Bear Cub Died: ಕಳೆದ ಎರಡು ದಿನಗಳ ಹಿಂದೆ ತಾಯಿ ಕರಡಿಯಿಂದ ಬೇರ್ಪಟ್ಟಿದ್ದ ಆರು ತಿಂಗಳ ಮರಿ ಕರಡಿಯು ಮಲೆಮಹದೇಶ್ವರ ವನ್ಯಧಾಮದ ಅಜ್ಜಿಪುರ ರಸ್ತೆಯಲ್ಲಿ ಅಸ್ವಸ್ಥಗೊಂಡು ಎರಡು ಕಲ್ಲುಗಳ ನಡುವೆ ಸೇರಿಕೊಂಡಿತ್ತು. ನಂತರ ಸ್ಥಳೀಯರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ನಿನ್ನೆ ಸಂಜೆ ಗ್ರಾಮದ ಹೊರವಲಯದಲ್ಲಿ ಕಾಣಿಸಿಕೊಂಡ ಎರಡು ಕರಡಿಗಳು..
ಹಗಲು ವೇಳೆಯಲ್ಲೇ ಕಾಣಿಸಿಕೊಳ್ತಿರುವ ಕರಡಿಗಳು..
ಎರಡು ಕರಡಿಗಳ ಓಡಾಟದ ದೃಶ್ಯ ಗ್ರಾಮಸ್ಥರ ಮೊಬೈಲ್ನಲ್ಲಿ ಸೆರೆ..
ಕರಡಿಗಳ ಸೆರೆಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರ ಮನವಿ..
ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಜಾಂಬವಂತ ಕಳೆದ ಶನಿವಾರ ಹನೂರು ತಾಲೂಕಿನ ಅಜ್ಜಿಪುರ ಗ್ರಾಮದ ಪೆಟ್ಟಿಗೆ ಅಂಗಡಿಗಳ ಮೇಲೆ ದಾಳಿ ನಡೆಸಿ ಅಲ್ಲಿದ್ದ ಮೊಟ್ಟೆ, ಹಣ್ಣು ತಿಂದು, ಧ್ವಂಸ ಮಾಡಿ ಹೋಗಿತ್ತು. ಅದರ, ದಾಂಧಲೆ ಸಿಸಿಟಿವಿಯಲ್ಲೂ ಸೆರೆಯಾಗಿತ್ತು.
ಅಂಜನಾದ್ರಿ ಬೆಟ್ಟದಲ್ಲಿ ರಾತ್ರಿ ಕರಡಿ ಪ್ರತ್ಯಕ್ಷ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ನಿನ್ನೆ ರಾತ್ರಿ ಬಂದಿರುವ ಕರಡಿ. ಅಂಜನಾದ್ರಿಯಲ್ಲಿ ಕರಡಿ ಪ್ರತ್ಯಕ್ಷದಿಂದ ಭಯದಲ್ಲಿ ಭಕ್ತರು.
ಚಾಮರಾಜನಗರ ತಾಲೂಕಿನ ಪುಣಜನೂರು ಗ್ರಾಮದ ರಾಜು(55) ಮೃತ ದುರ್ದೈವಿ. ಬಿಳಿಗಿರಿರಂಗನಾಥ ದೇವಾಲಯದ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವಲಯದ ಹುಚ್ಚನಕೆಂಬೆರೆ ಬೀಟ್ ನಲ್ಲಿ ಕರಡಿಯೊಂದು ದಾಳಿ ಮಾಡಿ ಕೊಂದು ಹಾಕಿದೆ.
ಕೊಪ್ಪಳ ತಾಲೂಕಿನ ಮುಸಲಾಪುರ, ಗಂಗನಾಳ, ಸುಳಿಕೇರಿ, ಚಳ್ಳಾರಿ, ಹಾಸಗಲ್ ಗ್ರಾಮದಲ್ಲಿ ಕರಡಿ ಹಾವಳಿ ಮಿತಿ ಮೀರಿದೆ.. ಕಳೆದ ಕೆಲ ದಿನಗಳಿಂದ ಕರಡಿಗಳು ಕಲ್ಲಂಗಡಿ ನಾಶ ಮಾಡ್ತಿದೆ. ಜಮೀನಿನಲ್ಲಿರೋ ಮನೆಯ ಮಾಳಿಗೆ ಏರ್ತಿವೆ.. ಜನ ಕರಡಿ ಓಡಿಸಲು ಬೆನ್ನತ್ತಿ ಓಡಿದ್ದಾರೆ.. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಳ್ಳಾರಿ ಜಿಲ್ಲೆಯ ತೋರಣಗಲ್ ಬಳಿ ಇರುವ ಜಿಂದಾಲ್ ಉಕ್ಕು ಕಾರ್ಖಾನೆ ಒಳಗೆ ಕರಡಿಯೊಂದು ನುಗ್ಗಿದ್ದು, ಕರಡಿ ನೋಡಿದ ಕಾರ್ಮಿಕರು ದಿಕ್ಕಾಪಾಲಾಗಿ ಓಡಿದ್ದಾರೆ.. ಕರಡಿ ಓಡಿಸಲು ಸೆಕ್ಯೂರಿಟಿ ಗಾರ್ಡ್ಗಳು ಹರಸಾಹಸ ಪಟ್ಟಿದ್ದಾರೆ.
ಕೂಡ್ಲಿಗಿ ತಾಲೂಕಿನ ಕಡಕೋಳ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಕರಡಿ ಬಿದ್ದಿದೆ. ಚಿಕ್ಕಜೋಗಿಹಳ್ಳಿ, ಕಡಕೋಳ, ಮಡ್ಲಾನಾಯಕನಹಳ್ಳಿ, ಭೀಮಸಮುದ್ರ, ಕುರಿಹಟ್ಟಿ ಭಾಗಗಳಲ್ಲಿ ಕಾಣಿಸಿಕೊಂಡಿದ್ದ ಕರಡಿ .. ಚಿಕ್ಕಜೋಗಿಹಳ್ಳಿಯ ಪೆಟ್ರೋಲ್ ಬಂಕ್, ಲಕ್ಷ್ಮಣ್ ನಾಯಕ್ ಎಂಬುವರ ತೋಟದ ಬಳಿ ರಾತ್ರಿ ವೇಳೆ ಕರಡಿ ಓಡಾಡಿರುವ ವಿಡಿಯೋ ವೈರಲ್ ಆಗಿತ್ತು. ಕೆಲವೆಡೆ ಹಗಲಲ್ಲಿಯೇ ಕರಡಿ ಕಾಣಿಸಿಕೊಂಡು ರೈತರ ನಿದ್ದೆಗೆಡಿಸಿದ್ದವು
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದ ಹೊರವಲಯದಲ್ಲಿ ಜೋಡಿ ಕರಡಿಗಳು ಪ್ರತ್ಯಕ್ಷವಾಗಿದ್ದು, ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಲಕ್ಷ್ಮಣ್ ನಾಯ್ಕ್ ಎಂಬುವವರ ತೋಟದ ಮನೆಯಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು, ಕಾರ್ಯಾಚರಣೆ ನಡೆಸದ ಅರಣ್ಯ ಇಲಾಖೆ ವಿರುದ್ಧ ಜನ ಆಕ್ರೋಶ ಹೊರ ಹಾಕಿದ್ದಾರೆ.
ಕಾಡು ನಾಶವಾದಂತೆಲ್ಲಾ ಕಾಡು ಪ್ರಾಣಿಗಳು ನಾಡಿಗೆ ಬರುವುದು ಮಾಮೂಲಾಗಿದೆ.ಹೀಗೆ ದಾರಿ ತಪ್ಪಿ ನಾಡಿಗೆ ಬಂದು ನರಳಾಡುತ್ತಿದ್ದ ಕರಡಿಯನ್ನ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಕಾನೂರು ಗ್ರಾಮದಲ್ಲಿ ಇಂದು ರಕ್ಷಣೆ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.