Kantara 100 days : ಹೋ... ಇದು ಬೆಳಕಲ್ಲ ʼ100 ದಿನʼದ ದರ್ಶನ..!

ದಿ ಡಿವೈನ್‌ ಬ್ಲಾಕ್ಬಸ್ಟರ್‌ ಸಿನಿಮಾ ʼಕಾಂತಾರʼ ಇಂದಿಗೆ ಬರೋಬ್ಬರಿ 100 ದಿನಗಳನ್ನು ಪೂರೈಸಿದೆ. ಬಿಡುಗಡೆಯಾದ ಮೊದಲ ದಿನದಿಂದ ಅಬ್ಬರಿಸಲು ಪ್ರಾರಂಭಿಸಿದ ಕನ್ನಡಿಗನ ಸಿನಿಮಾ ದೇಶಾದ್ಯಂತ ಹಬ್ಬಿ ಚಿತ್ರಮಂದಿಗಳನ್ನು ದೇಗುಲವನ್ನಾಗಿಸಿತ್ತು. ಅಲ್ಲದೆ, ಗಡಿ ಮೀರಿ ಸಿನಿ ಪ್ರೇಮಿಗಳ ಮನಗೆದ್ದ ಚಿತ್ರಕ್ಕೆ ಭಾರತೀಯ ಸಿನಿರಂಗ ತಲೆಬಾಗಿತ್ತು. ಹಲವಾರು ದಾಖಲೆಗಳನ್ನು ಮೆಟ್ಟಿನಿಂತ ರಿಷಬ್‌ ಶೆಟ್ಟಿ ಸಿನಿಮಾ ಇಂದು ಶತದಿನವನ್ನು ಪೂರೈಸಿದೆ.

Written by - Krishna N K | Last Updated : Jan 7, 2023, 01:25 PM IST
  • ದಿ ಡಿವೈನ್‌ ಬ್ಲಾಕ್ಬಸ್ಟರ್‌ ಸಿನಿಮಾ ʼಕಾಂತಾರʼ ಇಂದಿಗೆ ಬರೋಬ್ಬರಿ 100 ದಿನಗಳನ್ನು ಪೂರೈಸಿದೆ.
  • ಕೇವಲ 16 ಕೋಟಿ ಬಜೆಟ್‌ನಲ್ಲಿ ಕಾಂತಾರ ಸಿನಿಮಾ ನಿರ್ಮಾಣವಾಗಿತ್ತು.
  • ಕರ್ನಾಟಕದಲ್ಲಿ ದೊಡ್ಡ ಮಟ್ಟದ ಗೆಲುವು ಸಿಕ್ಕಿತು. ನಂತರ ಭಾರತೀಯ ಸಿನಿರಸಿಕರು ಕನ್ನಡಿಗನ ಕರಾಮತ್ತಿಗೆ ಬಹುಪರಾಕ್‌ ಎಂದರು.
Kantara 100 days : ಹೋ... ಇದು ಬೆಳಕಲ್ಲ ʼ100 ದಿನʼದ ದರ್ಶನ..! title=

100 Days Of Kantara : ದಿ ಡಿವೈನ್‌ ಬ್ಲಾಕ್ಬಸ್ಟರ್‌ ಸಿನಿಮಾ ʼಕಾಂತಾರʼ ಇಂದಿಗೆ ಬರೋಬ್ಬರಿ 100 ದಿನಗಳನ್ನು ಪೂರೈಸಿದೆ. ಬಿಡುಗಡೆಯಾದ ಮೊದಲ ದಿನದಿಂದ ಅಬ್ಬರಿಸಲು ಪ್ರಾರಂಭಿಸಿದ ಕನ್ನಡಿಗನ ಸಿನಿಮಾ ದೇಶಾದ್ಯಂತ ಹಬ್ಬಿ ಚಿತ್ರಮಂದಿಗಳನ್ನು ದೇಗುಲವನ್ನಾಗಿಸಿತ್ತು. ಅಲ್ಲದೆ, ಗಡಿ ಮೀರಿ ಸಿನಿ ಪ್ರೇಮಿಗಳ ಮನಗೆದ್ದ ಚಿತ್ರಕ್ಕೆ ಭಾರತೀಯ ಸಿನಿರಂಗ ತಲೆಬಾಗಿತ್ತು. ಹಲವಾರು ದಾಖಲೆಗಳನ್ನು ಮೆಟ್ಟಿನಿಂತ ರಿಷಬ್‌ ಶೆಟ್ಟಿ ಸಿನಿಮಾ ಇಂದು ಶತದಿನವನ್ನು ಪೂರೈಸಿದೆ.

ಹೊಂಬಾಳೆ ಫಿಲಂಸ್‌ ಬ್ಯಾನರ್‌ ಅಡಿಯಲ್ಲಿ ವಿಜಯ್‌ ಕಿರಗಂದೂರು ನಿರ್ಮಾಣದ ಕಾಂತಾರ ಸಿನಿಮಾವನ್ನು ರಿಷಬ್‌ ಶೆಟ್ಟಿ ನಿರ್ದೇಶಿಸಿ ನಟಿಸಿದ್ದರು. ಕೇವಲ 16 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ, ಸುಮಾರು ರೂ. 366 ಕೋಟಿಗೂ ಅಧಿಕ ಹಣ ಗಳಿಸುವ ಮೂಲಕ ಬಾಕ್ಸ್ ಆಫೀಸ್‌ನ್ನು ಪುಡಿ ಪುಡಿ ಮಾಡಿತ್ತು. ಮೊದಲು ಕನ್ನಡ ಭಾಷೆಯಲ್ಲಿ ಸೆಪ್ಟೆಂಬರ್‌ 30ರಂದು ಬಿಡುಗಡೆಯಾದ ʼಕಾಂತಾರʼಗೆ ಕರ್ನಾಟಕದಲ್ಲಿ ದೊಡ್ಡ ಮಟ್ಟದ ಗೆಲುವು ಸಿಕ್ಕಿತು. ನಂತರ ಭಾರತೀಯ ಸಿನಿರಸಿಕರು ಕನ್ನಡಿಗನ ಕರಾಮತ್ತಿಗೆ ಬಹುಪರಾಕ್‌ ಎಂದರು.

ಇದನ್ನೂ ಓದಿ: Veera Simha Reddy : ಸಿಂಹದ ಮುಂದೆ ಆಕ್ಟ್‌ ಮಾಡೋದು ಕಷ್ಟ.. ಜೈ ಬಾಲಯ್ಯ ಎಂದ ವಿಜಿ..!

ಕರಾವಳಿಯ ಸಂಪ್ರದಾಯದ ಕಥಾಹಂದರ ಹೊಂದಿರುವ ʼಕಾಂತಾರʼ ಸಿನಿಮಾ ದೈವಾರಾಧನೆ ಹಾಗೂ ಮೂಲ ಸೊಗಡಿನ ದೃಶ್ಯಕಾವ್ಯ. ರಿಷಬ್‌ ಶೆಟ್ಟಿ ನಟನೆ ನೋಡಿದ ಜನರು ಬೆಚ್ಚಿ ಬೆರಗಾಗಿದ್ದರು. ಹಾಸ್ಯ ಪ್ರದಾನ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ನಟನೊಬ್ಬನ ಆವೇಶ ಭರಿತ ಅವತಾರ ನೋಡಿ ಚಿತ್ರಮಂದಿರಲ್ಲಿ ಕುಳಿತಿದ್ದ ಪ್ರೇಕ್ಷಕರು ಸಹ ರಿಷಬ್‌ ಶೆಟ್ಟಿ ಕಂಡಾಗ ಕೈಎತ್ತಿ ಮುಗಿಯುವಂತೆ ನಟಿಸಿದ್ದರು. ಸಿನಿಮಾದ ಕ್ಲೈಮ್ಯಾಕ್ಸ್‌ ಅಂತು ಅದ್ಭುತ.

ಈ ಸಿನಿಮಾದಿಂದ ರಿಷಬ್‌ ಶೆಟ್ಟಿ ಪ್ಯಾನ್‌ ಇಂಡಿಯಾ ಲೆವೆಲ್‌ ಮಿಂಚುತ್ತಿದ್ದಾರೆ. ರಜನಿಕಾಂತ್‌, ಕಮಲ್‌ ಹಾಸನ್‌, ಸೇರಿದಂತೆ ಚಿತ್ರರಂಗದ ದಿಗ್ಗಜ ನಟ, ನಟಿಯರು ಸಹ ರಿಷಬ್‌ ಶೆಟ್ಟಿ ನಟನೆ ಮತ್ತು ನಿರ್ದೇಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸ್ವತಃ ರಜನಿಕಾಂತ್‌ ಅವರು ರಿಷಬ್‌ ಶೆಟ್ಟಿಯನ್ನು ಮನೆಗೆ ಕರೆಯಿಸಿ ಮಾತನಾಡಿಸಿ ಗೌರವಿಸಿದ್ದರು. ಸದ್ಯ ಕಾಂತಾರ ಸಿನಿಮಾ ಓಟಿಟಿಯಲ್ಲಿ ಪ್ರದರ್ಶನವಾಗುತ್ತಿದೆ. ಅಲ್ಲದೆ, ಕಾಂತಾರ ಸಿನಿಮಾ ಜನವರಿ 15ರಂದು ಸಂಜೆ 6ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News