ಏಷಿಯನ್ ಚಾಂಪಿಯನ್ಸ್ ಗೇಮ್ಸ್ ಕುಸ್ತಿಯಲ್ಲಿ ಚಿನ್ನ ಗೆದ್ದ ಮುಧೋಳದ ಕುಸ್ತಿಪಟು ನಿಂಗಪ್ಪ ಗೆನೆಣ್ಣವರ

ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ಹಳಿಂಗಳಿ ಮೂಲದ ಪೈಲ್ವಾನ್‌ ನಿಂಗಪ್ಪ ಗೆನೆಣ್ಣವರ  ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.  ಕಿರಗಿಸ್ತಾನದ ಬಿಸ್ಕೆಕ್ ನಗರದಲ್ಲಿ ನಡೆದಿರುವ ಏಷಿಯನ್ ಗೇಮ್ಸ್ ನ ೧೭ ವರ್ಷದೊಳಗಿನ 45 ಕೆ.ಜಿ ವಿಭಾಗದಲ್ಲಿ ಚಿನ್ನದ ಬೇಟೆಯಾಡಿದ್ದಾರೆ.

Written by - Ranjitha R K | Last Updated : Jun 23, 2022, 09:34 AM IST
  • ಅಂತಾರಾಷ್ಟ್ರೀಯ ಮಟ್ಟಯದಲ್ಲಿ ಮಿಂಚಿದ ರಾಜ್ಯದ ಪ್ರತಿಭೆ
  • ಚಿನ್ನ ಗೆದ್ದು ಕೀರ್ತಿ ಪತಾಕೆ ಹಾರಿಸಿದ ನಿಂಗಪ್ಪ ಗೆನೆಣ್ಣವರ
  • ೧೭ ವರ್ಷದೊಳಗಿನ ೪೫ ಕೆಜಿ ವಿಭಾಗದಲ್ಲಿ ಸ್ವರ್ಣ ಗೆದ್ದ ವೀರ
ಏಷಿಯನ್ ಚಾಂಪಿಯನ್ಸ್ ಗೇಮ್ಸ್  ಕುಸ್ತಿಯಲ್ಲಿ ಚಿನ್ನ ಗೆದ್ದ ಮುಧೋಳದ  ಕುಸ್ತಿಪಟು ನಿಂಗಪ್ಪ ಗೆನೆಣ್ಣವರ title=
Ningappa Genennavar

ಬಾಗಲಕೋಟೆ : ಏಷಿಯನ್ ಚಾಂಪಿಯನ್ಸ್ ಗೇಮ್ಸ್  ಕುಸ್ತಿಯಲ್ಲಿ ಮುಧೋಳ ಕುಸ್ತಿಪಟು ಚಿನ್ನದ ಪದಕ ಗೆದ್ದಿದ್ದಾರೆ. ೧೭ ವರ್ಷದೊಳಗಿನ ೪೫ ಕೆಜಿ ವಿಭಾಗದಲ್ಲಿ ನಿಂಗಪ್ಪ ಗೆನೆಣ್ಣವರ ಚಿನ್ನ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ನಾಲ್ಕು ರಾಷ್ಟ್ರದ ಕುಸ್ತಿಪಟುಗಳನ್ನು ಸೋಲಿಸಿಡ ಇವರು  ಚಿನ್ನವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.  

ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ಹಳಿಂಗಳಿ ಮೂಲದ ಪೈಲ್ವಾನ್‌ ನಿಂಗಪ್ಪ ಗೆನೆಣ್ಣವರ  ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಕಿರಗಿಸ್ತಾನದ ಬಿಸ್ಕೆಕ್ ನಗರದಲ್ಲಿ ನಡೆದಿರುವ ಏಷಿಯನ್ ಗೇಮ್ಸ್ ನ ೧೭ ವರ್ಷದೊಳಗಿನ 45 ಕೆ.ಜಿ ವಿಭಾಗದಲ್ಲಿ ಚಿನ್ನದ ಬೇಟೆಯಾಡಿದ್ದಾರೆ. ಫೈನಲ್ ನಲ್ಲಿ ಇರಾನ್ ದೇಶದ ನವಾಜಿ ಅಲಿ ಎಂಬ ಕುಸ್ತಿಪಟುವನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ ನಿಂಗಪ್ಪ ಗೆನೆಣ್ಣವರ. 
  
ಇದನ್ನೂ ಓದಿ : Earthquake: ಹಾಸನ ಜಿಲ್ಲೆಯ ಹಲವೆಡೆ ಕಂಪಿಸಿದ ಭೂಮಿ

ಏಷಿಯನ್ ಚಾಂಪಿಯನ್ಸ್ ಗೇಮ್ಸ್  ನಲ್ಲಿ ಕರ್ನಾಟಕದಿಂದ ನಿಂಗಪ್ಪ ಒಬ್ಬನೇ ಭಾಗಿಯಾಗಿದ್ದರು. ರಾಜ್ಯ ಮಟ್ಟದ ಕುಸ್ತಿಯಲ್ಲಿ ಪ್ರಥಮ, ರಾಜಸ್ಥಾನದಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿಯಲ್ಲಿ ತೃತೀಯ ಸ್ಥಾನ ಪಡೆದಿದ್ದ ನಿಂಗಪ್ಪ ಎಲ್ಲರ ಗಮನ ಸೆಳೆದಿದ್ದರು. ನಿಂಗಪ್ಪನ ಸಾಧನೆ ಕಂಡು ಹರ್ಯಾಣಾದ ಕುಸ್ತಿ ಇಂಡಿಯನ್ ಕ್ಯಾಂಪ್ ಗೆ ಆಯ್ಕೆ ಮಾಡಲಾಗಿತ್ತು. ಹರ್ಯಾಣಾ ಇಂಡಿಯನ್ ಕ್ಯಾಂಪ್ ನಲ್ಲಿ ಕಳೆದ ಎರಡು ವರ್ಷಗಳಿಂದ ನಿಂಗಪ್ಪ ತರಬೇತಿ ಪಡೆಯುತ್ತಿದ್ದಾರೆ.  

ನಿಂಗಪ್ಪ ಗೆನೆಣ್ಣವರ ಕುಟುಂಬ ಸದ್ಯಕ್ಕೆ ಮುಧೋಳ ನಗರದಲ್ಲಿ ನೆಲೆಸಿದೆ. ಮುಧೋಳ ಜೈ ಹನುಮಾನ ವ್ಯಾಯಾಮ ಶಾಲೆಯಲ್ಲಿಯೂ ಇವರು  ಏಳು ವರ್ಷಗಳಿಂದ ತರಬೇತಿ ಪಡೆಯುತ್ತಿದ್ದರು. ಇದೀಗ  ಎಸ್ ಎಸ್ ಎಲ್ ಸಿ ಓದುತ್ತಿರುವ ನಿಂಗಪ್ಪ ಗೆನೆಣ್ಣವರ ತಂದೆ ತಾಯಿ ಇಬ್ಬರೂ ಕೃಷಿ ಕಾರ್ಮಿಕರು. ಬಡತನದಲ್ಲಿ ಬೆಳೆದು ಕುಸ್ತಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆದ್ದು ಬೀಗಿದ ನಿಂಗಪ್ಪ ಗೆನೆಣ್ಣವರ ಬಗ್ಗೆ ತಂದೆ ತಾಯಿ ಸಂತೋಷ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ : ಸಾಲು ಮರದ ತಿಮ್ಮಕ್ಕಗೆ ಬಿಡಿಎ ವತಿಯಿಂದ ನಿವೇಶನ ಹಂಚಿಕೆ

 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News