Dogs Viral Video: ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನವೂ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಈ ಪೈಕಿ ಕೆಲವು ಹೃದಯಸ್ಪರ್ಶಿ ವಿಡಿಯೋಗಳು ನೋಡುಗರ ಕಣ್ಣಂಚಲ್ಲಿ ನೀರು ತರಿಸುತ್ತವೆ. ಅದೇ ರೀತಿಯ ಮತ್ತೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟಿಜನ್ಸ್ ಕಣ್ಣೀರು ಸುರಿಸಿದ್ದಾರೆ. ಅಂತಹ ವಿಡಿಯೋ ಯಾವುದು ಅಂತೀರಾ..?
ಮನುಷ್ಯನ ಅತ್ಯಾಪ್ತ ಸ್ನೇಹಿತನೆಂದರೆ ನಾಯಿ... ಮನುಷ್ಯನ ಬದುಕಿನಲ್ಲಿ ನಾಯಿಗಳು ವಹಿಸುವ ಪಾತ್ರ ಬಹುಮುಖ್ಯವಾದುದು. ʼನಿಯತ್ತಿಗೆ ಮತ್ತೊಂದು ಹೆಸರೇ ನಾಯಿʼ ಅನ್ನೋದು ರೂಢಿಗತವಾಗಿದೆ. ನೀವು ಒಂದೇ ಒಂದು ತುತ್ತು ಊಟ ಕೊಟ್ಟು ನೋಡಿ ಶ್ವಾನಗಳು ನಿಮ್ಮನ್ನು ಬಿಟ್ಟು ಹೋಗುವುದೇ ಇಲ್ಲ. ಯಾವಾಗಲೂ ನಿಮ್ಮ ಸುತ್ತಲೇ ಸುತ್ತುತ್ತವೆ. ಒಂದೇ ಹೊತ್ತು ಊಟ ಕೊಟ್ಟರೂ ಸಹ ಶ್ವಾನಗಳು ಮನೆಯ ಕಾವಲುಗಾರನಾಗಿ ನಿಮಗೆ ರಕ್ಷಣೆ ನೀಡುತ್ತವೆ. ಅಂತಹ ಶ್ವಾನದ ಹೃದಯ ಸ್ಪರ್ಶಿ ವಿಡಿಯೋವೊಂದು ವೈರಲ್ ಆಗುತ್ತಿದೆ.
ಇದನ್ನೂ ಓದಿ: ಮಹಾ ಕುಂಭಮೇಳ 2025 - ಕೋಟ್ಯಂತರ ಜನರ ನಡುವೆ ಚಿತ್ರವಿಚಿತ್ರ ಸನ್ನಿವೇಶಗಳು.... !
ಹೌದು, ತಾಯಿ ನಾಯಿಯೊಂದು ತನ್ನ ಮರಿಯನ್ನು ವೈದ್ಯರ ಹತ್ತಿರ ಕರೆತಂದು ಚಿಕಿತ್ಸೆ ಕೊಡಿಸಿರುವ ವಿಡಿಯೋವೊಂದು ನೋಡುಗರ ಗಮನ ಸೆಳೆಯುತ್ತಿದೆ. ಈ ಘಟನೆ ನಡೆದಿರುವುದು ಟರ್ಕಿಯ ಇಸ್ತಾಂಬುಲ್ ಪ್ರಾಂತ್ಯದಲ್ಲಿ. ಅಲ್ಲಿ ಸುರಿಯುವ ಮಳೆಯಲ್ಲೇ ನಾಯಿಯೊಂದು ತೀವ್ರವಾಗಿ ಅಸ್ವಸ್ಥಗೊಂಡಿದ್ದ ತನ್ನ ಮರಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಪಶು ವೈದ್ಯಕೀಯ ಆಸ್ಪತ್ರೆಯ ಬಾಗಿಲ ಬಳಿ ತಂದು ಬಿಟ್ಟಿದೆ. ಬಳಿಕ ವೈದ್ಯರು ನಾಯಿಮರಿಯನ್ನು ಉಳಿಸಲು ಪ್ರಯತ್ನಿಸುತ್ತಿದ್ದ ವೇಳೆ ತಾಯಿ ನಾಯಿ ಆತಂಕದಿಂದ ನೋಡುತ್ತಿರುವ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
A stray dog in Istanbul saved her puppy's life by bringing her to a vet clinic before she froze to death. We're not sure how she knew where to go, but we're very impressed. 14/10 for all pic.twitter.com/tcjMSvLjC3
— WeRateDogs (@dog_rates) January 17, 2025
ಈ ಘಟನೆ ಜನವರಿ 13ರಂದು ನಡೆದಿದೆ ಎಂದು ಹೇಳಲಾಗಿದೆ. ನಾಯಿಮರಿಯ ಹೃದಯ ಬಡಿತ ಕಡಿಮೆ ಇತ್ತು. ಹೀಗಾಗಿ ತಕ್ಷಣವೇ ಅದಕ್ಕೆ ಚಿಕಿತ್ಸೆ ನೀಡಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರು ನಾಯಿಮರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಹತ್ತಿರದಲ್ಲೇ ಇದ್ದ ತಾಯಿ ನಾಯಿಯು ಆತಂಕದಿಂದ ನೋಡುತ್ತಿತ್ತು. ತಾಯಿ ನಾಯಿ ಕೆಲವು ದಿನಗಳ ಹಿಂದಷ್ಟೇ ಮರಿಗಳಿಗೆ ಜನ್ಮ ನೀಡಿತ್ತು. ಆದರೆ ಅದರ ಬಹುತೇಕ ಮರಿಗಳು ಮೃತಪಟ್ಟಿವೆ ಎಂದು ಪಶುವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ವಿಸ್ಮಯ... ಭಕ್ತ ಮಾರ್ಕಂಡೇಯನಂತೆ ಶಿವಲಿಂಗವನ್ನು ತಬ್ಬಿಕೊಂಡು ನಿಂತ ಕರಡಿ..! ಹರ ಹರ ಮಹಾದೇವ...
ಸದ್ಯ ಚಿಕಿತ್ಸೆ ಯಶಸ್ವಿಯಾಗಿದ್ದು, ನಾಯಿ ತನ್ನ ಮರಿಯೊಂದಿಗೆ ಮತ್ತೆ ಸೇರಿಕೊಂಡಿದೆ. ನಾಯಿಮರಿಯ ಆರೋಗ್ಯ ಸುಧಾರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. @dog_rates ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅನೇಕರು ಈ ವಿಡಿಯೋ ನೋಡಿ ನನಗೆ ಕಣ್ಣಂಚಲ್ಲಿ ನೀರು ಬಂತು ಅಂತಾ ಕಾಮೆಂಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.