Viral Video: ನಾಗರಹಾವಿನೊಂದಿಗೆ ಕೋಳಿ ಕಾಳಗ ವಿಡಿಯೋ ವೈರಲ್

Snake Viral Video: ತಾಯಿ ಕೋಳಿ ತನ್ನ ಮರಿಗಳನ್ನು ರಕ್ಷಿಸಲು ನಾಗರಹಾವಿನೊಂದಿಗೆ ಹೋರಾಡಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. 

Written by - Yashaswini V | Last Updated : Jun 7, 2022, 02:35 PM IST
  • ಕೋಳಿಯೊಂದು ತನ್ನ ಮರಿಗಳ ರಕ್ಷಣೆಯ ಸಲುವಾಗಿ ಅಪಾಯಕಾರಿ ನಾಗರಹಾವಿನ ವಿರುದ್ಧ ಹೋರಾಡುವ ವೀಡಿಯೊ.
  • ಈ ವೀಡಿಯೊವನ್ನು ಇದುವರೆಗೆ ಸುಮಾರು 30 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ.
  • ಈ ವಿಡಿಯೋವನ್ನು ಇದುವರೆಗೂ 1.42 ಲಕ್ಷ ಮಂದಿ ಲೈಕ್ ಮಾಡಿದ್ದಾರೆ.
Viral Video: ನಾಗರಹಾವಿನೊಂದಿಗೆ ಕೋಳಿ ಕಾಳಗ ವಿಡಿಯೋ ವೈರಲ್  title=
Snake Chiken viral video

ಸ್ನೇಕ್ ವೈರಲ್ ವೀಡಿಯೊ: ತಾಯಿ ಅನ್ನುವ ಪದದಲ್ಲಿಯೇ ಎಷ್ಟು ಶಕ್ತಿ ಎಂದರೆ ಹೆಸರು ಕೇಳಿದರೆ ಒಂದು ರೀತಿಯ ಧೈರ್ಯ. ಮಗುವಿಗೆ ತಾಯಿ ಜೊತೆಯಲ್ಲಿದ್ದರೆ ತನ್ನನ್ನು ಬೇರಾರು ಏನೂ ಮಾಡಲಾರರು ಎಂಬ ನಂಬಿಕೆ ಇರುತ್ತದೆ. ಪ್ರಾಣಿ-ಪಕ್ಷಿಗಳೂ ಸಹ ಇದಕ್ಕೆ ಹೊರತಲ್ಲ ಎಂಬುದಕ್ಕೆ ಕನ್ನಡಿ ಹಿಡಿದಂತಿದೆ ಈ ವೈರಲ್ ವಿಡಿಯೋ...

ಹೌದು, ತಾಯಿ ಕೋಳಿಯು ತನ್ನ ಮರಿಗಳನ್ನು ರಕ್ಷಿಸಲು ಭಯಾನಕ ನಾಗರ ಹಾವಿನೊಂದಿಗೆ ಹೇಗೆ ಹೋರಾಡುತ್ತದೆ ಎಂಬ ಆಘಾತಕಾರಿ ವಿಡಿಯೋ  ವೊಂದು ಇದೀಗ ಹೊರಬಿದ್ದಿದೆ. ಈ ವಿಡಿಯೋದಲ್ಲಿ ತಾಯಿ ಕೋಳಿ ತನ್ನ ಮರಿಗಳನ್ನು ಯಾವ ರೀತಿ ರಕ್ಷಿಸುತ್ತಿದೆ ಎಂಬ ಅದ್ಭುತ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ- Viral News: ನನಗೆ ‘ಎಣ್ಣೆ ಬೇಕು ಅಣ್ಣಾ’ ಎನ್ನುತ್ತಿರುವ ಹುಂಜ..!

ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಕಿಂಗ್ ಕೋಬ್ರಾ:
ವಾಸ್ತವವಾಗಿ, ವಿಡಿಯೋದ ಆರಂಭದಲ್ಲಿ ತಾಯಿ ಕೋಳಿಯು ತನ್ನ ಮರಿಗಳೊಂದಿಗೆ ಇರುವುದನ್ನು ಕಾಣಬಹುದು. ಕೋಳಿ ಹಾಗೂ ಕೋಳಿ ಮರಿಗಳಿರುವ ಕಡೆ ನಿಧಾನವಾಗಿ ನಾಗರಹಾವೊಂದು ಬರುತ್ತದೆ. ಕಿಂಗ್ ಕೋಬ್ರಾ ತನ್ನ ಮರಿಗಳನ್ನು ಬೇಟೆಯಾಡಲು ಬಂದಿರುವುದನ್ನು ಅರಿತ ಕೋಳಿ ತನ್ನ ಮರಿಗಳಿಗೆ ರಕ್ಷಣೆ ಆಗಿ ನಿಲ್ಲುತ್ತದೆ. ನಾಗರ ಹಾವು ಮರಿಗಳ ಮೇಲೆ ದಾಳಿ ಮಾಡಲು ಸಮೀಪಕ್ಕೆ ಬರುತ್ತಿದ್ದರೆ ಹಾವಿನ ಮೇಲೆ ದಾಳಿ ಮಾಡುವ ಕೋಳಿ ಸದ್ದು ಮಾಡುತ್ತಾ ನಿಧಾನವಾಗಿ ತನ್ನ ಮರಗಳನ್ನು ಅಲ್ಲಿಂದ ಕಳುಹಿಸುತ್ತದೆ. 

ಇದನ್ನೂ ಓದಿ- Viral Video: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವ್ಯಕ್ತಿಯ ಸ್ಟಂಟ್, ಕೆಳಗಿತ್ತು ಭಯಾನಕ ಮೊಸಳೆಗಳು...

ಈ ಅಚ್ಚರಿಯ ವೀಡಿಯೊದಲ್ಲಿ, ಕೋಳಿ ತನ್ನ ಎಲ್ಲಾ ಮರಿಗಳನ್ನು ಸುರಕ್ಷಿತವಾಗಿ ಹೊರತೆಗೆದ ನಂತರವೇ ಅಲ್ಲಿಂದ ಹೋಗುವುದನ್ನು ನೀವು ನೋಡಬಹುದು.

ಕೋಳಿಯೊಂದು ತನ್ನ ಮರಿಗಳ ರಕ್ಷಣೆಯ ಸಲುವಾಗಿ ಅಪಾಯಕಾರಿ  ನಾಗರಹಾವಿನ ವಿರುದ್ಧ ಹೋರಾಡುವ ಈ ವೀಡಿಯೊವನ್ನು ಇದುವರೆಗೆ ಸುಮಾರು 30 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಈ ವಿಡಿಯೋವನ್ನು ನೆಟ್ಟಿಗರು ಕೂಡ ಲೈಕ್ ಮಾಡಿದ್ದಾರೆ ಮತ್ತು 1.42 ಲಕ್ಷ ಮಂದಿ ಲೈಕ್ ಮಾಡಿದ್ದಾರೆ. WILD COBRA ಹೆಸರಿನ ಚಾನಲ್‌ನಲ್ಲಿ ಯೂಟ್ಯೂಬ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News