ರಾಜಕೀಯದಲ್ಲಿ ಮುಂದೆ ಬರಲು ಗರ್ಲ್ ಫ್ರೆಂಡ್ ಆಗ್ಬೇಕು: ಮಾಜಿ ಸಚಿವೆ

ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆ ಅಷ್ಟು ಸುಲಭವಾಗಿ ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದು ಮಾಜಿ ಸಜಿವೆ ಲೀಲಾವತಿ ಆರ್.ಪ್ರಸಾದ್ ಅಭಿಪ್ರಾಯಪಟ್ಟರು.

Last Updated : Sep 30, 2018, 04:40 PM IST
ರಾಜಕೀಯದಲ್ಲಿ ಮುಂದೆ ಬರಲು ಗರ್ಲ್ ಫ್ರೆಂಡ್ ಆಗ್ಬೇಕು: ಮಾಜಿ ಸಚಿವೆ  title=

ತುಮಕೂರು: ಮಹಿಳೆಯರು ರಾಜಕೀಯದಲ್ಲಿ ಯಶಸ್ಸು ಕಾಣಬೇಕಾದರೆ ಒಂದು ದುಡ್ಡಿರಬೇಕು, ಇಲ್ಲವಾದರೆ ಗರ್ಲ್ ಫ್ರೆಂಡ್ ಆಗಬೇಕು... ಹೀಗೆ ಹೇಳಿದವರು ಮಾಜಿ ಸಜಿವೆ ಲೀಲಾವತಿ ಆರ್.ಪ್ರಸಾದ್!

ನಗರದ ಕನ್ನಡ ಭವನದಲ್ಲಿ ಭಾನುವಾರ ನಡೆದ 'ಚುನಾವಣೆ-ಒಳ ಹೊರಗೆ ಮಹಿಳೆಯರು' ಎಂಬ ವಿಚಾರವಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆ ಅಷ್ಟು ಸುಲಭವಾಗಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಆದಾಗ್ಯೂ ಮಹಿಳೆಯರು ರಾಜಕೀಯದಲ್ಲಿ ಯಶಸ್ಸು ಕಾಣಬೇಕಾದರೆ ಆಕೆಯ ಬಳಿ ಹಣ ಇರಬೇಕು, ಇಲ್ಲ ಗಾಡ್ ಫಾದರ್ ಇರಬೇಕು, ಇವೆರಡೂ ಇಲ್ಲಾಂದ್ರೆ ಆಕೆ ಗರ್ಲ್ ಫ್ರೆಂಡ್ ಆಗಬೇಕು ಎಂದು ದೇಶದ ರಾಜಕೀಯ ವ್ಯವಸ್ಥೆಯ ಹೀನಾಯ ಸ್ಥಿತಿಯನ್ನು ವಿವರಿಸಿದರು.

ಮುಂದುವರೆದು ಮಾತನಾಡಿದ ಅವರು, "ನಾನು ರಾಜಕೀಯದಲ್ಲಿ ಮುಂದೆ ಬರಲು ಸುಮಾರು 40 ವರ್ಷಗಳೇ ಬೇಕಾಯಿತು. ರಾಜಕೀಯದಲ್ಲಿ ಮಹಿಳೆಯರಿಗೆ ಶೇ.33 ಮಿಸಲಾತಿ ನೀಡಬೇಕೆಂದು ನರಸಿಂಹರಾವ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಒತ್ತಾಯಿಸಿದ್ದೆ. ಈಗ ನಂಗೆ 83 ವರ್ಷ. ಇಂದಿಗೂ ಆ ಹೋರಾಟಕ್ಕೆ ಬದ್ಧವಾಗಿದ್ದೇನೆ. ಎಷ್ಟೇ ಹೋರಾಟ ಮಾಡಿದರೂ ಹಣ ಇದ್ದವರು, ಅಧಿಕಾರ ಇದ್ದವರು ಚುನಾವಣೆಗೆ ಸ್ಪರ್ಧಿಸುತ್ತಾರೆ. ಸಮಾಜ ಸೇವೆ ಮಾಡುವವರು ಇಂದು ರಾಜಕೀಯದಲ್ಲಿ ಇರಬೇಕಾದ ಅಗತ್ಯ ಸಾಕಷ್ಟಿದೆ ಎಂದರು.
 

Trending News