ಚುಚ್ಚು ಮದ್ದು ಹಾಕಿದ ಕೆಲವೇ ಗಂಟೆಗಳಲ್ಲಿ ಮೂರು ತಿಂಗಳ ಮಗು ಸಾವು!

ಆರೋಗ್ಯ ಕೇಂದ್ರದಲ್ಲಿ ಚುಚ್ಚುಮದ್ದು ಹಾಕಿದ ಕೆಲವೇ ಘಂಟೆಗಳಲ್ಲಿ ಮೂರು ತಿಂಗಳ ಮಗು ಸಾವನ್ನಪ್ಪಿದೆ. ಈ ಘಟನೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೊಯ್ಸಳಕಟ್ಟೆ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಸಂಭವಿಸಿದೆ.

Written by - Zee Kannada News Desk | Last Updated : Jun 9, 2023, 10:37 AM IST
  • ಲಸಿಕೆ ಹಾಕಿದ ಒಂದು ಗಂಟೆಯೊಳಗೆ ಮಗು ಸಾವು
  • ಮಗು ಸಾವಿಗೆ ವೈದ್ಯರ ನಿರ್ಲಕ್ಷ್ಯಕ್ಕೆ ಆರೋಪ
  • ಚುಚ್ಚು ಮದ್ದು ಪಡೆದು ಮನೆಗೆ ತೆರಳುವ ಮಾರ್ಗ ಮಧ್ಯದಲ್ಲೇ ಘಟನೆ
ಚುಚ್ಚು ಮದ್ದು ಹಾಕಿದ ಕೆಲವೇ ಗಂಟೆಗಳಲ್ಲಿ ಮೂರು ತಿಂಗಳ ಮಗು ಸಾವು! title=

ತುಮಕೂರು: ಆರೋಗ್ಯ ಕೇಂದ್ರದಲ್ಲಿ ಚುಚ್ಚುಮದ್ದು ಹಾಕಿದ ಕೆಲವೇ ಘಂಟೆಗಳಲ್ಲಿ ಮೂರು ತಿಂಗಳ ಮಗು ಸಾವನ್ನಪ್ಪಿದೆ. ಈ ಘಟನೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೊಯ್ಸಳಕಟ್ಟೆ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಸಂಭವಿಸಿದೆ.

ಸೋಮನಹಳ್ಳಿ ಮೂಲದ ಮಧು ಹಾಗೂ ಶೃತಿ ದಂಪತಿಯ ಚುಚ್ಚು ಮದ್ದು ಪಡೆದು ಮನೆಗೆ ತೆರಳುವ ಮಾರ್ಗ ಮಧ್ಯದಲ್ಲೇ ಮಗು ಸಾವನ್ನಪ್ಪಿದೆ. ಬಳಿಕ ಸಾವನ್ನಪ್ಪಿದ ಮಗುವನ್ನು ಆಸ್ಪತ್ರೆ  ಮುಂಭಾಗ ಇಟ್ಟು ಮೃತ ಮಗುವಿನ ಸಂಬಂಧಿಕರು ವೈದ್ಯರ ಹಾಗೂ ಸಿಬ್ಬಂದಿ ವಿರುದ್ದ  ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: Crime News: ಟ್ಯಾಕ್ಟರ್ ಆರ್ಭಟಕ್ಕೆ ಪುಟ್ಟ ಕಂದಮ್ಮ ಬಲಿ; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ!

ಪ್ರತಿಭಟನಾ ಸ್ಥಳಕ್ಕೆ  ಜೆಡಿಎಸ್ ಶಾಸಕ ಸುರೇಶ್ ಬಾಬು ಭೇಟಿ ಪುಟ್ಟ ಕಂದಮ್ಮನ ಕುಟುಂಬಸ್ಥರಿಗೆ ಸಂತ್ವಾನ ಹೇಳಿದ್ದಾರೆ. ಪ್ರಕರಣ ಹಿನ್ನಲೆ  ಮಗುವಿನ ಸಾವಿಗೆ ಕಾರಣವಾದವರ ವಿರುದ್ದ ಕೂಡಲೇ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕ  ಸೂಚನೆ ನೀಡಿದ್ದಾರೆ.  

ಇದನ್ನೂ ಓದಿ: Crime News : ಪಾರ್ಟಿ ಕೊಡಿಸಿದವನಿಗೆ ಥ್ಯಾಂಕ್ಸ್‌ ಬದಲಾಗಿ, ತಲೆ ಬುರುಡೆಯನ್ನೇ ಬಿಚ್ಚಿದ್ದ ಸ್ನೇಹಿತರು!

ಸದ್ಯ ಘಟನೆ ಸಂಬಂಧ  ವೈದ್ಯರ ಹಾಗೂ ಸಿಬ್ಬಂದಿ ಸೇರಿ ಐವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.  ಮಗುವನ್ನು ಕಳೆದಕೊಂಡ ಪೋಷಕರ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದೆ.ಮಗು ಸಾವಿಗೆ ಕಾರಣವಾದವರ ವಿರುದ್ದ ಹುಳಿಯಾರು ಪೊಲೀಸ್  ಠಾಣೆಗೆ ದೂರು ನೀಡಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

  

Trending News