ಅಮ್ಮ-ಮಗ ಇಬ್ಬರೂ ಒಟ್ಟಿಗೆ ರಾಜಕೀಯದಲ್ಲಿ ಇರಲ್ಲ. ರಾಜಕೀಯದಲ್ಲಿ ನಾನು ಇರ್ತೇನೆ, ಇಲ್ಲ ಅಭಿಷೇಕ್ ಇರ್ಬೇಕು. ಯಾವುದೇ ಕಾರಣಕ್ಕೂ ನಾವು ವಂಶದ ರಾಜಕಾರಣ ಮಾಡಲ್ಲ ಎಂದು ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ನೀಡಿದ್ದಾರೆ.
ಮಂಡ್ಯದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ.. ಇಬ್ಬರೂ ಸಚಿವರಿಗೆ ಕೆ.ಆರ್.ಪೇಟೆಯೊಂದೇ ಮಂಡ್ಯ ಜಿಲ್ಲೆಯಾಗಿದೆ ಎಂದು ಉಸ್ತುವಾರಿ ಸಚಿವರ ವಿರುದ್ಧ ರವೀಂದ್ರ ಶ್ರೀಕಂಠಯ್ಯ ಅಸಮಾಧಾನ ಹೊರ ಹಾಕಿದ್ದಾರೆ.
ಮಂಡ್ಯ ಜಿಲ್ಲೆಗೆ ಚಲುವರಾಯಸ್ವಾಮಿಯಿಂದ ದ್ರೋಹ ಬಗೆದಿದ್ದಾರೆ. ಬಿಜೆಪಿ ಜೊತೆ ಸೇರಿ ಮಂಡ್ಯ ವ್ಯವಸ್ಥೆ ಹಾಳು ಮಾಡಿದ್ದಾರೆ ಎಂದು ಮಾಜಿ ಸಚಿವರ ವಿರುದ್ಧ ರವೀಂದ್ರ ಶ್ರೀಕಂಠಯ್ಯ ಆಕ್ರೋಶ ಹೊರ ಹಾಕಿದ್ದಾರೆ.
ಬೇಧಭಾವ ನೋಡದೆ ಅಂಬಿ-ಅಪ್ಪು ಗುಡಿ ಕಟ್ಟಿದ್ದಿರಿ. ನಿಮ್ಮ ಅಭಿಮಾನಕ್ಕೆ ನಾವು ಸದ ಋಣಿ ಎಂದು ಮದ್ದೂರಿನ ಡಿ.ಹೊಸೂರು ಗ್ರಾಮದಲ್ಲಿ ಹಿರಿಯ ನಟ ದೊಡ್ಡಣ್ಣ ಹೇಳಿದ್ದಾರೆ. ಕಲಿಯುಗ ಕರ್ಣ ಅಂಬರೀಶ್ ಹೃದಯವಂತರಾಗಿದ್ದರು. ಅಂಬರೀಶ್ ಅವರು ಬೈದಿಲ್ಲ ಅಂದ್ರೆ ನಮಗೆ ತಿಂದಿದ ಅನ್ನ ಮೈಗೆ ಹತ್ತುತ್ತಿರಲಿಲ್ಲ ಎಂದು ದೊಡ್ಡಣ ಅಂಬರೀಷ್ ಜೊತೆಗಿನ ಒಡನಾಟ ನೆನೆದಿದ್ದಾರೆ.
ರಾಜಕಾರಣ ಬೇರೆ.. ನನಗೂ ಮಂಡ್ಯಕ್ಕೂ ಇರೋ ಸಂಬಂಧ ಬೇರೆ.. ಈ ಕ್ಷೇತ್ರ ನನ್ನ ಮನೆ.. ನನ್ನ ಮನೆಯನ್ನು ಬಿಟ್ಟು ಯಾರೂ ಕಳ್ಸೋಕೆ ಆಗಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ. ಅಭಿಷೇಕ್ ಅಂಬರೀಷ್ ನಿಮ್ಮ ಜೊತೆಯೇ ಇರ್ತಾರೆ. ಅವರ ಮೇಲೂ ನಿಮ್ಮ ಪ್ರೀತಿ ಇರಲಿ ಅಂತಾ ಸುಮಲತಾ ಅಂಬರೀಷ್ ಮನವಿ ಮಾಡಿದ್ರು.
ಮಂಡ್ಯ ನನಗೆ ಕ್ಷೇತ್ರ ಅಲ್ಲ, ಪುಣ್ಯ ಕ್ಷೇತ್ರ. ಮರು ಜನ್ಮ ಕೊಟ್ಟ ಕ್ಷೇತ್ರ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.. ಮಂಡ್ಯ ಕ್ಷೇತ್ರ ತೊರೆಯೋ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸುಮಲತಾ, ಮಂಡ್ಯ ನನ್ನ ಮನೆ.. ಇದೇ ಪ್ರಶ್ನೆ ಅಂಬರೀಷ್ ಅವ್ರನ್ನು ಕೇಳಿದ್ರೆ ಚಾನ್ಸೇ ಇಲ್ಲ ನೋ ವೇ ಎಂದು ಹೇಳ್ತಿದ್ದರು. ನಾನು ಕೂಡಾ ಅದೇ ಹೇಳ್ತೇನೆ ಎಂದಿದ್ದಾರೆ.
ನಾನು ಇಂದು ಸಂಸದೆಯಾಗಿರಬಹುದು. ನಾಳೆ ಇಲ್ಲದೇ ಇರಬಹುದು.. ಆದ್ರೆ ಮಂಡ್ಯ, ಮದ್ದೂರಿಗೆ ಸಂಬಂಧಪಟ್ಟಂತೆ ನಾನು ಸಂಸದೆಯಲ್ಲ ನಿಮ್ಮೂರಿನ ಸೊಸೆ ಅಂತಾ ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಯಾವ ರೀತಿ ಥ್ಯಾಂಕ್ಸ್ ಹೇಳಬೇಕೋ ಗೊತ್ತಾಗ್ತಿಲ್ಲ ಅಂತಾ ಹೇಳಿದ್ದಾರೆ..
ಮಂಡ್ಯದಲ್ಲಿ ಅಪ್ಪು-ಅಂಬಿ ಅಭಿಮಾನಿಗಳು 12 ಲಕ್ಷ ರೂ. ವೆಚ್ಚದಲ್ಲಿ ಅಪ್ಪು ಅಂಬಿ ದೇಗುಲ ನಿರ್ಮಿಸಲಾಗಿದೆ. ಇಬ್ಬರ ಪುತ್ಥಳಿಗಳನ್ನು ಒಂದೇ ಗುಡಿಯಲ್ಲಿ ನಿರ್ಮಿಸಲಾಗಿದೆ. ಇಂದು ಸಂಸದೆ ಸುಮಲತಾ ಹಾಗೂ ಅಶ್ವಿನಿ ಪುನೀತ್ರಾಜಕುಮಾರ್ ಈ ದೇಗುಲ ಅನಾವರಣ ಮಾಡಲಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಡಿ.ಹೊಸೂರು ಗ್ರಾಮದಲ್ಲಿ ಮಂಡ್ಯದ ಗಂಡು ದಿ.ಅಂಬರೀಶ್ ಮತ್ತು ದಿ.ಪುನೀತ್ ರಾಜ್ ಕುಮಾರ್ ರವರ ಅಭಿಮಾನಿಗಳು ತಮ್ಮ ನೆಚ್ಚಿನ ಆರಾಧ್ಯ ನಟರಿಬ್ಬರ ಮೇಲಿನ ಅಭಿಮಾನಕ್ಕೆ ತಮ್ಮೂರಿನಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಗುಡಿಯೊಂದನ್ನ ನಿರ್ಮಿಸಿದ್ದಾರೆ.
ಮಳವಳ್ಳಿ ಶಾಸಕ ಡಾ. ಕೆ.ಅನ್ನದಾನಿಗೆ ಸೋಲಿನ ಭಯ ಕಾಡ್ತಿದ್ಯಾ ? ಚರ್ಚೆಗೆ ಗ್ರಾಸವಾಯ್ತು ಕಾರ್ಯಕ್ರದಲ್ಲಿ ಶಾಸಕ ಡಾ. ಅನ್ನದಾನಿ ಹೇಳಿಕೆ. ನೀವು ನನ್ನ ಕೈ ಬಿಟ್ರೆ ನಾನು ಹಾಡು ಹೇಳಿಕೊಂಡು ಜೀವನ ಮಾಡ್ತಿನಿ ಎಂದು ಮಂಡ್ಯ ಜಿಲ್ಲೆ ಮಳವಳ್ಳಿಯ ಕನಕ ಜಯಂತಿ ಕಾರ್ಯಕ್ರಮದಲ್ಲಿ ಕೆ.ಅನ್ನದಾನಿ ಹೇಳಿದ್ದಾರೆ.
ದೇವಾಲಯದ ಪೂಜೆ ಸಮಯಕ್ಕೆ ಸರಿಯಾಗಿ ಆಗಮಿಸಿ ಪ್ರಸಾದ ಸ್ವೀಕರಿಸುವ ಕೋತಿಯೊಂದರ ಈಗ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಪೂಜೆ ಮಾಡಿ ಮಂಗಳಾರತಿ ನೆರವೇರಿದ ನಂತರ ದೇವಾಲಯದ ಗರ್ಭಗುಡಿಗೆ ತೆರಳಿ ಪ್ರಸಾದ ತಿನ್ನುತ್ತಂತೆ.
ಮಂಡ್ಯದ ಮಳವಳ್ಳಿಯ ಹಲಗೂರಿನ ಪ್ರಸಿದ್ದ ಮುತ್ತತ್ತಿಯಲ್ಲಿರುವ ಮುತ್ತೆತ್ತರಾಯಸ್ವಾಮಿ ದೇವಸ್ಥಾನಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಭೇಟಿ ನೀಡಿದ್ದು, ಮುತ್ತೆತ್ತರಾಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾ
ShivaRajkumar visit to Nimishambha Temple : ಇಂದು ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಹಿನ್ನೆಲೆ ಅಪ್ಪು ಹಿರಿಯ ಸಹೋದರ ನಟ ಶಿವರಾಜ್ ಕುಮಾರ್ ಮತ್ತು ಕುಟುಂಬದವರು ನಿಮಿಷಾಂಭ ದೇಗುಲಕ್ಕೆ ಭೇಟಿ ನೀಡಿದರು.
ಮಂಡ್ಯದಲ್ಲಿ ಹೆದ್ದಾರಿ ತೆರವಿಗೆ ಬೆಳ್ಳಂಬೆಳಿಗ್ಗೆ ಜೆಸಿಬಿ ಘರ್ಜನೆ. ಇಂಡುವಾಳು ಗ್ರಾಮದಲ್ಲಿ ಹೆದ್ದಾರಿಗಾಗಿ ಮನೆ ತೆರವಿಗೆ ಮುಂದಾದ ಅಧಿಕಾರಿಗಳು. ಅಧಿಕಾರಿಗಳ ವಿರುದ್ಧ ಮನೆ ಕಳೆದುಕೊಂಡವರ ಆಕ್ರೋಶ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.