Covid-19 New Symptoms In India: ಈ ಲಕ್ಷಣಗಳು ನಿಮ್ಮಲ್ಲೂ ಇದ್ದರೆ ಹುಷಾರಾಗಿರಿ..!

ಇದಕ್ಕೂ ಮೊದಲು ಶೀತ, ಕೆಮ್ಮು, ಜ್ವರ, ಉಸಿರಾಟದ ತೊಂದರೆಯಿದ್ದರೆ ಅಂಥವರು ಜಾಗರೂಕರಾಗಿರಬೇಕು ಕೋವಿಡ್ ಪರೀಕ್ಷೆಗೆ ಒಳಗಾಗಬೇಕು ಎಂದೆಲ್ಲಾ ಹೇಳಲಾಗುತ್ತಿತ್ತು. ಆದರೆ ಈಗ ಇವುಗಳೊಂದಿಗೆ ಇನ್ನೂ ಅನೇಕ ಲಕ್ಷಣಗಳು ಕಾಣಿಸಿಕೊಂಡಿವೆ.

Written by - Ranjitha R K | Last Updated : Apr 14, 2021, 07:23 PM IST
  • ದೇಶದಲ್ಲಿ ಮತ್ತೆ ಕರೋನಾ ವೈರಸ್ ಪ್ರಕರಣಗಳು ಹೆಚ್ಚಳ
  • ಸೋಂಕಿತರಲ್ಲಿ ದಿನೇ ದಿನೇ ಹೊಸ ಹೊಸ ಲಕ್ಷಣಗಳು ಕಂಡು ಬರುತ್ತಿವೆ
  • ಓರಲ್ ಸಿಸ್ಟಮ್ ಮೇಲೆ ಪರಿಣಾಮ ಬೀರಲಿದೆ
Covid-19 New Symptoms In India: ಈ ಲಕ್ಷಣಗಳು ನಿಮ್ಮಲ್ಲೂ ಇದ್ದರೆ ಹುಷಾರಾಗಿರಿ..! title=
ದೇಶದಲ್ಲಿ ಮತ್ತೆ ಕರೋನಾ ವೈರಸ್ ಪ್ರಕರಣಗಳು ಹೆಚ್ಚಳ (file photo)

ನವದೆಹಲಿ : ದೇಶದಲ್ಲಿ ಮತ್ತೆ ಕರೋನಾ ವೈರಸ್ (Coronavirus) ಪ್ರಕರಣಗಳು ಹೆಚ್ಚುತ್ತಿವೆ. ಈ ಬಾರಿ ಸೋಂಕಿತರ ಸಂಖ್ಯೆಯಲ್ಲಿ ಅತಿ ವೇಗದಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಇದೀಗ ಸೋಂಕಿತರಲ್ಲಿ ದಿನೇ ದಿನೇ ಹೊಸ ಹೊಸ ಲಕ್ಷಣಗಳು ಕೂಡಾ ಕಂಡುಬರುತ್ತಿವೆ. ಹೀಗಿರುವಾಗ ಕರೋನಾ ವೈರಸ್ ಸೋಂಕಿಗೆ ಒಳಪಟ್ಟಿರುವುದನ್ನು ತಿಳಿದುಕೊಳ್ಳುವುದು ಹೇಗೆ ಎಂಬುದೇ ಪ್ರಶ್ನೆ. ಇಲ್ಲಿಯವರೆಗೆ ಶೀತ (Cold), ಕೆಮ್ಮು (Cough), ಜ್ವರ, ತಲೆನೋವು ಇವೆಲ್ಲಾ ಕರೋನಾ ವೈರಸ್ ಲಕ್ಷಣಗಳು ಎಂದು ಹೇಳಲಾಗುತ್ತಿತ್ತು. ಆದರೆ ಈಗ  ಹೊಸ ಹೊಸ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. 

ಹೌದು ಇದಕ್ಕೂ ಮೊದಲು ಶೀತ, ಕೆಮ್ಮು, ಜ್ವರ, ಉಸಿರಾಟದ ತೊಂದರೆಯಿದ್ದರೆ ಅಂಥವರು ಜಾಗರೂಕರಾಗಿರಬೇಕು ಕೋವಿಡ್ (COVID-19) ಪರೀಕ್ಷೆಗೆ ಒಳಗಾಗಬೇಕು ಎಂದೆಲ್ಲಾ ಹೇಳಲಾಗುತ್ತಿತ್ತು. ಆದರೆ ಈಗ ಇವುಗಳೊಂದಿಗೆ ಇನ್ನೂ ಅನೇಕ ಲಕ್ಷಣಗಳು ಕಾಣಿಸಿಕೊಂಡಿವೆ. ವೈದ್ಯರು ಕೂಡಾ ಹೊಸ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವುದನ್ನು ದೃಢಪಡಿಸಿದ್ದಾರೆ. ಹಾಗಿದ್ದರೆ ಆ ಹೊಸ ಲಕ್ಷಣಗಳು ಯಾವುವು ನೋಡೋಣ .

ಇದನ್ನೂ ಓದಿ : ಕುಂಭ ಮೇಳವನ್ನು ಕೊರೊನಾ ಅಣುಬಾಂಬ್ ಎಂದ ರಾಮ್ ಗೋಪಾಲ್ ವರ್ಮಾ

- ಇದು ನಿಮ್ಮ ಓರಲ್ ಸಿಸ್ಟಮ್ (Oral System) ಮೇಲೆ ಪರಿಣಾಮ ಬೀರಲಿದೆ. ಇದು ನಾಲಿಗೆಯ (Tongue) ಮೇಲೆ ಸುಡುವ ಸಂವೇದನೆ, ಒಂಥರ ಕಿರಿಕಿರಿಯನ್ನುಂಟು ಮಾಡುತ್ತದೆ. ಅನೇಕ ಜನರು ಬಾಯಿಯಲ್ಲಿ ಹುಣ್ಣುಗಳಾಗುವ  ಬಗ್ಗೆಯೂ ಹೇಳುತ್ತಿದ್ದಾರೆ. ವೈದ್ಯರು ಇದನ್ನು ಕೋವಿಡ್ ಟಂಗ್ ಎಂದು ಕರೆಯುತ್ತಿದ್ದಾರೆ.

- ತೀವ್ರ ಸ್ನಾಯು ನೋವು ಅಥವಾ ಚರ್ಮದ ಸೋಂಕು.

- ಹೊಟ್ಟೆ ನೋವು, ವಾಂತಿ (Vomiting), ಅತಿಸಾರ.

- ಕೆಲವು ಸಂದರ್ಭಗಳಲ್ಲಿ ಕಂಜಕೆಕ್ಟಿವ್ ಐಸ್, ಕಣ್ಣುಗಳಲ್ಲಿ ನೀರು ಬರುವುದು, ಮಸುಕಾಗುವುದು ಅಥವಾ ಕೆಂಪಾಗುವುದು ಸೇರಿವೆ 

ಇದನ್ನೂ ಓದಿ : CBSE BOARD EXAM 2021: 10ನೇ ತರಗತಿಯ ಪರೀಕ್ಷೆ ರದ್ದು, 12ನೇ ತರಗತಿ ಪರೀಕ್ಷೆಗಳು ಮುಂದೂಡಿಕೆ

- ದೇಹದಲ್ಲಿ ಎಂಥಾ ನಿಶ್ಯಕ್ತಿ ಕಾಡುತ್ತದೆ ಎಂದರೆ, ಎದ್ದು ನಿಲ್ಲುವುದಕ್ಕೂ ಸಾಧ್ಯವಾಗುವುದಿಲ್ಲ. ಈ ಜನರಲ್ಲಿ ಹಸಿವು ಕೂಡಾ ಕಡಿಮೆಯಾಗುತ್ತದೆ. 

- ಹೊಸ ಲಕ್ಷಣಗಳು ಅಂದ ತಕ್ಷಣ ಹಳೆಯ ರೋಗಲಕ್ಷಣಗಳನ್ನು ಕಾಣಿಸಿಕೊಳ್ಳುವುದಿಲ್ಲ ದಲ್ಲ. ಇನ್ನೂ, ಹೆಚ್ಚಿನ ಸಂಖ್ಯೆಯ ಸೋಂಕಿತ ಜನರಿಗೆ ಜ್ವರ (Fever) , ಶೀತ, ಕೆಮ್ಮು, ಉಸಿರಾಟದ ತೊಂದರೆ, ಮೈ ಕೈ ನೋವು ಕಾಣಿಸಿಕೊಳ್ಳುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News