Tumakuru Crime News: ಜಗಳ ಬಿಡಿಸಲು ಮುಂದಾದ ಅತ್ತೆಯ ತಲೆಗೆ ಅಳಿಯ ಸುಹೇಲ್ ದೊಣ್ಣೆಯಿಂದ ಹೊಡೆದಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಆಕೆಯನ್ನು ಮಧುಗಿರಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
ಆರೋಗ್ಯ ಕೇಂದ್ರದಲ್ಲಿ ಚುಚ್ಚುಮದ್ದು ಹಾಕಿದ ಕೆಲವೇ ಘಂಟೆಗಳಲ್ಲಿ ಮೂರು ತಿಂಗಳ ಮಗು ಸಾವನ್ನಪ್ಪಿದೆ. ಈ ಘಟನೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೊಯ್ಸಳಕಟ್ಟೆ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಸಂಭವಿಸಿದೆ.
ನೀರಿಲ್ಲದೆ ಪರದಾಡುತ್ತಿದ್ದ ತುಮಕೂರು ಜನರ ಆಕ್ರಂದನದ ಫಲವೇ ಇಂದಿನ ಮೈತ್ರಿ ಸರ್ಕಾರದ ಪತನಕ್ಕೆ ಕಾರಣ ಎಂದು ಸಂಸದ ಜಿ.ಎಸ್. ಬಸವರಾಜು ದೇವೇಗೌಡರ ಕುಟುಂಬದ ವಿರುದ್ದ ವಾಗ್ಧಾಳಿ ನಡೆಸಿದ್ದಾರೆ.
ಸ್ವಾಮೀಜಿ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಆದರೆ, ಅವರು ಮಠದಲ್ಲಿಯೇ ಉಳಿಯುವ ಇಂಗಿತ ವ್ಯಕ್ತಪಡಿಸಿದ್ದರಿಂದ ಅವರನ್ನು ಮಠಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಸ್ವಾಮೀಜಿ ಅವರ ರಕ್ತದಲ್ಲಿ ಎಂಡೋಟಾಕ್ಸಿನ್ ಮತ್ತು ಬ್ಯಾಕ್ಟೀರಿಯಾಗಳನ್ನು ಶುದ್ಧೀಕರಿಸಿ ರಕ್ತ ಚಲನೆಗೆ ಸಹಕಾರಿಯಾಗುವಂತಹ ನೂತನ ಚಿಕಿತ್ಸಾ ವಿಧಾನವನ್ನು ನಿನ್ನೆಯಿಂದ ಕೈಗೊಳ್ಳಲಾಗಿದೆ. ಅವರ ದೇಹದಲ್ಲಿ ಪ್ರೋಟೀನ್ ಅಂಶ ಕೂಡ ಜಾಸ್ತಿಯಾಗಿದೆ ಎಂದು ಡಾ.ಪರಮೇಶ್ ಹೇಳಿದರು.
ಕಳೆದ 70 ವರ್ಷಗಳಿಂದ 10 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿರುವ ಸೂಲಗಿತ್ತಿ ನರಸಮ್ಮಗೆ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿ, ವಯೋಶ್ರೇಷ್ಠ ಸನ್ಮಾನ, ದೇವರಾಜ ಅರಸು, ರಾಜ್ಯೋತ್ಸವ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.