Uric acid: ಬದಲಾಗುತ್ತಿರುವ ಹವಾಮಾನ ಮತ್ತು ಜೀವನಶೈಲಿಯಿಂದ ಅನೇಕ ಜನರು ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಚಳಿಗಾಲದ ಕಾರಣದಿಂದ ದೇಹದಲ್ಲಿನ ಯೂರಿಕ್ ಆಸಿಡ್ ಅಂಶ ಕೂಡ ಹೆಚ್ಚಾಗುತ್ತದೆ.
Uric acid: ಬದಲಾಗುತ್ತಿರುವ ಹವಾಮಾನ ಮತ್ತು ಜೀವನಶೈಲಿಯಿಂದ ಅನೇಕ ಜನರು ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಚಳಿಗಾಲದ ಕಾರಣದಿಂದ ದೇಹದಲ್ಲಿನ ಯೂರಿಕ್ ಆಸಿಡ್ ಅಂಶ ಕೂಡ ಹೆಚ್ಚಾಗುತ್ತದೆ.
ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಜಂಕ್ ಫುಡ್ ತಿನ್ನುವುದು ರಕ್ತದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ. ಹೆಚ್ಚಿದ ಯೂರಿಕ್ ಆಮ್ಲವು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಯೂರಿಕ್ ಆಸಿಡ್ ಮಟ್ಟವು 7.0 mg/dl ಗಿಂತ ಹೆಚ್ಚಿದ್ದರೆ ಅದು ಕೀಲುಗಳಲ್ಲಿ ಸ್ಫಟಿಕಗಳ ರೂಪದಲ್ಲಿ ಸಂಗ್ರಹವಾಗುತ್ತದೆ. ಇದು ಕೀಲುಗಳಲ್ಲಿ ನೋವು ಮತ್ತು ಊತವನ್ನು ಉಂಟುಮಾಡುತ್ತದೆ.
ಚಳಿಗಾಲದಲ್ಲಿ ಮೂಲಂಗಿ ಹೆಚ್ಚು ಸಿಗುತ್ತದೆ. ಮೂಲಂಗಿ ಅನೇಕ ಪೋಷಕಾಂಶಗಳನ್ನು ಹೊಂದಿದ್ದು, ಇದು ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ಪ್ರೊಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಖನಿಜಗಳಿಂದ ಸಮೃದ್ಧವಾಗಿದೆ.
ಮೂಲಂಗಿ ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೂಲಂಗಿಯಲ್ಲಿ ನಾರಿನಂಶ ಅಧಿಕವಾಗಿದ್ದು, ಇದು ಜೀರ್ಣಕ್ರಿಯೆಗೆ ರಾಮಬಾಣ.
ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿರುವವರು ಮೂಲಂಗಿಯನ್ನು ಸೇವಿಸುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ಇದನ್ನು ತಮ್ಮ ಆಹಾರದಲ್ಲಿ ಮೂಲಂಗಿಯನ್ನು ಸೇರಿಸಿಕೊಳ್ಳುವುದು ಉತ್ತಮ.
ಹೃದಯದ ಸಮಸ್ಯೆಯಿಂದ ಬಳಲುತ್ತಿರುವವರು ಮೂಲಂಗಿಯನ್ನು ಸೇವಿಸುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು. ಏಕೆಂದರೆ ಇದರಲ್ಲಿರುವ ಫೋಲೇಟ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ.
ಮೂಲಂಗಿಯಲ್ಲಿ ವಿಟಮಿನ್ ಬಿ6, ಫೋಲೇಟ್ ಮತ್ತು ವಿಟಮಿನ್ ಸಿ ಇದೆ. ಯೂರಿಕ್ ಆಸಿಡ್ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೂಲಂಗಿಯು ಪ್ಯೂರಿನ್ಗಳ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮೂತ್ರಪಿಂಡದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾದಾಗ, ಪ್ಯೂರಿನ್ಗಳು ಮೂಳೆಗಳು ಮತ್ತು ಕೀಲುಗಳಲ್ಲಿ ಸ್ಫಟಿಕಗಳ ರೂಪದಲ್ಲಿ ಸಂಗ್ರಹವಾಗುತ್ತವೆ. ಇದು ಗೌಟ್ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದರಿಂದ ಮೂಲಂಗಿ ಸೇವನೆಯಿಂದ ಯೂರಿಕ್ ಆಸಿಡ್ ಅನ್ನು ತೆಗೆದು ಹಾಕಲು ಸಹಾ ಮಾಡುತ್ತದೆ.