ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಬಾಚಿದ ನೀರಜ್ ಚೋಪ್ರಾ

  • Zee Media Bureau
  • Aug 28, 2023, 01:46 PM IST

ಟೋಕಿಯೊ ಒಲಿಂಪಿಕ್‌ ಚಾಂಪಿಯನ್‌ ನೀರಜ್‌ ಚೋಪ್ರಾ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರದ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್‌ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಚಾಂಪಿಯನ್‌ಷಿಪ್‌ನ ಕೊನೆಯ ದಿನ ನಡೆದ ಪುರುಷರ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ 25 ವರ್ಷದ ನೀರಜ್‌ 88.17 ಮೀಟರ್‌ ಜಾವೆಲಿನ್‌ ಎಸೆಯುವುದರೊಂದಿಗೆ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು. 2005ರಲ್ಲಿ ಲಾಂಗ್‌ ಜಂಪರ್‌ ಅಂಜು ಬಾಬಿ ಕಂಚಿನ ಪದಕ ಗೆದ್ದ ನಂತರ 2022ರಲ್ಲಿ ಬೆಳ್ಳಿ ಪದಕ ಜಯಿಸಿದ್ದ ನೀರಜ್‌, ಈ ಬಾರಿ ಪದಕದ ಬಣ್ಣವನ್ನು ಬದಲಾಯಿಸುವಲ್ಲಿ ಯಶಸ್ವಿಯಾದರು.
 

Trending News