ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ: ಬಂಗಾರ ಪ್ರಿಯರಿಗೆ ಇದು ಬಂಪರ್‌ ಸುದ್ದಿ!

Gold And Silver Rate: ಚಿನ್ನದ ಬೆಲೆ ಇದೀಗ ಸವರನ್‌ಗೆ ಹತ್ತು ಸಾವಿರ ಕಡಿಮೆಯಾಗುವ ಮೂಲಕ ಬಂಗಾರ ಪ್ರಿಯರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.  

Written by - Zee Kannada News Desk | Last Updated : Jun 15, 2024, 09:17 AM IST
  • ಗೋಲ್ಡ್‌ ಪ್ರಿಯರಿಗೆ ಬಂಪರ್‌ ಆಫರ್‌.
  • ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತು.
  • ಚಿನ್ನದ ಬೆಲೆ ಇದೀಗ ಸವರನ್‌ಗೆ ಹತ್ತು ಸಾವಿರ ಕಡಿಮೆಯಾಗಿದೆ.
ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ: ಬಂಗಾರ ಪ್ರಿಯರಿಗೆ ಇದು ಬಂಪರ್‌ ಸುದ್ದಿ! title=

Gold Price Today: ಚಿನ್ನದ ಬೆಲೆ ದಿನೇ ದಿನೇ ಕಡಿಮೆಯಾಗುತ್ತಲೇ ಇದೆ. ಮದುವೆ ಸಮಾರಂಭಗಳು ಇಲ್ಲದ ಕಾರಣ ಅಂತರಾಷ್ಟೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದೆ. ಒಂದು ಸವರನ್‌ಗೆ 80 ಸಾವಿರವಿದ್ದ ಚಿನ್ನದ ಬೆಲೆ ಇದೀಗ ಸವರನ್‌ಗೆ ಹತ್ತು ಸಾವಿರ ಕಡಿಮೆಯಾಗುವ ಮೂಲಕ ಬಂಗಾರ ಪ್ರಿಯರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

2023ರ ಆರಂಭರದಲ್ಲಿ ಗಗನಕ್ಕೇರಿದ್ದ ಚಿನ್ನದ ಬೆಲೆ, ಚಿನ್ನ ಕೊಳ್ಳುವವರನ್ನು ಹಿಂದೇಟು ಹಾಕುವಂತೆ ಮಾಡಿತ್ತು. ಇದೀಗ ಭಾರಿ ಕುಸಿತ ಕಂಡಿರುವ ಕಾರಣ ಚಿನ್ನ ಕೊಳ್ಳುವವರಿಗೆ ಇದು ಬೆಸ್ಟ್‌ ಟೈಮ್‌ ಎಂದೇ ಹೇಳಬಹುದು.

ಇದನ್ನೂ ಓದಿ: ಎಟಿಎಂ ಕಾರ್ಡ್ ಬಳಕೆದಾರರಿಗೆ ಬಿಗ್‌ ಶಾಕ್;‌ ಇನ್ಮುಂದೆ ಹೆಚ್ಚಿನ ಶುಲ್ಕ ಪಾವತಿಸಬೇಕು!

ಒಂದು ವಾರದಲ್ಲಿ ಗಮನಾರ್ಹವಾಗಿ ಕುಸಿತ ಕಂಡಿದ್ದ ಚಿನ್ನದ ಬೆಲೆ ಶನಿವಾರ ಕೂಡ ಕುಸಿತ ಕಂಡಿದೆ. ಇದರೊಂದಿಗೆ 22 ಕ್ಯಾರೆಟ್‌ನ ಚಿನ್ನದ ಬೆಲೆ 10 ಗ್ರಾಂ ಗೆ ರೂ. 65,890 ಆಗಿದ್ದರೆ 24 ಕ್ಯಾರೆಟ್‌ನ 10 ಗ್ರಾಂ ನ ಚಿನ್ನದ ಬೆಲೆ ರೂ. 71,880ಕ್ಕೆ ಇಳಿಕೆಯಾಗಿದೆ.

ಯಾವ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ ನೋಡೋಣ:

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ರೂ. 65,890 ಇದ್ದರೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ರೂ. 71,880 ಆಗಿದೆ.

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ರೂ. 66,040 ಇದ್ದರೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ರೂ. 72,030 ಇದೆ.

ಇದನ್ನೂ ಓದಿ:  Free Aadhaar Update: ಆಧಾರ್ ನವೀಕರಣಕ್ಕೆ ಸಂಬಂಧಿಸಿದಂತೆ ಯುಐಡಿಎಐ ಬಿಗ್ ಅಪ್ಡೇಟ್

ಮುಂಬೈ: ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ರೂ. 65,890 ಇದ್ದರೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ರೂ. 71,880 ರಲ್ಲಿ ಮುಂದುವರೆದಿದೆ.

1 Kg ಬೆಳ್ಳಿ ಬೆಲೆ ಇಂತಿದೆ: 
ಚೆನ್ನೈ - ₹94900
ಮುಂಬೈ - ₹90400
ದೆಹಲಿ  - ₹90400
ಕೋಲ್ಕತ್ತಾ  - ₹90400
ಬೆಂಗಳೂರು  - ₹90300
ಹೈದರಾಬಾದ್  - ₹94900
 

Trending News