ನಯನತಾರಾ, ತ್ರಿಷಾ ಹಿಂದಿಕ್ಕಿದ ಕಿರಿಕ್‌ ಬೆಡಗಿ... ರಶ್ಮಿಕಾ ಮಂದಣ್ಣ ಹೊಸ ಸಿನಿಮಾ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ!!

Rashmika Mandanna Remuneration: ನಯನತಾರಾ ಮತ್ತು ತ್ರಿಶಾ ದಕ್ಷಿಣ ಭಾರತದ ಸ್ಟಾರ್ ನಟಿಯರಾಗಿದ್ದಾರೆ. ಅನೇಕ ಹೊಸ ನಾಯಕಿಯರು ಬಂದರೂ ಅವರ ಸ್ಥಾನವನ್ನು ಯಾರೂ ‌ತುಂಬಲು ಸಾಧ್ಯವಾಗಲಿಲ್ಲ.

Written by - Chetana Devarmani | Last Updated : Jun 16, 2024, 01:30 PM IST
  • ರಶ್ಮಿಕಾ ಮಂದಣ್ಣ ಸಂಭಾವನೆ
  • ನಯನತಾರಾ, ತ್ರಿಷಾ ಹಿಂದಿಕ್ಕಿದ ಕಿರಿಕ್‌ ಬೆಡಗಿ
  • ರಶ್ಮಿಕಾ ಮಂದಣ್ಣ ಹೊಸ ಸಿನಿಮಾ
ನಯನತಾರಾ, ತ್ರಿಷಾ ಹಿಂದಿಕ್ಕಿದ ಕಿರಿಕ್‌ ಬೆಡಗಿ... ರಶ್ಮಿಕಾ ಮಂದಣ್ಣ ಹೊಸ ಸಿನಿಮಾ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ!! title=

Rashmika Mandanna : ನಯನತಾರಾ ಮತ್ತು ತ್ರಿಶಾ ಕೃಷ್ಣನ್ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಾಗಿದ್ದಾರೆ. ತಮಿಳು ಅಲ್ಲದೆ ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ಇಬ್ಬರೂ ನಟಿಸಿದ್ದಾರೆ. ಈಗಲೂ ನಟಿಸುತ್ತಿದ್ದಾರೆ. ಈ ಹೊತ್ತಿನವರೆಗೂ ನಯನತಾರಾ ಮತ್ತು ತ್ರಿಶಾ ಕೃಷ್ಣನ್ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹೀರೋಯಿನ್‌ಗಳಾಗಿದ್ದಾರೆ. ಆದರೆ ಈಗ ಓರ್ವ ಯಂಗ್‌ ನಟಿ ಇವರನ್ನು ಹಿಂದಿಕ್ಕಿದ್ದಾರೆ ಎನ್ನಲಾಗುತ್ತಿದೆ. 

ಕನ್ನಡ ಸಿನಿಮಾ ಕಿರಿಕ್‌ ಪಾರ್ಟಿ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿ ಈಗ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಬೆಡಗಿ ರಶ್ಮಿಕಾ ಮಂದಣ್ಣ. ತೆಲುಗು ಚಿತ್ರ ಡಿಯರ್ ಕಾಮ್ರೇಡ್ ಮತ್ತು ಗೀತ ಗೋವಿಂದಂ ಮೂಲಕ ದಕ್ಷಿಣ ಭಾರತದಲ್ಲಿ ಜನಪ್ರಿಯರಾದರು. ಇತ್ತೀಚೆಗೆ ಬಿಡುಗಡೆಯಾದ ಅನಿಮಲ್‌ನ ಗೀತಾಂಜಲಿ ಪಾತ್ರದ ಮೂಲಕ ಹಿಂದಿ ಸಿನಿಪ್ರಿಯರ ಮನಗೆದ್ದಿದ್ದಾರೆ. ತಮಿಳಿನಲ್ಲಿ ಸುಲ್ತಾನ್, ವಾರಿಸು ಮುಂತಾದ ಚಿತ್ರಗಳಲ್ಲೂ ನಟಿಸಿದ್ದಾರೆ.  

ಇದನ್ನೂ ಓದಿ: ರಥಾವರ ಡೈರೆಕ್ಟರ್ ಹೊಸ ಪ್ರಯತ್ನಕ್ಕೆ ಶ್ರೀಮುರಳಿ ಸಾಥ್.. ʻಚೌಕಿದಾರ್ʼ ಆದ ಪೃಥ್ವಿ ಅಂಬಾರ್

ತ್ರಿಶಾ ಮತ್ತು ನಯನತಾರಾ ಚಿತ್ರರಂಗಕ್ಕೆ ಬಂದು ಹಲವು ವರ್ಷಗಳೇ ಕಳೆದಿವೆ. ಇಬ್ಬರೂ ಇತ್ತೀಚೆಗೆ ತಮ್ಮ ಸಂಭಾವನೆ ಹೆಚ್ಚಿಸಿದ್ದಾರೆ. ನಟಿ ತ್ರಿಶಾ ಒಂದು ಚಿತ್ರಕ್ಕೆ 10 ರಿಂದ 12 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ನಯನತಾರಾ ಕೂಡ ಪ್ರತಿ ಚಿತ್ರಕ್ಕೆ 12 ಕೋಟಿಯವರೆಗೂ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಆದರೆ ಈಗ ರಶ್ಮಿಕಾ ಇವರಿಬ್ಬರನ್ನೂ ಹಿಂದಿಕ್ಕಿದ್ದಾರೆ ಎಂದು ಹೇಳಲಾಗಿದೆ.

ಎಆರ್ ಮುರುಗದಾಸ್ ನಿರ್ದೇಶಿಸುತ್ತಿರುವ ನಟ ಸಲ್ಮಾನ್ ಖಾನ್ ಮುಖ್ಯ ಪಾತ್ರದಲ್ಲಿರುವ ಸಿಕಂದರ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿದೆ. ಇದರಲ್ಲಿ ನಟಿಸಲು ಸುಮಾರು 15 ಕೋಟಿ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಎಂಬುದು ಗಮನಾರ್ಹ. 

ಇದನ್ನೂ ಓದಿ: ನನಗೂ ಕೆಟ್ಟ ಮೆಸೇಜ್‌ಗಳು ಬಂದಿವೆ.. ಕಾನೂನಿನ ಮೇಲೆ ಜನರ ಭರವಸೆ ಉಳಿಸುತ್ತಾರೆ ಅಂತ ನಂಬಿದ್ದೇನೆ: ನಟಿ ರಮ್ಯಾ ಪೋಸ್ಟ್‌ ವೈರಲ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News