ರಾಜಕೀಯವಾಗಿ ನಮ್ಮ ಕುಟುಂಬಕ್ಕೆ ಜನ್ಮ ಕೊಟ್ಟ ಜಿಲ್ಲೆ ಮಂಡ್ಯ, ನೀವು ಯಾವುದೇ ಕಾರ್ಯಕ್ರಮಕ್ಕೆ ಕರೆದರು ಬರೋದು ನನ್ನ ಧರ್ಮ. ಈ ಭಾಗದಲ್ಲಿ ಅನ್ನದಾನಿ 24 ತಾಸು ಜನಗಳ ನಡುವೆ ಕೆಲಸ ಮಾಡ್ತಿದ್ದಾರೆ.
ಕೋವಿಡ್ನಿಂದ ಗುಣಮುಖರಾಗುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಎಂದಿನ ಕೆಲಸ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿಡುತ್ತಿದ್ದಾರೆ. ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗಾಗಿ ಮತ್ತು ಪೂರ್ಣಗೊಂಡ ಕಾಮಗಾರಿಗಳಿಗೆ ಚಾಲನೆ ನೀಡಲು ಮೈಸೂರು, ಮಂಡ್ಯ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದಾರೆ. ಮಂಡ್ಯದಲ್ಲಿ ಸಿಎಂಗೆ ನಟ ಯಶ್ ಸಾಥ್ ನೀಡಿದ್ದಾರೆ.
CM Basavaraj Bommai : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ದಾಣದಿಂದ ಮೈಸೂರಿಗೆ ತೆರಳಿದರು. ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ, ಖ್ಯಾತ ಚಿತ್ರ ನಟ ಯಶ್ ಅವರ ಜೊತೆ ಹೆಲಿ ಕ್ಯಾಪ್ಟರ್ ನಲ್ಲಿ ಮೈಸೂರಿಗೆ ತೆರಳಿದರು.
ಮಂಡ್ಯದಲ್ಲಿ JDS ನಾಯಕರ ಮುನಿಸು ಹೆಚ್ಚಾಗಿದೆ. ವರಿಷ್ಠರ ವಿರುದ್ಧ JDS ಮುಖಂಡರ ಮುನಿಸು, ಭಿನ್ನಮತ ಹೊರ ಬಿದ್ದಿದೆ. ನಾಗಮಂಗಲದಲ್ಲಿ ನಿನ್ನೆ ನಡೆದ ಸಮಾವೇಶಕ್ಕೆ ಮಾಜಿ-ಹಾಲಿ ಶಾಸಕರು ಗೈರಾಗಿದ್ದಾರೆ. ಮದ್ದೂರಿನ ಶಾಸಕ ತಮ್ಮಣ್ಣ, ಮೇಲುಕೋಟೆ ಶಾಸಕ ಪುಟ್ಟರಾಜು, ಮಾಜಿ ಪರಿಷತ್ ಸದಸ್ಯರಾದ ಶ್ರೀಕಂಠೇಗೌಡ ಹಾಗೂ ಅಪ್ಪಾಜಿಗೌಡ, ಮನ್ಮುಲ್ ಹಾಗೂ ಒಕ್ಕಲಿಗ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು ಸಮಾವೇಶಕ್ಕೆ ಗೈರಾಗಿದ್ದಾರೆ.
ಬೇಬಿ ಬೆಟ್ಟದ ವಿವಾದಕ್ಕೆ ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಎಂಟ್ರಿ ಕೊಟ್ಟಿದ್ದಾರೆ. ಬೇಬಿ ಬೆಟ್ಟ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ವಕೀಲರ ಮೂಲಕ ಮಂಡ್ಯ ಡಿಸಿಗೆ ಆಕ್ಷೇಪ ಪತ್ರ ಕಳಿಸಿದ ಪ್ರಮೋದಾ ದೇವಿ - ಬ್ಲಾಸ್ಟ್ ಮಾಡಿದ ಜಾಗ ನಮ್ದು ಎಂದು ಆಕ್ಷೇಪ ಪತ್ರ ಸಲ್ಲಿಸಿದ್ದಾರೆ.
ಇಂದು ಮಂಡ್ಯದ ಕೆ.ಆರ್.ಪೇಟೆಗೆ ಸಿಎಂ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. 1,700 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಕೆ.ಆರ್.ಪೇಟೆ ಪಟ್ಟಣ ಪುರಸಭೆಯ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಿಎಂ ಕಾರ್ಯಕ್ರಮಕ್ಕಾಗಿ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ.
ಬಕ್ರೀದ್ ಹಿನ್ನೆಲೆ ದುಬಾರಿ ಬೆಲೆಗೆ ಜೋಡಿ ಟಗರು ಮಾರಾಟ ಮಂಡ್ಯದ ಕ್ಯಾಂತುಗೆರೆ ಗ್ರಾಮದಲ್ಲಿ ಟಗರು ಭಾರೀ ಬೆಲೆಗೆ ಸೇಲ್ ಸುಮಾರು 1.05 ಲಕ್ಷ ರೂ.ಗಳಿಗೆ ಜೋಡಿ ಟಗರು ಮಾರಾಟ ಗ್ರಾಮದ ರೈತ ಶರತ್ ಬಂಡೂರು ತಳಿಯ ಟಗರು ಸಾಕಿದ್ದ ರೈತ
ಮಂಡ್ಯದ ಕ್ಯಾಂತುಗೆರೆ ಗ್ರಾಮದಲ್ಲಿ ಟಗರು ಭಾರೀ ಬೆಲೆಗೆ ಮಾರಾವಾಗಿದೆ. ಸುಮಾರು 1.05 ಲಕ್ಷ ರೂ.ಗಳಿಗೆ ಜೋಡಿ ಟಗರು ಮಾರಾಟ. ಗ್ರಾಮದ ರೈತ ಶರತ್ ಬಂಡೂರು ತಳಿಯ ಟಗರು ಸಾಕಿದ್ದ ರೈತ. ಒಂದುವರೇ ವರ್ಷದಿಂದ ಜೋಡಿ ಟಗರು ಸಾಕಿದ್ದ ರೈತ. ಬಂಡೂರು ಟಗರು ಸಾಕಿದ ಮಾಲೀಕನನ್ನು ಅಭಿನಂದಿಸಿದ ಮುಬಾರಕ್.
ಎಲೆಕ್ಷನ್ ಗೆದ್ದ ಖುಷಿಯಲ್ಲಿ ಶಾಲೆಯನ್ನೇ ಬಾರ್ ಮಾಡಿಕೊಂಡ ಶಿಕ್ಷಕರು - ಶಾಲೆಯಲ್ಲಿ ಗುಂಡು, ತುಂಡು ಪಾರ್ಟಿ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ಪಾಠ ಹೇಳಿ ಕೊಡುವ ಗುರುಗಳೇ ಹೀಗೆ ಮಾಡಿದ್ರೆ ಮಕ್ಕಳ ಗತಿಯೇನು? ಎಂದು ಪ್ರಶ್ನಿಸಿದ್ದಾರೆ...
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮೈ ಶುಗರ್ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿದ್ದಾರೆ. ಅದಷ್ಟು ಬೇಗ ದುರಸ್ತಿ ಕಾರ್ಯ ಪೂರ್ಣಗೊಳಸಲು ಸೂಚನೆ ಅಧಿಕಾರಿಗಳೊಂದಿಗೆ ದುರಸ್ತಿ ಕಾರ್ಯದ ರೂಪುರೇಷೆ ಬಗ್ಗೆ ಚರ್ಚೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಕಾಳರಾಜೇಗೌಡನ ವಿರುದ್ಧ ಕೇಸ್ ದಾಖಲಾಗಿದೆ. ಈತ ಅನ್ನದಾಸೋಹ ಯೋಜನೆಯಡಿ ಶಾಲೆಗೆ ಬಂದಿದ್ದ ತೊಗರಿ ಬೇಳೆಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದ. ಈ ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋವೊಂದು ವೈರಲ್ ಆದ ಬಳಿಕ ಕಾಳರಾಜೇಗೌಡನನ್ನು ಅಮಾನತು ಮಾಡಲು ಸರ್ಕಾರಕ್ಕೆ ಡಿಡಿಪಿಐ ಶಿಫಾರಸ್ಸು ಮಾಡಿದ್ದಾರೆ. ಈತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಾರೆಗೌಡನ ಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಕಾಳ ರಾಜೇಗೌಡ ತಮ್ಮ ಶಾಲೆಗೆ ಸರ್ಕಾರದಿಂದ ಬಂದ ತೊಗರಿ ಬೇಳೆಯನ್ನು ಕದ್ದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಶಾಲೆಯಿಂದ ಬಿಸಿಯೂಟದ ಎರಡು ಮೂಟೆ ಬೇಳೆ ಕದ್ದು ಅಂಗಡಿಗೆ ಸಾಗಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ.
ಮಂಡ್ಯ ಜಿಲ್ಲೆಯಾದ್ಯಂತ ಅಪರಾಧ ಕೃತ್ಯಗಳು ಹೆಚ್ಚಾದ ಹಿನ್ನೆಲೆ ರೌಡಿಗಳ ಹೆಡೆಮುರಿ ಕಟ್ಟಲು ಖಾಕಿ ಪಡೆ ಮುಂದಾಗಿದೆ. ಠಾಣೆಗಳ ವ್ಯಾಪ್ತಿಯಲ್ಲಿ ರಾತ್ರೋ ರಾತ್ರಿ ರೌಡಿಗಳ ಪರೇಡ್ ನಡೆಸಲಾಗಿದೆ. ಕುಖ್ಯಾತ ರೌಡಿಗಳ ಮನೆಗೆ ಖುದ್ದು SP ಭೇಟಿ ನೀಡಿದ್ದು, ಖಡಕ್ ವಾರ್ನಿಂಗ್ ನೀಡಿದ್ದಾರೆ. ಬಾಲ ಬಿಚ್ಚಿದ್ರೆ ಗಡಿಪಾರು, ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.