Oscar For Kantara: 2 ವಿಭಾಗಗಳಲ್ಲಿ ಆಸ್ಕರ್​ಗೆ ಅರ್ಹತೆ ಪಡೆದ ಕಾಂತಾರ!

Kantara in Oscars Race: ಈಗಾಗಲೇ ಆಸ್ಕರ್ ರೇಸ್‍ನಲ್ಲಿರುವ 301 ಸಿನಿಮಾಗಳು ಅರ್ಹತಾ ಸುತ್ತನ್ನು ಪಾಸ್ ಮಾಡಿವೆ. ಆಸ್ಕರ್ ಸದಸ್ಯರು​ ಮತ ಚಲಾಯಿಸಿದರೆ ‘ಕಾಂತಾರ’ ಸಿನಿಮಾ ಮುಖ್ಯ ನಾಮಿನೇಷನ್​ಗೆ ಎಂಟ್ರಿ ಕೊಡಲಿದೆ.

Written by - Puttaraj K Alur | Last Updated : Jan 10, 2023, 11:59 AM IST
  • ಆಸ್ಕರ್ ಪ್ರಶಸ್ತಿಗೆ ಮತ್ತಷ್ಟು ಹತ್ತಿರವಾದ ಕನ್ನಡದ ಹೆಮ್ಮೆಯ ‘ಕಾಂತಾರ’ ಸಿನಿಮಾ
  • ಆಸ್ಕರ್ ರೇಸ್‍ನ 2 ವಿಭಾಗಗಳಲ್ಲಿ ಅರ್ಹತೆ ಗಳಿಸಿದ ರಿಶಬ್ ಶೆಟ್ಟಿ ನಿರ್ದೇಶನದ ಸಿನಿಮಾ
  • ದೈವಗಳ ಆಶೀರ್ವಾದದಿಂದ ಕನ್ನಡ ಸಿನಿಮಾಗೆ ಸಿಗುತ್ತಾ ಪ್ರತಿಷ್ಠಿತ ಪ್ರಶಸ್ತಿಯ ಗರಿಮೆ?
Oscar For Kantara: 2 ವಿಭಾಗಗಳಲ್ಲಿ ಆಸ್ಕರ್​ಗೆ ಅರ್ಹತೆ ಪಡೆದ ಕಾಂತಾರ! title=
ಕನ್ನಡದ ‘ಕಾಂತಾರ’ದ ಮತ್ತೊಂದು ಸಾಧನೆ

ಬೆಂಗಳೂರು: ಬಾಕ್ಸ್ ಆಫೀಸ್‍ನಲ್ಲಿ ಧೂಳಿಪಟ ಮಾಡಿ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಿರುವ ‘ಕಾಂತಾರ’ ಇದೀಗ ಆಸ್ಕರ್ ಪ್ರಶಸ್ತಿಗೆ ಮತ್ತಷ್ಟು ಹತ್ತಿರವಾಗಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಸೂಪರ್ ಹಿಟ್ ‘ಕಾಂತಾರ’ ಮತ್ತೊಂದು ಮೈಲಿಗಲ್ಲು ನಿರ್ಮಿಸಲು ಸಜ್ಜಾಗಿದೆ.

ಹೌದು, ಕೇವಲ 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕನ್ನಡದ ಹೆಮ್ಮೆಯ ‘ಕಾಂತಾರ’ ಆಸ್ಕರ್ ರೇಸ್‍ಗೆ ಎಂಟ್ರಿ ಕೊಟ್ಟಿದ್ದು, 2 ವಿಭಾಗಗಳಲ್ಲಿ ಅರ್ಹತೆ ಪಡೆದುಕೊಂಡಿದೆ. ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟ ವಿಭಾಗದಲ್ಲಿ ‘ಕಾಂತಾರಾ’ ಅರ್ಹತಾ ಸುತ್ತು ಪಾಸ್ ಮಾಡಿದ್ದು, ಕನ್ನಡಿಗರ ಖುಷಿಯನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಗುಡ್‌ ನ್ಯೂಸ್‌ : ಮೊದಲ ಮಗುವಿನ ನಿರೀಕ್ಷೆಯಲ್ಲಿ ನಿವೇದಿತ-ಚಂದನ್‌ ಶೆಟ್ಟಿ..!

ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಮಂಗಳವಾರ​ ಟ್ವೀಟ್ ಮಾಡಿದೆ. ‘ಕಾಂತಾರ’ ಚಿತ್ರವು 2 ಆಸ್ಕರ್ ಅರ್ಹತೆಗಳನ್ನು ಪಡೆದಿರುವ ವಿಚಾರ ತಿಳಿಸಲು ನಮಗೆ ಖುಷಿಯಾಗುತ್ತಿದೆ. ನಮ್ಮನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು’ ಎಂದು ಹೇಳಿದೆ. ಇತ್ತೀಚೆಗಷ್ಟೇ ‘ಕಾಂತಾರ’ ಸಿನಿಮಾ ಯಶಸ್ವಿಯಾಗಿ 100 ದಿನ ಪೂರೈಸಿತ್ತು.  

ಮುಖ್ಯ ನಾಮಿನೇಷನ್​ಗೆ ಎಂಟ್ರಿ?

ಈಗಾಗಲೇ ಆಸ್ಕರ್ ರೇಸ್‍ನಲ್ಲಿರುವ 301 ಸಿನಿಮಾಗಳು ಅರ್ಹತಾ ಸುತ್ತನ್ನು ಪಾಸ್ ಮಾಡಿವೆ. ಆಸ್ಕರ್ ಸದಸ್ಯರು​ ಮತ ಚಲಾಯಿಸಿದರೆ ‘ಕಾಂತಾರ’ ಸಿನಿಮಾ ಮುಖ್ಯ ನಾಮಿನೇಷನ್​ಗೆ ಎಂಟ್ರಿ ಕೊಡಲಿದೆ. ಇನ್ನೊಂದು ಹೆಜ್ಜೆ ಇಟ್ಟರೆ ‘ಕಾಂತಾರ’ ಸಿನಿಮಾಗೆ ಪ್ರತಿಷ್ಠಿತ ಪ್ರಶಸ್ತಿಯ ಗರಿ ಸಿಗಲಿದೆ. ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ಆದರೆ ಕನ್ನಡದ ‘ಕಾಂತಾರ’ ಮಹತ್ವವ ಸಾಧನೆ ಮಾಡಿದ ಚಿತ್ರವಾಗಿ ಹೊರಹೊಮ್ಮಲಿದೆ.

‘ಹೊಂಬಾಳೆ ಫಿಲ್ಮ್ಸ್​​’ ಬ್ಯಾನರ್​ ಅಡಿ ಮೂಡಿಬಂದಿರುವ ‘ಕಾಂತಾರ’ದಲ್ಲಿ ತುಳುನಾಡಿನ ಸಂಸ್ಕೃತಿ ಕಂಬಳ, ಭೂತಕೋಲ, ದೈವಾರಾಧನೆ ಬಗ್ಗೆಅದ್ಭುತವಾಗಿ ಕಟ್ಟಿಕೊಡಲಾಗಿದೆ. ರಿಷಬ್​ ಶೆಟ್ಟಿಗೆ ನಾಯಕಿಯಾಗಿ ಸಪ್ತಮಿಗೌಡ ನಟಿಸಿದ್ದಾರೆ. ಅಚ್ಯುತ್​ ಕುಮಾರ್​, ಪ್ರಮೋದ್​​ ಶೆಟ್ಟಿ, ಕಿಶೋರ್​ ಸೇರಿದಂತೆ ಹಲವಾರು ನಟ-ನಟಿಯರು ಅಭಿನಯಿಸಿದ್ದಾರೆ.

ಇದನ್ನೂ ಓದಿ: Viral Video: ಈ ಬಾರಿ ಹಾಟ್ನೆಸ್ ನಿಂದಲ್ಲ ಫಿಟ್ನೆಸ್ನಿಂದ ಅಭಿಮಾನಿಗಳನ್ನು ದಂಗಾಗಿಸಿದ ದಿಶಾ ಪಾಟ್ನಿ, ವಿಡಿಯೋ ನೋಡಿ

ಕೇವಲ 18 ಕೋಟಿ ರೂ.ನಲ್ಲಿ ನಿರ್ಮಿಸಿದ ‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ಬರೋಬ್ಬರಿ 400 ಕೋಟಿ ರೂ.ಗೂ ಹೆಚ್ಚಿ ಗಳಿಕೆ ಮಾಡಿದೆ. ಅಮೆಜಾನ್ ಪ್ರೈಮ್‍ನಲ್ಲಿ ಕನ್ನಡ, ತೆಲುಗ ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ರಿಲೀಸ್ ಆದರೆ, ನೆಟ್‍ಫ್ಲಿಕ್ಸ್‍ನಲ್ಲಿ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದೆ. ಜೊತೆಗೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ‘ಸ್ಟಾರ್ ಸುವರ್ಣ’ದಲ್ಲಿ ‘ಕಾಂತಾರ’ ಬಿಡುಗಡೆಯಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News