ತುಮಕೂರು ಲೋಕಸಭಾ ಕ್ಷೇತ್ರದಿಂದಲೇ ಸ್ಪರ್ಧೆಗೆ ಹೆಚ್.ಡಿ.ದೇವೇಗೌಡ ನಿರ್ಧಾರ

ಮಾಜಿ ಪ್ರಧಾನಿ ಹಾಗೂ ಜೆಡಿಎಸ್ದೇ ವರಿಷ್ಠ ಹೆಚ್.ಡಿ.ದೇವೇಗೌಡರು ತಾವು ತುಮಕೂರಿನಿಂದಲೇ ಸ್ಪರ್ಧೆ ಮಾಡುತ್ತಿದ್ದು, ಸೋಮವಾರ ನಾಮ ಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Last Updated : Mar 23, 2019, 04:51 PM IST
ತುಮಕೂರು ಲೋಕಸಭಾ ಕ್ಷೇತ್ರದಿಂದಲೇ ಸ್ಪರ್ಧೆಗೆ  ಹೆಚ್.ಡಿ.ದೇವೇಗೌಡ ನಿರ್ಧಾರ title=

ಬೆಂಗಳೂರು: ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸ್ಪರ್ಧೆ ವಿಚಾರಕ್ಕೆ ಕಡೆಗೂ ತೆರೆ ಬಿದ್ದಿದ್ದು, ತುಮಕೂರು ಲೋಕಸಭಾ ಕ್ಷೇತ್ರದಿಂದಲೇ ಸ್ಪರ್ಧಿಸಲು ನಿರ್ಧರಿಸಿರುವುದಾಗಿ ಹೆಚ್.ಡಿ.ದೇವೇಗೌಡ ಘೋಷಿಸಿದ್ದಾರೆ.

ತಮ್ಮ ಸ್ವಕ್ಷೇತ್ರ ಹಾಸನವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣನಿಗೆ ಬಿಟ್ಟುಕೊಟ್ಟ ಬಳಿಕ ದೇವೇಗೌಡರು ಬೆಂಗಳೂರು ಉತ್ತರ ಅಥವಾ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಚರ್ಚೆ ಎಲ್ಲೆಡೆ ನಡೆದಿತ್ತು. ಆದರೀಗ ದೇವೇಗೌಡರು ತಾವು ತುಮಕೂರಿನಿಂದಲೇ ಸ್ಪರ್ಧೆ ಮಾಡುತ್ತಿದ್ದು, ಸೋಮವಾರ ನಾಮ ಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಏತನ್ಮಧ್ಯೆ, ತುಮಕೂರು ಹಾಲಿ ಸಂಸದ ಮುದ್ದಹನುಮೇಗೌಡ ಅವರು ತಮ್ಮ ತೋಟದ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯದ ಕಾಂಗ್ರೆಸ್​ ಹಿರಿಯ ನಾಯಕರು ತುಮಕೂರು ಕ್ಷೇತ್ರವನ್ನ ಜೆಡಿಎಸ್​ಗೆ ಬಿಟ್ಟುಕೊಟ್ಟಿದ್ದೇವೆ ಎಂದು ಹೇಳಿದಾಗ ಸೂಕ್ತ ಕಾರಣಗಳನ್ನು ಕೇಳಿದ್ದೆ. ಸಂಸದನಾಗಿ ಐದು ವರ್ಷ ಜನರ ನಡುವೆ ಇದ್ದು ದುಡಿದಿದ್ದೇನೆ. ನನ್ನ ಕೆಲಸವನ್ನ ಎಲ್ಲಾ ವರಿಷ್ಠರು ನೋಡಿದ್ದಾರೆ. ಎಲ್ಲಿಯೂ ಕೂಡ ಒಂದಿಷ್ಟು ಭ್ರಷ್ಟಾಚಾರ ಇಲ್ಲದಂತೆ ಕೆಲಸ ‌ಮಾಡಿದ್ದೇನೆ. ಹೀಗಾಗಿ ಸೋಮವಾರ ನಾಮಪತ್ರ ಸಲ್ಲಿಕೆ ಮಾಡುವುದಾಗಿ ಹೇಳಿದ್ದಾರೆ.

ಸದ್ಯ ದೇವೇಗೌಡರು ತುಮಕೂರು ಕ್ಷೇತ್ರದಿಂದ ಸ್ಪರ್ಧೆಗೆ ತೀರ್ಮಾನಿಸಿರುವುದರಿಂದ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎಂಬುದು ಈಗ ಕುತೂಹಲ ಮೂಡಿಸಿದೆ. 

Trending News