ದಾರಿತಪ್ಪಿ ನಾಡಿಗೆ ಬಂತು ಕರಡಿ..! ಬೆಚ್ಚಿಬಿದ್ದ ಗ್ರಾಮಸ್ಥರು..!

ಕಾಡು ನಾಶವಾದಂತೆಲ್ಲಾ ಕಾಡು ಪ್ರಾಣಿಗಳು ನಾಡಿಗೆ ಬರುವುದು ಮಾಮೂಲಾಗಿದೆ.ಹೀಗೆ ದಾರಿ ತಪ್ಪಿ ನಾಡಿಗೆ ಬಂದು ನರಳಾಡುತ್ತಿದ್ದ ಕರಡಿಯನ್ನ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಕಾನೂರು ಗ್ರಾಮದಲ್ಲಿ ಇಂದು ರಕ್ಷಣೆ ಮಾಡಲಾಗಿದೆ.

Written by - Zee Kannada News Desk | Last Updated : Dec 23, 2021, 07:01 PM IST
  • ಕಾಡು ನಾಶವಾದಂತೆಲ್ಲಾ ಕಾಡು ಪ್ರಾಣಿಗಳು ನಾಡಿಗೆ ಬರುವುದು ಮಾಮೂಲಾಗಿದೆ.
  • ಹೀಗೆ ದಾರಿ ತಪ್ಪಿ ನಾಡಿಗೆ ಬಂದು ನರಳಾಡುತ್ತಿದ್ದ ಕರಡಿಯನ್ನ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಕಾನೂರು ಗ್ರಾಮದಲ್ಲಿ ಇಂದು ರಕ್ಷಣೆ ಮಾಡಲಾಗಿದೆ.

Trending Photos

ದಾರಿತಪ್ಪಿ ನಾಡಿಗೆ ಬಂತು ಕರಡಿ..! ಬೆಚ್ಚಿಬಿದ್ದ ಗ್ರಾಮಸ್ಥರು..! title=

ಕೊಡಗು: ಕಾಡು ನಾಶವಾದಂತೆಲ್ಲಾ ಕಾಡು ಪ್ರಾಣಿಗಳು ನಾಡಿಗೆ ಬರುವುದು ಮಾಮೂಲಾಗಿದೆ.ಹೀಗೆ ದಾರಿ ತಪ್ಪಿ ನಾಡಿಗೆ ಬಂದು ನರಳಾಡುತ್ತಿದ್ದ ಕರಡಿಯನ್ನ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಕಾನೂರು ಗ್ರಾಮದಲ್ಲಿ ಇಂದು ರಕ್ಷಣೆ ಮಾಡಲಾಗಿದೆ.

ತೋಟವೊಂದರಲ್ಲಿ ಉರುಳಿಗೆ ಸಿಲುಕಿ ಭಾರಿ ಗಾತ್ರದ ಕರಡಿ ನರಳಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಅಲರ್ಟ್ ಆದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಕರಡಿಯನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ- Gold Smuggling: ಜ್ಯೂಸರ್ ಒಳಗೆ ಚಿನ್ನದ ರಾಡ್..! ಸಿಕ್ಕಿಬಿದ್ದ ಖದೀಮ

ಮರಳಿ ಕಾಡಿಗೆ ಕರಡಿ:
ನಾಗರಹೊಳೆ ಅಭಯಾರಣ್ಯದಿಂದ ಕರಡಿ ದಾರಿತಪ್ಪಿ ನಾಡಿಗೆ ಬಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕೂಡಲೇ ಕರಡಿಗೆ ಪ್ರಥಮ ಚಿಕಿತ್ಸೆ ನೀಡಿ ನಾಗರಹೊಳೆಗೆ ಕೊಂಡೊಯ್ಯಲಾಗಿದೆ‌. ಸದ್ಯ ಕರಡಿ ಚೇತರಿಕೆ ಕಂಡಿದ್ದು ಪುನಃ ನಾಗರಹೊಳೆ ಅಭಯಾರಣ್ಯಕ್ಕೆ ಬಿಡಲು ಸಿದ್ಧತೆ ನಡೆಸಲಾಗಿದೆ.

ಇದನ್ನೂ ಓದಿ-Explosion inside court: ನ್ಯಾಯಾಲಯ ಸಂಕೀರ್ಣದಲ್ಲಿ ಸ್ಫೋಟ.. ಇಬ್ಬರು ಸಾವು, 5 ಮಂದಿಗೆ ಗಾಯ

ಈ ಬಗ್ಗೆ 'ಜೀ ನ್ಯೂಸ್' ಜೊತೆ ಮಾಹಿತಿ ಹಂಚಿಕೊಂಡಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್, ವೈದ್ಯರು ಕರಡಿಗೆ ಚಿಕಿತ್ಸೆ ನೀಡಿದ್ದು. ಕರಡಿ ಆರೋಗ್ಯ ಸುಧಾರಿಸಿದ ನಂತರ ಮರಳಿ ಕಾಡಿಗೆ ಬಿಡಲಾಗುತ್ತದೆ ಎ‌ಂದಿದ್ದಾರೆ. ಒಟ್ಟಾರೆ ದಿಢೀರ್ ಕರಡಿ ದರ್ಶನದಿಂದ ಕಾನೂರು ಗ್ರಾಮದ ಜನ ಬೆಚ್ಚಿ ಬಿದ್ದಿದ್ದರು. ಆದರೆ ಕರಡಿ ಈಗ ಮತ್ತೆ ಸೇಫ್ ಆಗಿ ಕಾಡು ಸೇರಲು ಸಿದ್ಧವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News