ಇವರಿಬ್ಬರು ಇಲ್ಲದೇ ಹೋಗಿದ್ದರೆ ದರ್ಶನ್ ಅರೆಸ್ಟ್ ಸಾಧ್ಯವಿರುತ್ತಲೇ ಇರಲಿಲ್ಲ :ಡೆವಿಲ್ ಹೆಡೆಮುರಿ ಕಟ್ಟಿದ ಡೈನಾಮಿಕ್ ಅಧಿಕಾರಿಗಳಿವರು


ನಟ ದರ್ಶನ ಬಂಧನವಾಗಿರುವುದು, ಇದೀಗ ಕಂಬಿ ಹಿಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ದರ್ಶನ್ ಬಂಧನ ಎನ್ನುವುದು ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದ ವಿಚಾರ. 

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಕಂಬಿ ಹಿಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ದರ್ಶನ್ ಬಂಧನ ಹೇಳಿಕೊಳ್ಳುವಷ್ಟು ಅಂದುಕೊಳ್ಳುವಷ್ಟು ಸುಲಭದ ಮಾತಾಗಿರಲಿಲ್ಲ. ಯಾಕೆಂದರೆ ದರ್ಶನ್ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಣ್ಣ ಎಡವಟ್ಟು ಕೂಡಾ ಇನ್ನೇನೋ ಘಟನೆಗೆ ಕಾರಣವಾಗಿ ಬಿಡುತ್ತಿತ್ತು. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ನಟ ದರ್ಶನ್ ಬಂಧನವಾಗಿರುವುದು, ಇದೀಗ ಕಂಬಿ ಹಿಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ದರ್ಶನ್ ಬಂಧನ ಎನ್ನುವುದು ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದ ವಿಚಾರ.   

2 /8

ದರ್ಶನ ಅರೆಸ್ಟ್ ಅನ್ನುವುದು ಖಂಡಿತವಾಗಿಯೂ ಸುಲಭದ ಮಾತಾಗಿರಲಿಲ್ಲ. ದರ್ಶನ್ ಇಂದು ಕಂಬಿ ಹಿಂದೆ ದಿನ ಕಳೆಯುವಂತೆ ಮಾಡಿದ ಆ ಪೋಲೀಸ್ ಅಧಿಕಾರಿಗಳ ಬಗ್ಗೆ ಹೇಳಲೇ ಬೇಕು.   

3 /8

ದರ್ಶನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಿರುವಾಗ ಅರೆಸ್ಟ್ ಲೆಕ್ಕಾಚಾರದಲ್ಲಿ ಸ್ವಲ್ಪ ಏರುಪೆರಾಗಿದ್ದರೂ ಈ ಅಧಿಕಾರಿಗಳ ಕೆಲಸ, ಪ್ರಾಣ ಎರಡಕ್ಕೂ ಸಂಚಕಾರವಿತ್ತು.

4 /8

ಆದರೆ ತಾವು ಮಾಡುತ್ತಿರುವ ಕೆಲಸದಲ್ಲಿ ಕಿಂಚಿತ್ತೂ ಲೋಪ ದೋಷ ವಿಲ್ಲದಂತೆ, ಘಟನೆಯ ಹಿಂದಿನ ಎಲ್ಲಾ ಸಾಕ್ಷ್ಯಗಳನ್ನು ಕಲೆ ಹಾಕಿ, ಕೊಲೆ ತನಿಖೆಯ ಬಗ್ಗೆ ಎಲ್ಲೂ ಯಾವ ವಿಚಾರವೂ ಲೀಕ್ ಆಗದಂತೆ ನೋಡಿಕೊಂಡವರು ಈ ಅಧಿಕಾರಿಗಳು.   

5 /8

ಹೌದು, ನಾವಿಲ್ಲಿ ಹೇಳುತ್ತಿರುವುದು ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ಅಂದ್ರೇ ಡೆಪ್ಯುಟಿ ಕಮಿಷನರ್‌ ಆಫ್‌ ಪೊಲೀಸ್‌ ಎಸ್‌ ಗಿರೀಶ್‌ ಮತ್ತು ಅವರಿಗೆ ಸಾಥ್ ನೀಡಿದ ವಿಜಯನಗರದ ಎಸಿಪಿ ಚಂದನ್‌ ಕುಮಾರ್‌ ಬಗ್ಗೆ.   

6 /8

ಒಂದು ವೇಳೆ ಇಲ್ಲಿ ಗಿರೀಶ್‌ ಅಂತಹ ಅಧಿಕಾರಿ ಇಲ್ಲದೇ ಹೋಗಿದ್ದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ನಿಜವಾದ ಆರೋಪಿಗಳು ಸಿಕ್ಕಿ ಬೀಳುತ್ತಿದ್ದರು ಎನ್ನುವ ಗ್ಯಾರಂಟಿ ಇರುತ್ತಿರಲಿಲ್ಲ.   

7 /8

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳು ನಾವೇ ಎಂದು ಹೇಳಿಕೊಂಡು ಕತೆ ಹೆಣೆದಿದ್ದ ನಾಲ್ವರ ಕತೆಯನ್ನು ಎಳೆ ಎಳೆಯಾಗಿ ಬಿಚ್ಚಿ ಅದೊಂದು ಸುಳ್ಳಿನ ಕಂತೆ ಅನ್ನುವುದನ್ನು ಸಾಕ್ಷಿ ಸಮೇತ ಸಾಬೀತು ಮಾಡಿದವರು ಗಿರೀಶ್. 

8 /8

ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿ ಪ್ರಕರಣದ ನಿಜವಾದ ಆರೋಪಿಗಳನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ರಹಸ್ಯ ಕಾರ್ಯಾಚರಣೆ ನಡೆಸಿ, ದರ್ಶನ್‌  ಆಪ್ತರನ್ನೆಲ್ಲಾ ವಶಕ್ಕೆ ಪಡೆದು ಕೊನೆಗೆ ದರ್ಶನ್ ಬಂಧಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.