‘ಕೆಜಿಎಫ್’ ಸಿನಿಮಾ ಕಾಪಿ ಮಾಡಲು ಹೋದರೆ ಸೋಲು ಗ್ಯಾರಂಟಿ: ಬಾಲಿವುಡ್ ನಿರ್ದೇಶಕನ ಎಚ್ಚರಿಕೆ

Anurag Kashyap On KGF: ‘ಕೆಜಿಎಫ್-2’ ರೀತಿಯ ಸಿನಿಮಾ ಮಾಡಲು ಹೋದರೆ ಗ್ಯಾರಂಟಿ ಸೋಲು ಕಾಣಬೇಕಾಗುತ್ತದೆ. ಕೆಜಿಎಫ್ ಸಿನಿಮಾದ ಹಿಂದೆ ಹೋದರೆ ಚಿತ್ರರಂಗವೇ ಹಾಳಾಗುತ್ತದೆ ಅಂತಾ ಅನುರಾಗ್ ಕಶ್ಯಪ್ ಹೇಳಿದ್ದಾರೆ.

Written by - Puttaraj K Alur | Last Updated : Dec 13, 2022, 06:32 PM IST
  • ಇಂದು ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಪ್ರಯತ್ನಿಸಿ ಸೋಲು ಕಾಣುತ್ತಿದ್ದಾರೆ
  • ‘ಕೆಜಿಎಫ್-2’ ರೀತಿಯ ಸಿನಿಮಾ ಮಾಡಲು ಹೋದರೆ ಗ್ಯಾರಂಟಿ ಸೋಲು ಕಾಣಬೇಕಾಗುತ್ತದೆ
  • ಬಾಲಿವುಡ್ ಹೇಗೆ ಅವನತಿ ತಲುಪಿತು ಅನ್ನೋದರ ಬಗ್ಗೆ ತಿಳಿಸಿದ ಸ್ಟಾರ್ ನಿರ್ದೇಶಕ ಅನುರಾಗ್ ಕಶ್ಯಪ್
‘ಕೆಜಿಎಫ್’ ಸಿನಿಮಾ ಕಾಪಿ ಮಾಡಲು ಹೋದರೆ ಸೋಲು ಗ್ಯಾರಂಟಿ: ಬಾಲಿವುಡ್ ನಿರ್ದೇಶಕನ ಎಚ್ಚರಿಕೆ title=
ಬಾಲಿವುಡ್‍ಗೆ ಅನುರಾಗ್ ಕಶ್ಯಪ್ ಎಚ್ಚರಿಕೆ!​ 

ಬೆಂಗಳೂರು: ದಕ್ಷಿಣ ಭಾರತದ ಸಿನಿಮಾಗಳನ್ನು ನಕಲು ಮಾಡಲು ಹೋಗಿ ಬಾಲಿವುಡ್ ಚಿತ್ರರಂಗ ಹೇಗೆ ಅವನತಿಗೆ ತಲುಪಿತು ಅನ್ನೋದರ ಬಗ್ಗೆ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಅನುರಾಗ್ ಕಶ್ಯಪ್ ಬಹಿರಂಗಪಡಿಸಿದ್ದಾರೆ.   

ಖಾಸಗಿ ಚಾನೆಲ್‍ವೊಂದರ ಸಂದರ್ಶನವೊಂದರಲ್ಲಿ ಮಾತನಾಡಿರುವ ಬಾಲಿವುಡ್‍ನ ಸ್ಟಾರ್ ನಿರ್ದೇಶಕ ಕಶ್ಯಪ್, ‘ಇಂದು ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಯಶಸ್ಸು ಶೇ.5 ರಿಂದ 10ರಷ್ಟು ಆಗಿರುತ್ತದೆ. ಕಾಂತಾರ ಮತ್ತು ಪುಷ್ಪದಂತಹ ಚಿತ್ರಗಳು ನೇಟಿವ್ ಕಥೆಗಳನ್ನು ಹೇಳಲು ಧೈರ್ಯವನ್ನು ನೀಡುತ್ತವೆ’ ಅಂತಾ ಹೇಳಿದ್ದಾರೆ.   

ಇದನ್ನೂ ಓದಿ: Shivarajkumar appu : ಅಪ್ಪಾಜಿ ಹಾಡಿದ್ದಕ್ಕಿಂತಲೂ ಅಪ್ಪು ಹಾಡಿದ್ದು ಇಂದಿಗೂ ನನ್ನ ಮನದಲ್ಲಿ ಗುನುಗುತ್ತಿದೆ..!

‘ಕೆಜಿಎಫ್-2’ ರೀತಿಯ ಸಿನಿಮಾ ಮಾಡಲು ಹೋದರೆ ಗ್ಯಾರಂಟಿ ಸೋಲು ಕಾಣಬೇಕಾಗುತ್ತದೆ. ಕೆಜಿಫ್ ಸಿನಿಮಾದ ಹಿಂದೆ ಹೋದರೆ ಚಿತ್ರರಂಗವೇ ಹಾಳಾಗುತ್ತದೆ. ದಕ್ಷಿಣ ಭಾರತೀಯರ ಸಿನಿಮಾಗಳನ್ನು ನಕಲು ಮಾಡಲು ಹೋಗಿ ಅನೇಕ ಸೋಲು ಕಂಡಿದ್ದಾರೆ. ಇಂತಹ ಪ್ರಯತ್ನಗಳಿಂದಲೇ ಬಾಲಿವುಡ್ ಸತತ ಸೋಲು ಕಾಣುತ್ತಿದೆ. ಹೀಗಾಗಿ ಕಾಪಿ ಮಾಡುವ ಮನಸ್ಥಿತಿಯಿಂದ ನಾವು ಹೊರಬರಬೇಕಾಗಿದೆ’ ಅಂತಾ ಕಶ್ಯಪ್ ಹೇಳಿದ್ದಾರೆ.

ಮರಾಠಿಯ ಸೂಪರ್ ಹಿಟ್ ಸಿನಿಮಾ ‘ಸೈರಾಟ್’ ಬಗ್ಗೆಯೂ ಮಾತನಾಡಿರುವ ಕಶ್ಯಪ್, ಕಡಿಮೆ ಬಜೆಟ್‍ನಲ್ಲಿ ನಿರ್ಮಾಣವಾದ ‘ಸೈರಾಟ್’ಗೆ ದೊಡ್ಡಮಟ್ಟದ ಯಶಸ್ಸು ಸಿಕ್ಕಿತು. ಬಾಕ್ಸಾ ಆಫೀಸ್‍ನಲ್ಲಿ ದೊಡ್ಡಮಟ್ಟದ ಯಶಸ್ಸು ಕಂಡ ಈ ಸಿನಿಮಾ ಪ್ರತಿಯೊಬ್ಬರಿಗೂ ಇಷ್ಟವಾಯಿತು. ಕಡಿಮೆ ಬಜೆಟ್‍ನಲ್ಲಿ  ಸಿನಿಮಾ ಮಾಡಿ ಕೋಟ್ಯಂತರ ಹಣ ಮಾಡಬಹುದು ಎಂಬುದನ್ನು ‘ಸೈರಾಟ್’ ತೋರಿಸಿಕೊಟ್ಟಿತು. ಆ ಬಳಿಕ ಅನೇಕರು ‘ಸೈರಾಟ್’ ಮಾದರಿಯಲ್ಲಿ ಕಡಿಮೆ ಬಜೆಟ್‍ನಲ್ಲಿ ಸಿನಿಮಾ ಮಾಡಿ ಸೋಲು ಕಂಡರು. ಇದರಿಂದ ಮರಾಠಿ ಚಿತ್ರರಂಗಕ್ಕೆ ದೊಡ್ಡ ಹೊಡೆತ ಬಿತ್ತು’ ಅಂತಾ ಕಶ್ಯಪ್ ಹೇಳಿದ್ದಾರೆ.    

ಇದನ್ನೂ ಓದಿ: Kamal Haasan: ನಾನು ಕೂಡ ಕನ್ನಡ ಚಿತ್ರರಂಗಕ್ಕೆ ಸೇರಿದನು ಎಂದ ಕಮಲ್ ಹಾಸನ್

ಕನ್ನಡದ ‘ಕಾಂತಾರ', ತೆಲುಗಿನ ‘ಪುಷ್ಪ’ದಂತಹ ಸಿನಿಮಾಗಳು ನೇಟಿವ್ ಕಥೆ ಹೊಂದಿವೆ. ಈ ರೀತಿಯ ಸಿನಿಮಾಗಳು ಇನ್ನಿತರ ಪ್ರದೇಶದ ಕಥೆ ಹೇಳಲು ಸ್ಫೂರ್ತಿ ನೀಡುತ್ತವೆ. ಆದರೆ ‘ಕೆಜಿಎಫ್’ ಪಕ್ಕಾ ಮಾಸ್ ಸಿನಿಮಾ. ಈ ರೀತಿಯ ಮಾಸ್ ಸಿನಿಮಾವನ್ನು ನಕಲು ಮಾಡುವುದು ಮೂರ್ಖತನವೆಂದು ಕಶ್ಯಪ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News