೊಡ್ದದಾಗಿತ್ತೆಂದರೆ ಹಾವಿನ ಮುಂದೆ ಬೈಕ್ ಕೂಡಾ ತೀರಾ ಚಿಕ್ಕದಾಗಿ ಕಾಣಿಸಿದೆ.  ಕೆಲವೇ ಸೆಕೆಂಡ್ ಗಳಲ್ಲಿ ಹೆಬ್ಬಾವು ತನ್ನ ಮೈಯಲ್ಲಿ ಬೈಕ್ ಸುತ್ತಿಕೊಂಡಿರುವುದನ್ನು ಕಾಣಬಹುದು. 

ಇದನ್ನೂ ಓದಿ : Viral Video: ಶಾಲೆಗೆ ತಡವಾಗಿ ಬಂದ ಶಿಕ್ಷಕಿಗೆ ಬೂಟಿನಿಂದ ಹೊಡೆದ ಪ್ರಾಂಶುಪಾಲ!

ಇಲ್ಲಿದೆ ವಿಡಿಯೋ :

 

ಸುಮಾರು ಒಂದು ಕ್ವಿಂಟಾಲ್ ತೂಕದ ಹೆಬ್ಬಾವಿನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ಈ ವಿಡಿಯೋವನ್ನು  Instagram ನಲ್ಲಿsnake._.world ಎಂಬ ಹೆಸರಿನ ಪುಟದಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋಗೆ ಇದುವರೆಗೆ ಸಾವಿರಾರು ಲೈಕ್‌ಗಳು ಬಂದಿವೆ. 

ಇದನ್ನೂ ಓದಿ : Video : ಕುಡಿದು ತೂರಾಡಿಕೊಂಡು ಹಸೆಮಣೆ ಏರಿದ ವರ..! ಹಾರ ಬದಲಾಯಿಸುವಾಗ ಮಾಡಿಯೇ ಬಿಟ್ಟ ಎಡವಟ್ಟು ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News