Kamal Haasan: ನಾನು ಕೂಡ ಕನ್ನಡ ಚಿತ್ರರಂಗಕ್ಕೆ ಸೇರಿದನು ಎಂದ ಕಮಲ್ ಹಾಸನ್

Kamal Haasan : ರಿಷಬ್ ಶೆಟ್ಟಿ ಅವರ ಕನ್ನಡ ಬ್ಲಾಕ್‌ಬಸ್ಟರ್ ಕಾಂತಾರ ಬಗ್ಗೆ ನಟ ಕಮಲ್ ಹಾಸನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಮಲ್ ಹಾಸನ್ ಕಾಂತಾರ ಬಗ್ಗೆ ಸಂತಸಗೊಂಡಿದ್ದಾರೆ. 2022 ರಲ್ಲಿ ತನ್ನ ಮನಸ್ಸನ್ನು ಕದಲಿಸಿದ ಒಂದು ಚಿತ್ರ ಕಾಂತಾರ ಎಂದು ಹೇಳಿದ್ದಾರೆ. 

Written by - Chetana Devarmani | Last Updated : Dec 13, 2022, 06:08 PM IST
  • ರಿಷಬ್ ಶೆಟ್ಟಿ ಅವರ ಕನ್ನಡ ಬ್ಲಾಕ್‌ಬಸ್ಟರ್ ಕಾಂತಾರ
  • ಕಾಂತಾರ ಬಗ್ಗೆ ನಟ ಕಮಲ್ ಹಾಸನ್ ಮೆಚ್ಚುಗೆ
  • ನಾನು ಕೂಡ ಕನ್ನಡ ಚಿತ್ರರಂಗಕ್ಕೆ ಸೇರಿದನು ಎಂದ ನಟ
Kamal Haasan: ನಾನು ಕೂಡ ಕನ್ನಡ ಚಿತ್ರರಂಗಕ್ಕೆ ಸೇರಿದನು ಎಂದ ಕಮಲ್ ಹಾಸನ್  title=
ಕಮಲ್ ಹಾಸನ್

Kamal Haasan on Kantara : ರಿಷಬ್ ಶೆಟ್ಟಿ ಅವರ ಕನ್ನಡ ಬ್ಲಾಕ್‌ಬಸ್ಟರ್ ಕಾಂತಾರ ಬಗ್ಗೆ ನಟ ಕಮಲ್ ಹಾಸನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಮಲ್ ಹಾಸನ್ ಕಾಂತಾರ ಬಗ್ಗೆ ಸಂತಸಗೊಂಡಿದ್ದಾರೆ. 2022 ರಲ್ಲಿ ತನ್ನ ಮನಸ್ಸನ್ನು ಕದಲಿಸಿದ ಒಂದು ಚಿತ್ರ ಕಾಂತಾರ ಎಂದು ಹೇಳಿದ್ದಾರೆ. ಈ ಚಿತ್ರವು ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದಾಗಿನಿಂದ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ಇದು ಎಲ್ಲಾ ಭಾಷೆಗಳಲ್ಲಿ ಒಟ್ಟು 450 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ವರ್ಷದ ಅತ್ಯಂತ ಯಶಸ್ವಿ ಚಲನಚಿತ್ರಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್ ಖಾತೆ ಹ್ಯಾಕ್?

ಫಿಲ್ಮ್ ಕಂಪ್ಯಾನಿಯನ್‌ಗೆ ನೀಡಿದ ಸಂದರ್ಶನದಲ್ಲಿ, ರಿಷಬ್ ಶೆಟ್ಟಿ ಅವರ ನಿರ್ದೇಶನವನ್ನು ಶ್ಲಾಘಿಸಿದ ಕಮಲ್‌ ಹಾಸನ್, "ಕಾಂತಾರ ಒಂದು ಉತ್ತಮ ಉದಾಹರಣೆ. ನಾನು ಕೂಡ ಕನ್ನಡ ಚಿತ್ರರಂಗಕ್ಕೆ ಸೇರಿದವನಾದ್ದರಿಂದ ಖುಷಿಯಾಗುತ್ತಿದೆ. ಹಾಗಾಗಿ, ವಂಶವೃಕ್ಷ, ಒಂದನೊಂದು ಕಾಲದಲ್ಲಿ ಮತ್ತು ಕಾಡು ಮುಂತಾದ ಚಿತ್ರಗಳನ್ನು ನೀಡಿದ ನಾಡು ಕರ್ನಾಟಕದಲ್ಲಿ ಹೆಚ್ಚು ಹೆಚ್ಚು ಜನರು ವಿಭಿನ್ನವಾಗಿ ಯೋಚಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಆ ದಿನಗಳು ಹಿಂತಿರುಗುತ್ತಿವೆ, ಅದು ನನಗೆ ಅನಿಸುತ್ತದೆ" ಎಂದಿದ್ದಾರೆ.

ಕಮಲ್‌ ಹಾಸನ್‌ ಅವರ ಈ ಸಂದರ್ಶನದ ವಿಡಿಯೋವನ್ನುರಿಷಬ್ ತಮ್ಮ Instagram ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. "ಧನ್ಯವಾದಗಳು, ಸರ್" ಎಂದು ಬರೆದಿದ್ದಾರೆ. ಇದಕ್ಕೂ ಮೊದಲು, ಬಾಲಿವುಡ್ ನಟ ಹೃತಿಕ್ ರೋಷನ್ ಅವರು ಇತ್ತೀಚೆಗೆ ರಿಷಬ್ ಶೆಟ್ಟಿಯವರ ಕಾಂತಾರದ “ಪೀಕ್ ಕ್ಲೈಮ್ಯಾಕ್ಸ್” ಗೆ ಮಾರು ಹೋಗಿದ್ದಾಗಿ ಹೇಳಿದರು. 

ಹೃತಿಕ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕಾಂತಾರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಕಾಂತಾರ ನೋಡುವ ಮೂಲಕ ತುಂಬಾ ಕಲಿತಿದ್ದೇನೆ. ರಿಷಬ್‌ ಶೆಟ್ಟಿ ಅವರ ಕನ್ವಿಕ್ಷನ್‌ನ ಶಕ್ತಿಯು ಚಿತ್ರವನ್ನು ಅಸಾಮಾನ್ಯವಾಗಿಸುತ್ತದೆ. ಉನ್ನತ ದರ್ಜೆಯ ಕಥೆ ಹೇಳುವುದು, ನಿರ್ದೇಶನ ಮತ್ತು ನಟನೆ ಅದ್ಭುತವಾಗಿದೆ. ಪೀಕ್ ಕ್ಲೈಮ್ಯಾಕ್ಸ್ ನನಗೆ ಗೂಸ್ಬಂಪ್ಸ್ ನೀಡಿತು"  ಎಂದು ಹೃತಿಕ್‌ ಟ್ವೀಟ್‌ ಮಾಡಿದ್ದರು.  

ಇದನ್ನೂ ಓದಿ: Kantara 2 : ಕಾಂತಾರ 2 ಸಿನಿಮಾಕ್ಕೆ ಅಣ್ಣಪ್ಪ ಪಂಜುರ್ಲಿ ದೈವದಿಂದ ಅನುಮತಿ

ಕಾಂತಾರ ಕನ್ನಡ ಮತ್ತು ಹಿಂದಿಯಲ್ಲಿ ಕ್ರಮವಾಗಿ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 14 ರಂದು ಬಿಡುಗಡೆಯಾಯಿತು. ಚಿತ್ರವನ್ನು ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್‌ ಅಡಿಯಲ್ಲಿ ವಿಜಯ್ ಕಿರಗಂದೂರು ಮತ್ತು ಚಲುವೇಗೌಡ ನಿರ್ಮಿಸಿರುವ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ, ಸಪ್ತಮಿ ಗೌಡ ಮತ್ತು ಕಿಶೋರ್ ಕುಮಾರ್ ಜಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News