ತುಮಕೂರು : ಜೆಡಿಎಸ್ ಕಾರ್ಪೊರೇಟರ್ ಬರ್ಬರ ಹತ್ಯೆ

ಸದ್ಯ ಪೊಲೀಸರು ದುಷ್ಕರ್ಮಿಗಳು ಆಕ್ರಮಣ ನಡೆಸಲು ಬಳಸಿದ್ದ ಟೆಂಪೋವನ್ನು ವಶಕ್ಕೆ ಪಡೆದಿದ್ದಾರೆ. 

Last Updated : Sep 30, 2018, 11:08 AM IST
ತುಮಕೂರು : ಜೆಡಿಎಸ್ ಕಾರ್ಪೊರೇಟರ್ ಬರ್ಬರ ಹತ್ಯೆ title=

ತುಮಕೂರು: ತುಮಕೂರು ಮಹಾನಗರ ಪಾಲಿಕೆಯ ಜೆಡಿಎಸ್ ಕಾರ್ಪೊರೇಟರ್ ಒಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಂದು ಹತ್ಯೆ ಮಾಡಿದ ಘಟನೆ ಭಾನುವಾರ ಮುಂಜಾನೆ ನಡೆದಿದೆ.

ತುಮಕೂರು ನಗರದ ಹೊರವಲಯದ ಬಟವಾಡಿ ಬಳಿ ಟಾಟಾ ಏಸ್ ನಲ್ಲಿ ಬಂದ 7 ದುಷ್ಕರ್ಮಿಗಳು ಕ್ಯಾಂಟೀನ್ ಬಳಿ ಟೀ ಕುಡಿಯುತ್ತಿದ್ದ ಮಾಜಿ ಮೇಯರ್ ಹಾಗೂ ಹಾಲಿ ನಗರಪಾಲಿಕೆ ಸದಸ್ಯ ರವಿ ಕುಮಾರ್‌ ಅವರ ಕಣ್ಣಿಗೆ ಖಾರದ ಪುಡಿ ಎರಚಿ ನಡುರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ಆದರೆ, ಹತ್ಯೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. 

ಸದ್ಯ ಪೊಲೀಸರು ದುಷ್ಕರ್ಮಿಗಳು ಆಕ್ರಮಣ ನಡೆಸಲು ಬಳಸಿದ್ದ ಟೆಂಪೋವನ್ನು ವಶಕ್ಕೆ ಪಡೆದಿದ್ದಾರೆ. ಕೊಲೆ ಸ್ಥಳದಿಂದ 2 ಕಿ.ಮೀ. ದೂರದಲ್ಲಿ ಟೆಂಪೋ ಪತ್ತೆಯಾಗಿದ್ದು, ಅನುಮಾನ ಬಾರದಿರಲಿ ಎಂದು ನಂದಿನಿ ಹಾಲಿನ ಬ್ಯಾನರ್ ಅಂಟಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ತುಮಕೂರು ನಗರದಲ್ಲಿ ಪ್ರಭಾವಿ ನಾಯಕರಾಗಿರುವ ರವಿ ಕುಮಾರ್ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಜಯಗಳಿಸಿದ್ದರು. ಈ ಘಟನೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Trending News