ಕನ್ನಡ ಸಿನಿಮಾಗಳಿಗೆ ದೇಶಾದ್ಯಂತ ಬಹುಬೇಡಿಕೆ ಹೆಚ್ಚಾಗಿದೆ. ಹೊರ ದೇಶಗಳಲ್ಲಿಯೂ ಸಹ ಕನ್ನಡಿಗರ ಚಿತ್ರಗಳು ಸಖತ್ ಸೌಂಡ್ ಮಾಡುತ್ತಿವೆ. ಆರ್ಆರ್ಆರ್ ನಂತರ ಇದೀಗ ಆಸ್ಕರ್ ಅಂಗಳಕ್ಕೆ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಕಾಂತಾರ ಮತ್ತು ಅನೂಪ್ ಭಂಡಾರಿ ನಿರ್ದೇಶನ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಪಾದಾರ್ಪಣೆ ಮಾಡಿದೆ. ಆದ್ರೆ ಯಾರ ಮೂಡಿಗೆ ಪ್ರತಿಷ್ಠಿತ 95ನೇ ಆಸ್ಕರ್ ಅಕಾಡಮಿ ಪ್ರಶಸ್ತಿ ಲಭಿಸುತ್ತೆ ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ.
Kantara in Oscars Race: ಈಗಾಗಲೇ ಆಸ್ಕರ್ ರೇಸ್ನಲ್ಲಿರುವ 301 ಸಿನಿಮಾಗಳು ಅರ್ಹತಾ ಸುತ್ತನ್ನು ಪಾಸ್ ಮಾಡಿವೆ. ಆಸ್ಕರ್ ಸದಸ್ಯರು ಮತ ಚಲಾಯಿಸಿದರೆ ‘ಕಾಂತಾರ’ ಸಿನಿಮಾ ಮುಖ್ಯ ನಾಮಿನೇಷನ್ಗೆ ಎಂಟ್ರಿ ಕೊಡಲಿದೆ.
ದಿ ಡಿವೈನ್ ಬ್ಲಾಕ್ಬಸ್ಟರ್ ಸಿನಿಮಾ ʼಕಾಂತಾರʼ ಇಂದಿಗೆ ಬರೋಬ್ಬರಿ 100 ದಿನಗಳನ್ನು ಪೂರೈಸಿದೆ. ಬಿಡುಗಡೆಯಾದ ಮೊದಲ ದಿನದಿಂದ ಅಬ್ಬರಿಸಲು ಪ್ರಾರಂಭಿಸಿದ ಕನ್ನಡಿಗನ ಸಿನಿಮಾ ದೇಶಾದ್ಯಂತ ಹಬ್ಬಿ ಚಿತ್ರಮಂದಿಗಳನ್ನು ದೇಗುಲವನ್ನಾಗಿಸಿತ್ತು. ಅಲ್ಲದೆ, ಗಡಿ ಮೀರಿ ಸಿನಿ ಪ್ರೇಮಿಗಳ ಮನಗೆದ್ದ ಚಿತ್ರಕ್ಕೆ ಭಾರತೀಯ ಸಿನಿರಂಗ ತಲೆಬಾಗಿತ್ತು. ಹಲವಾರು ದಾಖಲೆಗಳನ್ನು ಮೆಟ್ಟಿನಿಂತ ರಿಷಬ್ ಶೆಟ್ಟಿ ಸಿನಿಮಾ ಇಂದು ಶತದಿನವನ್ನು ಪೂರೈಸಿದೆ.
Similar Incident to Kantara Cinema: ಇದೀಗ ಕಾಂತಾರ ಸಿನಿಮಾದಲ್ಲಿ ಕಂಡುಬಂದ ದೃಶ್ಯವೊಂದು ನಿಜವಾಗಿದ್ದು, ಈ ಸುದ್ದಿ ಭಾರೀ ವೈರಲ್ ಆಗುತ್ತಿದೆ. ಕಾಂತಾರ ಸಿನಿಮಾದಲ್ಲಿ ಅನಾವರಣಗೊಂಡ ದೈವ ಮತ್ತು ಕೋರ್ಟ್ ನ ಸನ್ನಿವೇಶದ ಕಥೆ ಉಡುಪಿಯಲ್ಲಿ ನಡೆದಿದೆ. ದೈವದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ಆಕಸ್ಮಿಕವಾಗಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ
Sapthami Gowda: ಸಿಂಗಾರ ಸಿರಿ ಸಪ್ತಮಿ ಗೌಡ ಅಂದ್ರೆ ಯುವಕರ ಮನಸ್ಸಲ್ಲಿ ಹೂವರಳಿದಂತೆ ಭಾಸವಾಗುತ್ತದೆ. ಅದರಲ್ಲೂ ಅವರ ಸೀರೆ ಲುಕ್ ಅಂತೂ ಸಖತ್ ಆಗಿರುತ್ತಾರೆ. ಸೀರೆಯಲ್ಲಿ ಈ ನೀರೆಯನ್ನು ಕಂಡ ಅನೇಕರು ಫಿದಾ ಆಗಿದ್ದಾರೆ.
ಈ ವರ್ಷ ಕನ್ನಡ ಇಂಡಸ್ಟ್ರಿಯಿಂದ ನಮಗೆ ಸಿಕ್ಕ ಮತ್ತೊಂದು ರತ್ನ ರಿಷಬ್ ಶೆಟ್ಟಿಯವರ 'ಕಾಂತಾರ' ಸಿನಿಮಾ ಎಂದರೆ ಅದು ತಪ್ಪಾಗಲಾರದು. ಹೌದು, ಈಗ ಇದು ಇಡೀ ದೇಶದಲ್ಲಿ ತನ್ನ ವಿಭಿನ್ನ ಕಥಾ ಹಂದರದಿಂದಾಗಿ ದೇಶದಲ್ಲೆಡೆ ಸಾಕಷ್ಟು ಚರ್ಚೆಗೆ ಒಳಗಾಗಿದೆ.
Kantara star cast fees: ಕಾಂತಾರ ಈ ವರ್ಷದ ದೊಡ್ಡ ಬ್ಲಾಕ್ಬಸ್ಟರ್ಗಳಲ್ಲಿ ಒಂದಾಗಿದೆ. ಇದರಲ್ಲಿ ರಿಷಬ್ ಶೆಟ್ಟಿ ಅವರು ಇತರ ಜನಪ್ರಿಯ ತಾರಾಗಣದ ಜೊತೆ ನಾಯಕರಾಗಿ ನಟಿಸಿದ್ದಾರೆ. ಕಾಂತಾರ ಚಿತ್ರ ಬಿಡುಗಡೆಯಾದ ಮೇಲೆ ವಿಶ್ವಾದ್ಯಂತ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕಾಂತಾರವು ಬಾಕ್ಸಾಫೀಸ್ನಲ್ಲಿ ಈ ದೊಡ್ಡ ಕಲೆಕ್ಷನ್ ಮಾಡಿದ ವರ್ಷದ ಎರಡನೇ ಕನ್ನಡ ಚಲನಚಿತ್ರವಾಗಿದೆ.
ಥಿಯೇಟರ್ಗಳಲ್ಲಿ ಕ್ರಿಯೇಟ್ ಮಾಡಿದ್ದ ಹವಾ ಕಡಿಮೆಯಾದ್ರೂ ಸಹ ಓಟಿಟಿಯಲ್ಲಿ ದಿ ಡಿವೈನ್ ಬ್ಲಾಕ್ಬಸ್ಟರ್ ಸಿನಿಮಾ ಕಾಂತಾರ ಅಬ್ಬರಿಸುತ್ತಿದೆ. ಬಾಲಿವುಡ್ ನಟ ನಟಿಯರು ರಿಷಬ್ ಶೆಟ್ಟಿ ಸಿನಿಮಾಗೆ ಫಿದಾ ಆಗುತ್ತಿದ್ದಾರೆ. ಇದೀಗ ಬಿಟೌನ್ ಬೆಡಗಿ ನಟಿ ಜಾನ್ವಿ ಕಪೂರ್ ʼಕಾಂತಾರ'ವನ್ನು ವೀಕ್ಷಿಸಿದ್ದು, ರಿಷಬ್ ಶೆಟ್ಟಿ ನಟನೆ, ನಿರ್ದೇಶನ ನೋಡಿ ಅಚ್ಚರಿಗೊಂಡಿದ್ದು, ಸೂಪರ್ ಸರ್ ಅಂತ ಹಾಡಿ ಹೊಗಳಿದ್ದಾರೆ.
Anurag Kashyap On KGF: ‘ಕೆಜಿಎಫ್-2’ ರೀತಿಯ ಸಿನಿಮಾ ಮಾಡಲು ಹೋದರೆ ಗ್ಯಾರಂಟಿ ಸೋಲು ಕಾಣಬೇಕಾಗುತ್ತದೆ. ಕೆಜಿಎಫ್ ಸಿನಿಮಾದ ಹಿಂದೆ ಹೋದರೆ ಚಿತ್ರರಂಗವೇ ಹಾಳಾಗುತ್ತದೆ ಅಂತಾ ಅನುರಾಗ್ ಕಶ್ಯಪ್ ಹೇಳಿದ್ದಾರೆ.
Kamal Haasan : ರಿಷಬ್ ಶೆಟ್ಟಿ ಅವರ ಕನ್ನಡ ಬ್ಲಾಕ್ಬಸ್ಟರ್ ಕಾಂತಾರ ಬಗ್ಗೆ ನಟ ಕಮಲ್ ಹಾಸನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಮಲ್ ಹಾಸನ್ ಕಾಂತಾರ ಬಗ್ಗೆ ಸಂತಸಗೊಂಡಿದ್ದಾರೆ. 2022 ರಲ್ಲಿ ತನ್ನ ಮನಸ್ಸನ್ನು ಕದಲಿಸಿದ ಒಂದು ಚಿತ್ರ ಕಾಂತಾರ ಎಂದು ಹೇಳಿದ್ದಾರೆ.
ದಿ ಡಿವೈನ್ ಬ್ಲಾಕ್ಬಸ್ಟರ್ ಕಾಂತಾರ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಲವೆಲ್ನಲ್ಲಿ ರಿಷಬ್ ಶೆಟ್ಟಿ ಮಿಂಚುತ್ತಿದ್ದಾರೆ. ವಿಶ್ವದಾದ್ಯಂತ ಕಾಂತಾರಕ್ಕೆ ಉತ್ತಮ ವಿಮರ್ಶಾತ್ಮಕ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಬಾಲಿವುಡ್ ಮಂದಿ ಜೊತೆ ರಿಷಬ್ ಒಡನಾಟ ಹೆಚ್ಚಾಗಿದ್ದು, ಬಿಗ್ ಬಜೆಟ್ ಸಿನಿಮಾದಲ್ಲಿ ಶೆಟ್ರು ಬ್ಯುಸಿಯಾಗ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದೀಗ ರಿಷಬ್ ಶೇರ್ ಮಾಡಿಕೊಂಡಿರುವ ಫೋಟೋ ಒಂದು ಅಂತಹದ್ದೇ ಅನುಮಾನಕ್ಕೆ ಕಾರಣವಾಗಿದೆ.
ಕಾಂತಾರ ಯಶಸ್ಸನ ಮೂಲಕ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ದೇಶಾದ್ಯಂತ ಹೆಸರುವಾಸಿಯಾಗಿದ್ದಾರೆ. ಅಲ್ಲದೆ, ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಕನ್ನಡದ ಕಾಂತಾರ ಎಲ್ಲರನ್ನು ಆಕರ್ಷಿಸುತ್ತಿದೆ. ಭಾಷೆಯ ಅಡೆತಡೆಗಳನ್ನು ದಾಟಿ 2022 ರ ಅತಿದೊಡ್ಡ ಬ್ಲಾಕ್ಬಸ್ಟರ್ಸಿನಿಮಾಗಳಲ್ಲಿ ಒಂದಾಗಿ ಕಾಂತಾರ ಹೊರಹೊಮ್ಮಿದೆ. ಇತ್ತೀಚೆಗೆ ನವಾಜುದ್ದೀನ್ ಸಿದ್ದಿಕಿ ಅವರು ರಿಷಬ್ ಶೆಟ್ಟಿ ಬಗ್ಗೆ ಅಸೂಯೆ ಇದೆ ಅಂತ ಹೇಳಿದ್ದು, ಇದಕ್ಕೆ ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
Rajamouli on Kantara: ಕನ್ನಡ ಚಿತ್ರ ಕಾಂತಾರ ತನ್ನ ಯಶಸ್ಸಿನ ಮೂಲಕ ಹಲವಾರು ದಾಖಲೆಗಳನ್ನು ಮುರಿಯುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನದ ಮತ್ತು ಅಭಿನಯದ ಚಿತ್ರವು ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿ ಮತ್ತು ಮೆಚ್ಚುಗೆಯನ್ನು ಗಳಿಸಿದೆ. ಇತ್ತೀಚೆಗೆ, RRR ನಿರ್ದೇಶಕ ಎಸ್ಎಸ್ ರಾಜಮೌಳಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
Rashmika Reacts On BAN Rumours : ರಶ್ಮಿಕಾ ತಮ್ಮ ವೃತ್ತಿಜೀವನವನ್ನು ಕನ್ನಡ ಚಿತ್ರರಂಗದಲ್ಲಿ ಕಿರಿಕ್ ಪಾರ್ಟಿ ಮೂಲಕ ಆರಂಭಿಸಿದರು. ಆದರೆ ಇತ್ತೀಚೆಗೆ, ಕಾಂತಾರಾ ಚಿತ್ರದ ಕುರಿತು ಕಾಮೆಂಟ್ ಮಾಡಿದ್ದಕ್ಕಾಗಿ ಕನ್ನಡ ಚಲನಚಿತ್ರ ಪ್ರಿಯರು ಅವರನ್ನು ಟ್ರೋಲ್ ಮಾಡಿದರು.
Kantara On Netflix: ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಬ್ಲಾಕ್ಬಸ್ಟರ್ ‘ಕಾಂತಾರ’ ಸಿನಿಮಾ ಹಿಂದಿ ಭಾಷೆಯಲ್ಲಿ ಡಿಸೆಂಬರ್ 9ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಈಗಾಗಲೇ ‘ಕಾಂತಾರ’ ಬಿಡುಗಡೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.