ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ಆಸ್ಟ್ರೇಲಿಯಾ ದಿಗ್ಗಜ ಡೇವಿಡ್ ವಾರ್ನರ್ ವಿದಾಯ ಘೋಷಣೆ

David Warner Retirement: ಆಸ್ಟ್ರೇಲಿಯಾ ತಂಡವು ಪಂದ್ಯಾವಳಿಯಿಂದ ಹೊರಗುಳಿಯುವುದರ ಜೊತೆಗೆ, ಅನುಭವಿ ಡೇವಿಡ್ ವಾರ್ನರ್ 15 ವರ್ಷಗಳ ಸುದೀರ್ಘ ಅಂತರರಾಷ್ಟ್ರೀಯ ವೃತ್ತಿಜೀವನವೂ ಕೊನೆಗೊಂಡಿದೆ. ಡೇವಿಡ್ ಈಗಾಗಲೇ ODI ಮತ್ತು ರೆಡ್ ಬಾಲ್ ಫಾರ್ಮ್ಯಾಟ್‌ಗಳಿಂದ ನಿವೃತ್ತಿ ಹೊಂದಿದ್ದಾರೆ.

Written by - Bhavishya Shetty | Last Updated : Jun 25, 2024, 05:09 PM IST
    • 15 ವರ್ಷಗಳ ಸುದೀರ್ಘ ಅಂತರರಾಷ್ಟ್ರೀಯ ವೃತ್ತಿಜೀವನ ಕೊನೆ
    • ODI ಮತ್ತು ರೆಡ್ ಬಾಲ್ ಫಾರ್ಮ್ಯಾಟ್‌ಗಳಿಂದ ನಿವೃತ್ತಿ ಹೊಂದಿದ್ದಾರೆ
    • ಆಸ್ಟ್ರೇಲಿಯಾ ದಿಗ್ಗಜ ಡೇವಿಡ್ ವಾರ್ನರ್ ವಿದಾಯ ಘೋಷಣೆ
ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ಆಸ್ಟ್ರೇಲಿಯಾ ದಿಗ್ಗಜ ಡೇವಿಡ್ ವಾರ್ನರ್ ವಿದಾಯ ಘೋಷಣೆ title=
David Warner

David Warner Retirement: 2024ರ ಟಿ20 ವಿಶ್ವಕಪ್‌’ನ ಸೆಮಿಫೈನಲ್‌’ನಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ಸ್ಥಾನವನ್ನು ಪಡೆದುಕೊಂಡಿದೆ. ಬಾಂಗ್ಲಾದೇಶ ವಿರುದ್ಧದ ಗೆಲುವಿನೊಂದಿಗೆ ಅಫ್ಘಾನಿಸ್ತಾನ ಮೊದಲ ಬಾರಿಗೆ ಟಿ20 ವಿಶ್ವಕಪ್‌’ನ ಸೆಮಿಫೈನಲ್‌ಗೆ ಅರ್ಹತೆ ಗಳಿಸಿದೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಜಯ ಸಾಧಿಸುವುದರೊಂದಿಗೆ ಟೂರ್ನಿಯಲ್ಲಿ ಆಸ್ಟ್ರೇಲಿಯ ತಂಡದ ಪಯಣ ಅಂತ್ಯಗೊಂಡಿದೆ.

ಇದನ್ನೂ ಓದಿ: ಸೆಮಿಫೈನಲ್’ನಲ್ಲಿ ಟೀಂ ಇಂಡಿಯಾ ಎದುರಾಳಿ ಯಾರು? ಟಿ20 ವಿಶ್ವಕಪ್ ಸೆಮೀಸ್ ವೇಳಾಪಟ್ಟಿ ಹೀಗಿದೆ ನೋಡಿ

ಆಸ್ಟ್ರೇಲಿಯಾ ತಂಡವು ಪಂದ್ಯಾವಳಿಯಿಂದ ಹೊರಗುಳಿಯುವುದರ ಜೊತೆಗೆ, ಅನುಭವಿ ಡೇವಿಡ್ ವಾರ್ನರ್ 15 ವರ್ಷಗಳ ಸುದೀರ್ಘ ಅಂತರರಾಷ್ಟ್ರೀಯ ವೃತ್ತಿಜೀವನವೂ ಕೊನೆಗೊಂಡಿದೆ. ಡೇವಿಡ್ ಈಗಾಗಲೇ ODI ಮತ್ತು ರೆಡ್ ಬಾಲ್ ಫಾರ್ಮ್ಯಾಟ್‌ಗಳಿಂದ ನಿವೃತ್ತಿ ಹೊಂದಿದ್ದಾರೆ.

37 ವರ್ಷದ ಡೇವಿಡ್ ವಾರ್ನರ್, ಇದು ಅವರ ಕೊನೆಯ T20 ವಿಶ್ವಕಪ್ ಎಂದು ಈಗಾಗಲೇ ಘೋಷಿಸಿದ್ದರು. ಇದೀಗ ಆಸ್ಟ್ರೇಲಿಯ ತಂಡ ಟಿ20 ವಿಶ್ವಕಪ್‌’ನಿಂದ ಹೊರಬಿದ್ದ ಬಳಿಕ ಅನುಭವಿ ಅಂತಾರಾಷ್ಟ್ರೀಯ ವೃತ್ತಿಜೀವನ ಅಂತ್ಯಗೊಂಡಿದೆ. ಇಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ ಸೋತಿದ್ದರೆ, ಕಾಂಗರೂ ತಂಡ ಸೆಮಿಫೈನಲ್‌’ಗೆ ಅರ್ಹತೆ ಪಡೆಯುತ್ತಿತ್ತು. ಇದರಿಂದ ಡೇವಿಡ್ ವಾರ್ನರ್’ಗೆ ಪಂದ್ಯ ಆಡುವ ಅವಕಾಶ ಸಿಗುತ್ತಿತ್ತು, ಆದರೆ ಬಾಂಗ್ಲಾದೇಶದ ಸೋಲಿನೊಂದಿಗೆ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಪಯಣ ಅಂತ್ಯಗೊಂಡಿದೆ.

ಇದನ್ನೂ ಓದಿ: ಅನುಷ್ಕಾಗೂ ಮುನ್ನ ಈ ನಟಿಯರ ಜೊತೆ ಡೇಟಿಂಗ್ ಮಾಡಿದ್ರು ವಿರಾಟ್! ಅದ್ರಲ್ಲಿ ಒಬ್ಬಳು ಕನ್ನಡದ ಪ್ರಖ್ಯಾತ ಹೀರೋಯಿನ್!!

ಡೇವಿಡ್ ವಾರ್ನರ್ 2024ರ T20 ವಿಶ್ವಕಪ್‌’ನಲ್ಲಿ ಆಸ್ಟ್ರೇಲಿಯಾ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂದೆನಿಸಿಕೊಂಡಿದ್ದಾರೆ. ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ ಕಾಂಗರೂ ಬ್ಯಾಟ್ಸ್‌ಮನ್ ಆಗಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News