Delhi marathon : ದೆಹಲಿಯಲ್ಲಿ ನಡೆದ ಮ್ಯಾರಥಾನ್ ಓಟದಲ್ಲಿ ಭಾರಿ ರೋಚಕತೆಯಿಂದ ಕೂಡಿದ್ದ ಸ್ಪರ್ಧೆಯಲ್ಲಿ ಪ್ರತಿಸ್ಪರ್ಧಿ ಶ್ರೀನು ಭೂಗತಾರನ್ನು ಹಿಂದಕ್ಕಿ, ಗೋಪಿ ಥೋನಕಲ್ ಅವರು 0.01 ಅಂತರದಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
Asian Games : ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ನಲ್ಲಿ ವಿಶ್ವ ದಾಖಲೆಯೊಂದಿಗೆ ಶೂಟಿಂಗ್ನಲ್ಲಿ ಮೊದಲ ಚಿನ್ನದ ಪದಕವನ್ನು ಭಾರತ ಗೆದ್ದಿದೆ. ಅದರೊಂದಿಗೆ 50 ಮೀಟರ್ ರೈಫಲ್ ಸ್ಪರ್ಧೆಯಲ್ಲೂ ಪದಕವನ್ನು ಗೆದ್ದಿದೆ.
Teacher's Day: ಕಳೆದ ಹದಿನಾಲ್ಕು ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಜೊತೆಗೆ ಬಿ.ಇಡಿ ನಲ್ಲಿ ಗೋಲ್ಡ್ ಮೆಡಲ್ ಪಡೆದ ಈ ಮಾದರಿ ಶಿಕ್ಷಕಿ ಇತರೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಸ್ಪೂರ್ತಿ.
ಟೋಕಿಯೊ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಬಂಗಾರದ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಚಾಂಪಿಯನ್ಷಿಪ್ನ ಕೊನೆಯ ದಿನ ನಡೆದ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 25 ವರ್ಷದ ನೀರಜ್ 88.17 ಮೀಟರ್ ಜಾವೆಲಿನ್ ಎಸೆಯುವುದರೊಂದಿಗೆ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು. 2005ರಲ್ಲಿ ಲಾಂಗ್ ಜಂಪರ್ ಅಂಜು ಬಾಬಿ ಕಂಚಿನ ಪದಕ ಗೆದ್ದ ನಂತರ 2022ರಲ್ಲಿ ಬೆಳ್ಳಿ ಪದಕ ಜಯಿಸಿದ್ದ ನೀರಜ್, ಈ ಬಾರಿ ಪದಕದ ಬಣ್ಣವನ್ನು ಬದಲಾಯಿಸುವಲ್ಲಿ ಯಶಸ್ವಿಯಾದರು.
Neeraj Chopra's best throws: ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಶುಕ್ರವಾರ ಅವರು 87.66 ಮೀ ಅತ್ಯುತ್ತಮ ಎಸೆತದೊಂದಿಗೆ ಲೌಸನ್ನೆ ಡೈಮಂಡ್ ಲೀಗ್ 2023ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ರಾಜ್ಯದ ಏಕೈಕ ಮಹಿಳಾ ವಿಶ್ವ ವಿದ್ಯಾನಿಲಯದ ಆವರಣದಲ್ಲಿ ವಿದ್ಯಾರ್ಥಿನಿಯರು ಸಂತಸಗೊಂಡಿದ್ದರು. ಇದಕ್ಕೆ ಕಾರಣ ಘಟಿಕೋತ್ಸವ. ಜೊತೆಗೆ ಪದವಿ ಪ್ರದಾನ ಹಾಗೂ ಚಿನ್ನದ ಪದಕ ವಿತರಿಸುವ ಕಾರ್ಯಕ್ರಮ. ಚಿನ್ನದ ಪದಕ ವಿತರಿಸಲು ಸ್ವತಃ ರಾಜ್ಯಪಾಲರೇ ಆಗಿಮಿಸಿದ್ದು ವಿದ್ಯಾರ್ಥಿನಿಯರಲ್ಲಿ ಸಂತಸ ಮತ್ತಷ್ಟು ಇಮ್ಮಡಿಗೊಂಡಿತ್ತು. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ...
CWG 2022: ಭಾರತೀಯ ಬಾಕ್ಸಿಂಗ್ ಪಟು ನಿಖಹತ್ ಜರೀನ್ ಬಾಕ್ಸಿಂಗ್ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. ನಿಖಹತ್ ಜರೀನ್ ಬಾಕ್ಸಿಂಗ್ನಲ್ಲಿ ಮಹಿಳೆಯರ 48-50 ಕೆಜಿ ತೂಕದ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ವಿಭಾಗದ ಫೈನಲ್ ಪಂದ್ಯದಲ್ಲಿ ನಿಖಹತ್ ಜರೀನ್ ನಾರ್ತ್ ಐರ್ಲೆಂಡ್ನ ಕಾರ್ಲಿಯನ್ನು 5-0 ಅಂತರದಿಂದ ಸೋಲಿಸಿದ್ದಾರೆ. ಇದು ಕಾಮನ್ವೆಲ್ತ್ ಕ್ರೀಡಾಕೂಟ2022 ರಲ್ಲಿ ಭಾರತಕ್ಕೆ 48 ನೇ ಪದಕ ಮತ್ತು ಬಾಕ್ಸಿಂಗ್ನಲ್ಲಿ ಮೂರನೇ ಚಿನ್ನದ ಪದಕವಾಗಿದೆ. ನಿಖಹತ್ ಮೊದಲ ಬಾರಿಗೆ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಪದಕ ಗೆದ್ದಿದ್ದಾರೆ.
ನಿಯಮಗಳ ಪ್ರಕಾರ, ಇಬ್ಬರು ಜಿಗಿತಗಾರರು ಒಂದೇ ಅಂತರದಲ್ಲಿದ್ದರೆ, ಅವರ ಎರಡನೇ ಅತ್ಯುತ್ತಮ ಪ್ರಯತ್ನವನ್ನು ನೋಡಲಾಗುತ್ತದೆ. ಹೀಗಾಗಿ ಮುರಳಿ ಪದಕ ವಂಚಿತರಾಗಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ಜೋವನ್ ವ್ಯಾನ್ ವುರೆನ್ (8.06 ಮೀ) ಕಂಚಿನ ಪದಕ ಪಡೆದಿದ್ದಾರೆ. ಸ್ಪರ್ಧೆಯಲ್ಲಿದ್ದ ಭಾರತದ ಮತ್ತೊಬ್ಬ ಆಟಗಾರ ಮುಹಮ್ಮದ್ ಅನೀಸ್ ಯಾಹಿಯಾ 7.97ಮೀ ಜಿಗಿತದೊಂದಿಗೆ ಐದನೇ ಸ್ಥಾನ ಪಡೆದರು.
ಪ್ಯಾರಾ ಪವರ್ಲಿಫ್ಟಿಂಗ್ನಲ್ಲಿ ಭಾರತಕ್ಕೆ ಚಿನ್ನ ಗೆದ್ದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಸುಧೀರ್ ಪಾತ್ರರಾಗಿದ್ದಾರೆ. ಸುಧೀರ್ ಕಾಮನ್ವೆಲ್ತ್ ಗೇಮ್ಸ್ನ ಪ್ಯಾರಾ ಪವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್. ಅವರು ತಮ್ಮ ಎರಡನೇ ಪ್ರಯತ್ನದಲ್ಲಿ 134.5 ಕೆಜಿ ದಾಖಲೆಯೊಂದಿಗೆ ಒಟ್ಟಾರೆ 212 ಕೆಜಿ ಎತ್ತುವ ಮೂಲಕ ಚಿನ್ನದ ಪದಕ ಗೆದ್ದರು. ಆದರೆ ಸುಧೀರ್ ತಮ್ಮ ಕೊನೆಯ ಪ್ರಯತ್ನದಲ್ಲಿ 217 ಕೆಜಿ ಎತ್ತುವಲ್ಲಿ ವಿಫಲರಾಗಿದ್ದರು.
ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ಹಳಿಂಗಳಿ ಮೂಲದ ಪೈಲ್ವಾನ್ ನಿಂಗಪ್ಪ ಗೆನೆಣ್ಣವರ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಕಿರಗಿಸ್ತಾನದ ಬಿಸ್ಕೆಕ್ ನಗರದಲ್ಲಿ ನಡೆದಿರುವ ಏಷಿಯನ್ ಗೇಮ್ಸ್ ನ ೧೭ ವರ್ಷದೊಳಗಿನ 45 ಕೆ.ಜಿ ವಿಭಾಗದಲ್ಲಿ ಚಿನ್ನದ ಬೇಟೆಯಾಡಿದ್ದಾರೆ.
4 ಚಿನ್ನ, 8 ಬೆಳ್ಳಿ ಮತ್ತು 6 ಕಂಚಿನೊಂದಿಗೆ ಒಟ್ಟು 18 ಪದಕಗಳು ಈಗ ಭಾರತ(India)ದ ಪಾಲಾಗಿವೆ. ಇದು ಈ ಆಟದ ಇತಿಹಾಸದಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನ ನೀಡಿದೆ. ಟೋಕಿಯೊ ಪ್ಯಾರಾಲಿಂಪಿಕ್ಸ್ನ ಪದಕ ಪಟ್ಟಿಯಲ್ಲಿ ಭಾರತವು 26 ನೇ ಸ್ಥಾನವನ್ನು ತಲುಪಿದೆ.
Avani Lekhara Wins Gold:ಭಾರತದ ಪ್ಯಾರಾ ಶೂಟರ್ ಅವನಿ ಲೇಖಾರಾ ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ SH1 ಸ್ಪರ್ಧೆಯಲ್ಲಿ ಅವನಿ, ಪ್ಯಾರಾಲಿಂಪಿಕ್ ದಾಖಲೆ ನಿರ್ಮಿಸಿ ಚಿನ್ನಕ್ಕೆ (Gold Medal) ಮುತ್ತಿಕ್ಕಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.