Elephant viral video : ಕಾಫಿ ತೋಟ ದಾಡುತ್ತಿದ್ದ ಆನೆಗಳು.. ಎರಡೂ ಬದಿಯಲ್ಲಿ ದೂರ ನಿಂತಿದ್ದ ಕಾರುಗಳು... ಅಷ್ಟರಲ್ಲಿ ಯುವಕನೊಬ್ಬ ಆನೆಯ ಬಳಿ ಬಂದು ಚುಡಾಯಿಸಲು ಯತ್ನಿಸಿದ್ದಾನೆ. ಆನೆ ಹಿಮ್ಮೆಟ್ಟಿದಾಗಲೆಲ್ಲ ಯುವಕ ಅದರ ಹಿಂದೆ ಹೋಗಿ ಪದೇ ಪದೇ ಕಿರುಕುಳ ನೀಡುತ್ತಾನೆ.. ಅಷ್ಟರಲ್ಲಿ ಇನ್ನೂ ಕೆಲವು ಆನೆಗಳು ಅಲ್ಲಿಗೆ ಬರುತ್ತವೆ..
ಆಹಾರ ಅರಸಿ ಕಾಡು ಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಬರುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಮನುಷ್ಯ ಮತ್ತು ಪ್ರಾಣಿಗಳ ನಡುವೆ ಸಂಘರ್ಷಗಳು ಉಂಟಾಗುತ್ತವೆ. ಆದರೆ ಅನೇಕರು ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ. ಕಾಡಿನ ಮೂಲಕ ಹಾದುಹೋಗುವಾಗ ಅಲ್ಲಿ ಕಾಣಿಸಿಕೊಳ್ಳುವ ಪ್ರಾಣಿಗಳ ಜೊತೆ ಹುಚ್ಚಾಟಕ್ಕೆ ಇಳಿಯುತ್ತಾರೆ..
ಇದನ್ನೂ ಓದಿ:8th pay commission: 8ನೇ ವೇತನ ಆಯೋಗದಲ್ಲಿ ನಿಮ್ಮ ಸಂಬಳ ಎಷ್ಟು ಹೆಚ್ಚಾಗುತ್ತದೆ ಗೊತ್ತಾ?
ಕೆಲವೊಮ್ಮೆ ಮನುಷ್ಯರು ಮಾಡುವ ಕೆಲವು ತಪ್ಪುಗಳು ದೊಡ್ಡ ಅಪಘಾತಗಳಿಗೆ ಕಾರಣವಾಗುತ್ತವೆ. ಅಂತಹ ಒಂದು ವೀಡಿಯೊವನ್ನು ಐಎಫ್ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Identify the animal in this video.
Maybe you are young and you can outrun the elephants. But these irritated animals don’t behave peacefully if they see other human for next few days. Don’t irritate wild animals for your fun. pic.twitter.com/chYlLeqx3d
— Parveen Kaswan, IFS (@ParveenKaswan) January 12, 2025
ವೀಡಿಯೊ ಪ್ರಕಾರ, ಆನೆಯೊಂದು ಚಹಾ ತೋಟದ ಮೂಲಕ ಹಾದುಹೋಗುವ ರಸ್ತೆಯನ್ನು ದಾಟುತ್ತಿದೆ. ಎರಡೂ ಬದಿಯಲ್ಲಿ ಕಾರುಗಳು ದೂರ ನಿಂತಿದ್ದವು. ಅಷ್ಟರಲ್ಲಿ ಯುವಕನೊಬ್ಬ ಆನೆಯನ್ನು ಚುಡಾಯಿಸಲು ಯತ್ನಿಸಿದ್ದಾನೆ. ಆನೆ ಹಿಮ್ಮೆಟ್ಟಿದಾಗಲೆಲ್ಲ ಯುವಕ ಅದರ ಹಿಂದೆ ಹೋಗಿ ಪದೇ ಪದೇ ಕಿರುಕುಳ ನೀಡುತ್ತಾನೆ. ಸುಮ್ಮನಾಗಿ ಅಲ್ಲಿಂದ ಆ ಆನೆ ಹೊರಟು ಹೋಗುತ್ತದೆ.. ಅಷ್ಟರಲ್ಲಿ ಇನ್ನೂ ಕೆಲವು ಆನೆಗಳು ರಸ್ತೆ ದಾಟಲು ಬಂದಾಗ ಅವುಗಳನ್ನೂ ಯುವಕ ಓಡಿಸಿದ್ದಾನೆ..
ಇದನ್ನೂ ಓದಿ:ಮಹಿಳೆಯರು ನಾಗಾ ಸಾಧು ಆಗಬೇಕೆಂದರೆ ಈ ಕೆಲಸ ಪ್ರತಿದಿನ ಮಾಡಲೇಬೇಕು.!
ಆನೆಗಳಿಗೆ ಕಿರುಕುಳ ನೀಡುವುದು ತಪ್ಪು ಮಾತ್ರವಲ್ಲ, ಅವುಗಳ ಆರೋಗ್ಯ ಮತ್ತು ನಡವಳಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದು ಪ್ರಾಣಿಗಳು ಮತ್ತು ಮನುಷ್ಯರಿಗೆ ಅಪಾಯಕಾರಿ ಎಂದು ಐಎಫ್ಎಸ್ನ ಪ್ರವೀಣ್ ಕಸ್ವಾನ್ ಎಚ್ಚರಿಸಿದ್ದಾರೆ.. ಸಧ್ಯ ವಿಡಿಯೋ ವೈರಲ್ ಆಗುತ್ತಿದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.