Commonwealth Games 2022: ಕುಸ್ತಿಯಲ್ಲಿ ಭಾರತಕ್ಕೆ 3 ಚಿನ್ನ, 1 ಬೆಳ್ಳಿ

ಕಾಮನ್‌ವೆಲ್ತ್‌ ಕ್ರೀಡಾಕೂಟದ ಅಖಾಡದಲ್ಲಿ ಭಾರತೀಯ ಕುಸ್ತಿಪಟುಗಳು ಪದಕ ಬೇಟೆಯಾಡಿದ್ದು, 3 ಚಿನ್ನ ಮತ್ತು 1 ಬೆಳ್ಳಿ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

Written by - Puttaraj K Alur | Last Updated : Aug 6, 2022, 06:50 AM IST
  • ಪುರುಷರ ಫ್ರೀಸ್ಟೈಲ್‌ ಕುಸ್ತಿಯ 65 ಕೆಜಿ ವಿಭಾಗದಲ್ಲಿ ಬಜರಂಗ್‌ ಪೂನಿಯಾಗೆ ಚಿನ್ನ
  • ಮಹಿಳೆಯರ 62 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಕೊರಳಿಗೇರಿಸಿಕೊಂಡ ಸಾಕ್ಷಿ ಮಲಿಕ್‍
  • ಪುರುಷರ 86 ಕೆಜಿ ವಿಭಾಗದಲ್ಲಿ ದೀಪಕ್ ಪೂನಿಯಾಗೆ ಬಂಗಾರದ ಪದಕ ಸಾಧನೆ
Commonwealth Games 2022: ಕುಸ್ತಿಯಲ್ಲಿ ಭಾರತಕ್ಕೆ 3 ಚಿನ್ನ, 1 ಬೆಳ್ಳಿ title=
ಕುಸ್ತಿಯಲ್ಲಿ ಭಾರತಕ್ಕೆ 3 ಚಿನ್ನ

ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತೀಯ ಕುಸ್ತಿ ಪಟುಗಳು ದೇಶವೇ ಹೆಮ್ಮೆಪಡುವ ಸಾಧನೆ ಮಾಡಿದ್ದಾರೆ. ಕುಸ್ತಿ ಅಖಾಡದಲ್ಲಿ ಭಾರತದ ಕೊರಳಿಗೆ 3 ಚಿನ್ನ ಹಾಗೂ 1 ಬೆಳ್ಳಿ ಸಿಕ್ಕಿದೆ. ಬಜರಂಗ್‌ ಪೂನಿಯಾ, ಸಾಕ್ಷಿ ಮಲಿಕ್‌ ಮತ್ತು ದೀಪಕ್‌ ಪೂನಿಯಾ ಚಿನ್ನ ಗೆದ್ದರೆ, ಅನ್ಶು ಮಲಿಕ್ ಬೆಳ್ಳಿ  ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಬಜರಂಗ್‌ ಪೂನಿಯಾಗೆ ಚಿನ್ನ

ಶುಕ್ರವಾರ ನಡೆದ ಪುರುಷರ ಫ್ರೀಸ್ಟೈಲ್‌ ಕುಸ್ತಿಯ 65 ಕೆಜಿ ವಿಭಾಗದ ಫೈನಲ್‌ನಲ್ಲಿ ಬಜರಂಗ್‌ ಪೂನಿಯಾ ಕೆನಡಾದ ಲಾಕ್ಲೆನ್‌ ಮೆಕ್‌ಲೀನ್‌ ಎದುರು 9-2 ಅಂಕಗಳ ಅಂತರದಿಂದ ಗೆಲುವು ಸಾಧಿಸಿ ಚಿನ್ನಕ್ಕೆ ಮುತ್ತಿಕ್ಕಿದರು. 28 ವರ್ಷದ ಬಜರಂಗ್‌ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ ಜಾರ್ಜ್‌ ರಾಮ್‌ ವಿರುದ್ದ 10-0 ರಲ್ಲಿ ಗೆಲುವು ಸಾಧಿಸಿ ಫೈನಲ್‍ಗೆ ಎಂಟ್ರಿ ಕೊಟ್ಟಿದ್ದರು.

ಇದನ್ನೂ ಓದಿ: ಕೆ.ಎಲ್.ರಾಹುಲ್ ಟೀಮ್ ಇಂಡಿಯಾಗೆ ಅಗತ್ಯವಿಲ್ಲ ಎಂದ್ರಾ ಈ ಆಟಗಾರ...!

ಸಾಕ್ಷಿ ಮಲಿಕ್‌ ‘ಚಿನ್ನ’ದ ಸಾಧನೆ

ಮಹಿಳೆಯರ 62 ಕೆಜಿ ವಿಭಾಗದ ಫೈನಲ್‌ನಲ್ಲಿ ಸಾಕ್ಷಿ ಮಲಿಕ್‌ ಕೆನಡಾದ ಅನಾ ಪೌಲಾ ಗೊಡಿನೆಸ್‌ ಗೊನ್ಸಾಲೆಸ್‍ರನ್ನು ಮಣಿಸುವ ಮೂಲಕ ‘ಚಿನ್ನ’ದ ಸಾಧನೆ ಮಾಡಿದರು. ಎದುರಾಳಿ ವಿರುದ್ಧ ಪ್ರಭಲ ಪೈಪೋಟಿ ಇದ್ದರೂ ಸಾಕ್ಷಿ ಗೆಲುವಿನ ನಗೆ ಬೀರುವ ಮೂಲಕ ಸಂಭ್ರಮಿಸಿದರು.  

 

ದೀಪಕ್ ಪೂನಿಯಾಗೆ ಬಂಗಾರ

 

ಇನ್ನು ಪುರುಷರ 86 ಕೆಜಿ ವಿಭಾಗದಲ್ಲಿ ದೀಪಕ್ ಪೂನಿಯಾ ಪಾಕಿಸ್ತಾನದ ಮುಹಮ್ಮದ್‌ ಇನಾಮ್ ಎದುರು 3-0 ಅಂಕಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಚಿನ್ನಕ್ಕೆ ಮುತ್ತಿಕ್ಕಿದರು. ಸೆಮಿಫೈನಲ್‌ನಲ್ಲಿ ಕೆನಡಾದ ಅಲೆಕ್ಸಾಂಡರ್‌ ಮೂರ್‌ ಎದುರು 3-1 ರಲ್ಲಿ ಜಯ ಸಾಧಿಸಿದ್ದ ಪೂನಿಯಾ ಫೈನಲ್‍ನಲ್ಲಿಯೂ ಗೆಲುವು ಸಾಧಿಸುವ ಮೂಲಕ ಭಾರತಕ್ಕೆ ಬಂಗಾರದ ಪದಕ ತಂದುಕೊಟ್ಟರು.

ಇದನ್ನೂ ಓದಿ: Virat Kohli : ಕೊಹ್ಲಿ ನಾಯಕತ್ವ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಬಿಸಿಸಿಐ ಅಧಿಕಾರಿ!

ಅನ್ಶು ಮಲಿಕ್‍ ರಜತ ಸಾಧನೆ

ಮಹಿಳೆಯರ 57 ಕೆಜಿ ಫ್ರೀಸ್ಟೈಲ್‌ ಕುಸ್ತಿ ಸ್ಪರ್ಧೆಯಲ್ಲಿ ಅನ್ಶು ಮಲಿಕ್ ರಜತ ಸಾಧನೆ ಮಾಡಿದರು. ಫೈನಲ್‌ ಪಂದ್ಯದಲ್ಲಿ ನೈಜೀರಿಯದ ಒಡುನಯೊ ಅಡೆಕುರೆಯೊ ಎದುರು 3-7 ಅಂಕಗಳ ಅಂತರದಲ್ಲಿ ಸೋತ ಅನ್ಶು ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಸಾಧನೆ ಮಾಡಿದ್ದ ಅನ್ಶು ಕಾಮನ್‌ವೆಲ್ತ್‌ ಕ್ರೀಡಾಕೂಟ ಫೈನಲ್‍ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಚಿನ್ನಕ್ಕೆ ಮುತ್ತಿಕ್ಕುವ ಅವಕಾಶದಿಂದ ವಂಚಿತರಾದರು.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News