Anurag Kashyap On KGF: ‘ಕೆಜಿಎಫ್-2’ ರೀತಿಯ ಸಿನಿಮಾ ಮಾಡಲು ಹೋದರೆ ಗ್ಯಾರಂಟಿ ಸೋಲು ಕಾಣಬೇಕಾಗುತ್ತದೆ. ಕೆಜಿಎಫ್ ಸಿನಿಮಾದ ಹಿಂದೆ ಹೋದರೆ ಚಿತ್ರರಂಗವೇ ಹಾಳಾಗುತ್ತದೆ ಅಂತಾ ಅನುರಾಗ್ ಕಶ್ಯಪ್ ಹೇಳಿದ್ದಾರೆ.
ಬಾಲಿವುಡ್ ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರು ಚಲನಚಿತ್ರೋದ್ಯಮವನ್ನು ಬಾಧಿಸುತ್ತಿರುವ ಸಮಸ್ಯೆಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಅಲ್ಲದೆ, ಪ್ಯಾನ್-ಇಂಡಿಯನ್ ಹಿಟ್ಗಳನ್ನು ತಯಾರಿಸುವ ಪ್ರವೃತ್ತಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಗಲಟ್ಟಾ ಪ್ಲಸ್ ಆಯೋಜಿಸಿದ್ದ ದುಂಡುಮೇಜಿನ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಕಶ್ಯಪ್, ಮರಾಠಿ ನಿರ್ದೇಶಕ ನಾಗರಾಜ ಮಂಜುಳೆ ಅವರ ಸೈರಾಟ್ ಚಿತ್ರದ ಯಶಸ್ಸು ಬಹುಶಃ ಮರಾಠಿ ಸಿನಿಮಾವನ್ನು 'ನಾಶ' ಮಾಡಬಹುದೆಂದು ಹೇಳಿದ್ದನ್ನು ನೆನಪಿಸಿಕೊಂಡರು.
Taapsee Pannu On Film Boycott: ತಾಪ್ಸಿ ಪನ್ನು ಅಭಿನಯದ 'ದೊಬಾರಾ' ಚಿತ್ರ ಶೀಘ್ರದಲ್ಲಿಯೇ ತೆರೆಕಾಣಲಿದೆ. ಏತನ್ಮಧ್ಯೆ ತನ್ನದೇ ಅಭಿನಯದ ಚಿತ್ರವನ್ನು ಬಹಿಷ್ಕರಿಸಲು ಮನವಿ ಮಾಡಿಕೊಂಡಿರುವುದು ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
Taapsee Pannu On Kofee With Karan - ಖ್ಯಾತ ಬಾಲಿವುಡ್ ನಟಿ ತಾಪ್ಸಿ ಪನ್ನು ಶೀಘ್ರದಲ್ಲಿಯೇ ತಮ್ಮ ಮುಂಬರುವ ಚಿತ್ರ 'ದೋಬಾರಾ'ನಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ತಾಪ್ಸಿ ಭಾರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಳೆ. ಇತ್ತೀಚೆಗಷ್ಟೇ ಲೈವ್ ಪ್ರೋಮೊಶನಲ್ ಇವೆಂಟ್ ನಲ್ಲಿ 'ಕಾಫೀ ವಿಥ್ ಕರಣ್' ಕುರಿತು ತಾಪ್ಸಿ ನೀಡಿರುವ ಹೇಳಿಕೆ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ ಮತ್ತು ತಾಪ್ಸಿ ಸಾಕಷ್ಟು ಹೆಡ್ ಲೈನ್ ಗಿಟ್ಟಿಸುತ್ತಿದ್ದಾಳೆ.
ರಾಜ್ ಬಿ ಶೆಟ್ಟಿ ಮತ್ತು ರಿಷಭ್ ಶೆಟ್ಟಿ ಕಾಂಬೋದ 'ಗರುಡ ಗಮನ ವೃಷಭ ವಾಹನ' ಸಿನಿಮಾ ಜೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸ್ತಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಜೀ5 ಒಟಿಟಿಗೆ ಎಂಟ್ರಿ ಕೊಟ್ಟ ಈ ಸಿನಿಮಾ ಮೂರೇ ದಿನದಲ್ಲಿ ದಾಖಲೆ ಬರೆದಿತ್ತು. 'ಗರುಡ ಗಮನ ವೃಷಭ ವಾಹನ' ಸಿನಿಮಾ ಮೊದಲು ಮೂರು ದಿನಗಳಲ್ಲಿಗಲ್ಲಿ ಬರೋಬ್ಬರಿ 8 ಕೋಟಿ ನಿಮಿಷ ವೀಕ್ಷಣೆ ಕಂಡಿತ್ತು. ಇದೀಗ ಈ ಸಿನಿಮಾವನ್ನು ಬಾಲಿವುಡ್ ಸ್ಟಾರ್ ಅನುರಾಗ್ ಕಶ್ಯಪ್ ಮೆಚ್ಚಿಕೊಂಡಿದ್ದಾರೆ.
ಜನಸಮೂಹ ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದ ಇತಿಹಾಸಕಾರ ರಾಮಚಂದ್ರ ಗುಹಾ, ಮಣಿರತ್ನಂ ಮತ್ತು ಅಪರ್ಣ ಸೇನ್ ಸೇರಿದಂತೆ ಸುಮಾರು 50 ಗಣ್ಯರ ವಿರುದ್ಧ ಬಿಹಾರದ ಮುಜಾಫರ್ಪುರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಅಳಿಸಿದ್ದಾರೆ. ತಮ್ಮ ಪೋಷಕರು ಮತ್ತು ಮಗಳಿಗೆ ಬೆದರಿಕೆಗಳು ಬರುತ್ತಿರುವ ಹಿನ್ನಲೆಯಲ್ಲಿ ಟ್ವಿಟ್ಟರ್ ಬಿಡಲು ನಿರ್ಧರಿಸಿರುವುದಾಗಿ ಚಲನಚಿತ್ರ ನಿರ್ಮಾಪಕ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.