ಮಂಡ್ಯ: ಮಕ್ಕಳು ಪೂರಕವಾದ ಆಹಾರ ಸೇವಿಸಿ, ವಿದ್ಯಾಭ್ಯಾಸ ಪಡೆಯಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಸರ್ಕಾರ ಬಿಸಿಯೂಟ ಯೋಜನೆ ಜಾರಿಗೆ ತಂದಿದೆ. ಅಂತೆಯೇ ಈ ಯೋಜನೆಗೆ ಬೇಕಾಗುವ ಸೌಲಭ್ಯಗಳನ್ನು ಸರ್ಕಾರವೇ ನೀಡುತ್ತಿದೆ. ಆದರೆ ಹೀಗೆ ಬಂದ ಆಹಾರ ವಸ್ತುಗಳನ್ನು ಕಿರಾತಕರು ಅಕ್ರಮವಾಗಿ ಸಾಗಾಟ ಮಾಡಿ ದುಡ್ಡು ಮಾಡುತ್ತಿದ್ದ ಪ್ರಕರಣಗಳು ಅನೇಕ ಇವೆ. ಇದೀಗ ಇಂತಹ ಕೃತ್ಯವನ್ನು ಶಾಲೆಯೊಂದರ ಮುಖ್ಯ ಶಿಕ್ಷಕನೇ ಎಸಗಿರುವುದು ನಾಚಿಕೆಗೇಡಿನ ಸಂಗತಿ.
ಇದನ್ನೂ ಓದಿ: ಚಾಮುಂಡಿ ತಾಯಿಗೆ ಆಷಾಢ ಶುಕ್ರವಾರದ ಮೊದಲ ಪೂಜೆ , ದೇವಳದಲ್ಲಿ ಭಕ್ತರ ದಂಡು
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಾರೆಗೌಡನ ಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಕಾಳ ರಾಜೇಗೌಡ ತಮ್ಮ ಶಾಲೆಗೆ ಸರ್ಕಾರದಿಂದ ಬಂದ ತೊಗರಿ ಬೇಳೆಯನ್ನು ಕದ್ದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಶಾಲೆಯಿಂದ ಬಿಸಿಯೂಟದ ಎರಡು ಮೂಟೆ ಬೇಳೆ ಕದ್ದು ಅಂಗಡಿಗೆ ಸಾಗಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ.
ಶಾಲೆಯಲ್ಲಿ ಕದ್ದ ಬೇಳೆಯನ್ನು ಆಟೋದಲ್ಲಿ ಹಲಗೂರಿನ ಅಂಗಡಿಗೆ ಸಾಗಿಸಿದ್ದ ವೇಳೆ ಸ್ಥಳೀಯ ವ್ಯಕ್ತಿಗಳು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಈ ಸಂದರ್ಭದಲ್ಲಿ ಇದು ಕಳ್ಳ ಸಾಗಾಣಿಕೆ ಎಂದು ತಿಳಿದುಬಂದಿದೆ. ಇನ್ನು ಕದ್ದಿರುವ ಬೇಳೆಯ ಸಾಕ್ಷ್ಯದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರು ಹರಿಬಿಟ್ಟಿದ್ದಾರೆ.
ಘಟನೆ ಬಗ್ಗೆ ತಿಳಿದ ಜನರು ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಸದ್ಯ ವಿಡಿಯೋ ಸಾಕ್ಷ್ಯದ ಆಧಾರದ ಮೇಲೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮುಖ್ಯ ಶಿಕ್ಷಕನಿಗೆ ನೋಟೀಸ್ ಜಾರಿಗೊಳಿಸಿದ್ದಾರೆ. ಜೊತೆಗೆ ಕಳ್ಳತನ ವಿಡಿಯೋದೊಂದಿಗೆ ಚರಿಗೆ ಬಿಸಿಯೂಟದ ಅಧಿಕಾರಿ ದೂರು ನೀಡಿದ್ದಾರೆ.
ಇದನ್ನೂ ಓದಿ: Sarkari Naukri: ವಿದ್ಯುತ್ ಇಲಾಖೆಯಲ್ಲಿ ಸರ್ಕಾರಿ ಕೆಲಸ
ವಿದ್ಯೆ ನೀಡಬೇಕಾದ ಗುರುವೇ ಕಳ್ಳತನದ ದಾರಿ ಹಿಡಿದಿರುವುದು ದುರಾದೃಷ್ಟವೇ ಸರಿ. ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.