CWG 2022:ಭಾರತಕ್ಕೆ ಮತ್ತೊಂದು ಪದಕ: ಪುರುಷರ ಲಾಂಗ್ ಜಂಪ್‌ನಲ್ಲಿ ಬೆಳ್ಳಿ ಗೆದ್ದ ಮುರಳಿ ಶ್ರೀಶಂಕರ್

ನಿಯಮಗಳ ಪ್ರಕಾರ, ಇಬ್ಬರು ಜಿಗಿತಗಾರರು ಒಂದೇ ಅಂತರದಲ್ಲಿದ್ದರೆ, ಅವರ ಎರಡನೇ ಅತ್ಯುತ್ತಮ ಪ್ರಯತ್ನವನ್ನು ನೋಡಲಾಗುತ್ತದೆ. ಹೀಗಾಗಿ ಮುರಳಿ ಪದಕ ವಂಚಿತರಾಗಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ಜೋವನ್ ವ್ಯಾನ್ ವುರೆನ್ (8.06 ಮೀ) ಕಂಚಿನ ಪದಕ ಪಡೆದಿದ್ದಾರೆ. ಸ್ಪರ್ಧೆಯಲ್ಲಿದ್ದ ಭಾರತದ ಮತ್ತೊಬ್ಬ ಆಟಗಾರ ಮುಹಮ್ಮದ್ ಅನೀಸ್ ಯಾಹಿಯಾ 7.97ಮೀ ಜಿಗಿತದೊಂದಿಗೆ ಐದನೇ ಸ್ಥಾನ ಪಡೆದರು.

Written by - Bhavishya Shetty | Last Updated : Aug 5, 2022, 09:11 AM IST
  • ಕಾಮನ್‌ವೆಲ್ತ್ ಗೇಮ್ಸ್ 2022ರ ಪುರುಷರ ಲಾಂಗ್ ಜಂಪ್‌ನಲ್ಲಿ ಬೆಳ್ಳಿ ಪದಕ
  • ಪುರುಷರ ಲಾಂಗ್ ಜಂಪ್‌ನಲ್ಲಿ ಬೆಳ್ಳಿ ಗೆದ್ದ ಮುರಳಿ ಶ್ರೀಶಂಕರ್
  • ಕೆಲವೇ ಅಂಕಗಳ ಅಂತರದಲ್ಲಿ ಚಿನ್ನ ಕಳೆದುಕೊಂಡ ಮುರಳಿ
CWG 2022:ಭಾರತಕ್ಕೆ ಮತ್ತೊಂದು ಪದಕ: ಪುರುಷರ ಲಾಂಗ್ ಜಂಪ್‌ನಲ್ಲಿ ಬೆಳ್ಳಿ ಗೆದ್ದ ಮುರಳಿ ಶ್ರೀಶಂಕರ್ title=
Murali Sreeshankar

CWG 2022: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022ರ ಪುರುಷರ ಲಾಂಗ್ ಜಂಪ್‌ನಲ್ಲಿ 8.08 ಮೀ ದೂರ ಹಾರಿದ ಮರಳಿ ಶ್ರೀಶಂಕರ್‌ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ತಮ್ಮ ಐದನೇ ಜಿಗಿತದ ಪ್ರಯತ್ನದ ಮೂಲಕ ಈ ಸಾಧನೆಯನ್ನು ಮಾಡಿದ್ದಾರೆ. ಇನ್ನು ಬಹಮಾಸ್‌ನ ಲಕ್ವಾನ್ ನಾಯರ್ನ್ ಚಿನ್ನದ ಪದಕ ಗೆದ್ದಿದ್ದಾರೆ. ನಾಯರ್ನ್ ಕೂಡ ಅಂತಿಮ ಹಂತದಲ್ಲಿ 8.08 ಮೀಟರ್‌ ದೂರ ದಾರಿದ್ದರು. ಆದರೆ ತಮ್ಮ ಎರಡನೇ ಅತ್ಯುತ್ತಮವಾಗಿ 7.98 ಮೀಟರ್‌ಗಳಷ್ಟು ದೂರ ಹಾರಿದ್ದರು. ಈ ಪ್ರಯತ್ನದಲ್ಲಿ ಶ್ರೀಶಂಕರ್ 7.84 ಮೀ ಹಾರಿದ್ದರು.  

ಇದನ್ನೂ ಓದಿ: ಗಾಳಿಪಟ-2 ಬಾನಂಗಳದಲ್ಲಿ ಹಾರಿಸಲು ಡೇಟ್‌ ಫಿಕ್ಸ್‌: ಗಣಿ-ಭಟ್ರ ಕಾಂಬಿನೇಷನ್‌ ಮತ್ತೆ ತೆರೆಮೇಲೆ

ನಿಯಮಗಳ ಪ್ರಕಾರ, ಇಬ್ಬರು ಜಿಗಿತಗಾರರು ಒಂದೇ ಅಂತರದಲ್ಲಿದ್ದರೆ, ಅವರ ಎರಡನೇ ಅತ್ಯುತ್ತಮ ಪ್ರಯತ್ನವನ್ನು ನೋಡಲಾಗುತ್ತದೆ. ಹೀಗಾಗಿ ಮುರಳಿ ಪದಕ ವಂಚಿತರಾಗಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ಜೋವನ್ ವ್ಯಾನ್ ವುರೆನ್ (8.06 ಮೀ) ಕಂಚಿನ ಪದಕ ಪಡೆದಿದ್ದಾರೆ. ಸ್ಪರ್ಧೆಯಲ್ಲಿದ್ದ ಭಾರತದ ಮತ್ತೊಬ್ಬ ಆಟಗಾರ ಮುಹಮ್ಮದ್ ಅನೀಸ್ ಯಾಹಿಯಾ 7.97ಮೀ ಜಿಗಿತದೊಂದಿಗೆ ಐದನೇ ಸ್ಥಾನ ಪಡೆದರು.

ಇನ್ನು ಮಹಿಳೆಯರ ವಿಭಾಗದಲ್ಲಿ ಪ್ರಜುಷಾ ಮಲಿಯಕ್ಕಲ್ ಅವರು ದೆಹಲಿಯಲ್ಲಿ ನಡೆದ 2010 ರ ಆವೃತ್ತಿಯಲ್ಲಿ ಬೆಳ್ಳಿ ಗೆದ್ದರೆ, ಅಂಜು ಬಾಬಿ ಜಾರ್ಜ್ 2002 ರಲ್ಲಿ ಕಂಚು ಪಡೆದಿದ್ದರು. ಇನ್ನು ತೇಜಸ್ವಿನ್ ಶಂಕರ್ ಪುರುಷರ ಹೈಜಂಪ್‌ನಲ್ಲಿ ಕಂಚು ಗೆದ್ದು ಈ ಸಿಡಬ್ಲ್ಯೂಜಿಯ ಅಥ್ಲೆಟಿಕ್ಸ್‌ನಲ್ಲಿ ಭಾರತದ ಪದಕ ಖಾತೆಯನ್ನು ತೆರೆದಿದ್ದರು.

ಇದನ್ನೂ ಓದಿ: ಇನ್ಮುಂದೆ ನೀವು ಡ್ರೈವಿಂಗ್ ಲೈಸನ್ಸ್ ಗಾಗಿ ಆರ್‌ಟಿಒ ಬಳಿ ಡ್ರೈವಿಂಗ್ ಟೆಸ್ಟ್ ಮಾಡುವಂತಿಲ್ಲ...!

ಇನ್ನೊಂದೆಡೆ ಪ್ಯಾರಾ ಪವರ್ ಲಿಫ್ಟರ್ ಸುಧೀರ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಭಾರತಕ್ಕೆ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ. ಭಾರತ ಈಗ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಒಟ್ಟು 6 ಚಿನ್ನದ ಪದಕಗಳನ್ನು ಪಡೆದುಕೊಂಡಿದೆ. ಸುಧೀರ್ 212 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಪಡೆದಿದ್ದು, ಇದೇ ಮೊದಲ ಬಾರಿಗೆ ಭಾರತ ಈ ಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News