ನನ್ನ ಗಂಡ ಜಗಳ ಮಾಡಲ್ಲ.. ಅತಿಯಾಗಿ ಪ್ರೀತಿಸ್ತಾನೆ ಅಂತಾ ಪತಿಗೆ ಡಿವೋರ್ಸ್!

Viral News in India: ನಾನು ತಪ್ಪು ಮಾಡಿದಾಗ ನನ್ನ ಪತಿ ಯಾವಾಗಲೂ ನನ್ನನ್ನು ಕ್ಷಮಿಸುತ್ತಾನೆ. ಆತನೇ ನನಗೆ ಗಿಫ್ಟ್ ತಂದುಕೊಟ್ಟು ಸಮಾಧಾನ ಮಾಡುತ್ತಾನೆ. ನಾನು ಅವನೊಂದಿಗೆ ವಾದ ಮಾಡಲು ಬಯಸುತ್ತಿದ್ದೆ. ಆದರೆ ಆತ ಒಂದೇ ಒಂದು ದಿನವೂ ನನ್ನೊಂದಿಗೆ ವಾದ ಮಾಡಲಿಲ್ಲ, ಜಗಳವಂತೂ ಆಡಲೇ ಇಲ್ಲʼವೆಂದು ಹೇಳಿದ್ದಾಳೆ.

Written by - Puttaraj K Alur | Last Updated : Jun 13, 2024, 03:58 PM IST
  • ನನ್ನ ಪತಿ ನನ್ನನ್ನು ಅತಿಯಾಗಿ ಪ್ರೀತಿಸುತ್ತಾನೆ, ಆದರೆ ನನ್ನ ಜೊತೆ ಜಗಳವನ್ನೇ ಮಾಡಲ್ಲ
  • ಒಂದೇ ಒಂದು ದಿನವೂ ಕೋಪಿಸಿಕೊಳ್ಳದ ಮತ್ತು ಜಗಳವಾಡದ ಗಂಡ ನನಗೆ ಬೇಡ
  • ಪತಿಯ ಒಳ್ಳೆತನದ ವಿರುದ್ಧವೇ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿರುವ ಮಹಿಳೆ
ನನ್ನ ಗಂಡ ಜಗಳ ಮಾಡಲ್ಲ.. ಅತಿಯಾಗಿ ಪ್ರೀತಿಸ್ತಾನೆ ಅಂತಾ ಪತಿಗೆ ಡಿವೋರ್ಸ್! title=
ʼಜಗಳವಾಡದ ಗಂಡ ನನಗೆ ಬೇಡʼ

ನವದೆಹಲಿ: ನನ್ನ ಪತಿ ನನ್ನನ್ನು ಅತಿಯಾಗಿ ಪ್ರೀತಿಸುತ್ತಾನೆ, ಆದರೆ ನನ್ನ ಜೊತೆ ಜಗಳವನ್ನೇ ಮಾಡಲ್ಲವೆಂದು ಮಹಿಳೆಯೊಬ್ಬರು ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿರುವ ವಿಚಿತ್ರ ಘಟನೆ ನಡೆದಿದೆ. ಇದು ಅಚ್ಚರಿಯಾದರೂ ನೀವು ನಂಬಲೇಬೇಕಾದ ಸಂಗತಿ. ವಿಚ್ಛೇದನ ಕೋರಿದ ಮಹಿಳೆಗೆ ತನ್ನ ಗಂಡ ತನ್ನೊಂದಿಗೆ ಬಹಳ ಮಾತಾಡಬೇಕು, ವಾದ ಮಾಡಬೇಕು, ಜಗಳವಾಡಬೇಕು ಎಂಬ ಆಸೆ ಇದೆಯಂತೆ. ಇದೇ ಅವರ ಸಂಬಂಧ ಹದಗೆಡಲು ಕಾರಣವಾಗಿದೆ. 

ಈ ಮಹಿಳೆಯ ಗಂಡ ಆಕೆ ಏನೇ ಹೇಳಿದರೂ ಕೋಪಿಸಿಕೊಳ್ಳುತ್ತಿರಲಿಲ್ಲ. ಒಂದೇ ಒಂದು ದಿನವೂ ಆಕೆಯೊಂದಿಗೆ ಜಗಳವಾಡಿಲ್ಲವಂತೆ. ಇದರಿಂದ ಬೇಸತ್ತ ಆ ಮಹಿಳೆ ತನ್ನ ಗಂಡನ ಪ್ರೀತಿ ತನಗೆ ಉಸಿರುಗಟ್ಟಿಸುತ್ತಿದೆ ಅನ್ನೋ ಕಾರಣ ನೀಡಿ ವಿಚ್ಛೇದನ ಕೋರಿದ್ದಾಳೆ. 

ಇದನ್ನೂ ಓದಿ: G7 ಶೃಂಗಸಭೆ : 3ನೇ ಬಾರಿ ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಇಟಲಿಗೆ ಮೊದಲ ವಿದೇಶ ಪ್ರವಾಸ

ʼನನ್ನ ಗಂಡ ತುಂಬಾ ಒಳ್ಳೆಯ ವ್ಯಕ್ತಿ. ಅವನೇ ನನಗಾಗಿ ಅಡುಗೆ ಮಾಡುತ್ತಾನೆ. ಮನೆಯ ಎಲ್ಲಾ ಕೆಲಸಗಳನ್ನು ಮಾಡಲು ನನಗೆ ಸಹಾಯ ಮಾಡುತ್ತಾನೆ. ನನಗೆ ಸ್ವಲ್ಪವೂ ತೊಂದರೆಯಾಗಲು ಬಿಡುವುದಿಲ್ಲ. ನನ್ನ ಬಗ್ಗೆ ವಿಪರೀತ ಕಾಳಜಿ ವಹಿಸುತ್ತಾನೆ. ಆತನ ಈ ಒಳ್ಳೆಯತನವೇ ನನಗೆ ಉಸಿರುಗಟ್ಟಿಸುತ್ತಿದೆ. ನಾವು ಬೇರೆ ದಂಪತಿಯಂತೆ ನಾರ್ಮಲ್ ಆಗಿಲ್ಲವೆನಿಸುತ್ತಿದೆ. ನನ್ನ ಗಂಡ ಪ್ರತಿಯೊಂದು ವಿಚಾರದಲ್ಲೂ ನನ್ನೊಂದಿಗೆ ಕಾಂಪ್ರಮೈಸ್ ಆಗುವುದು ನನಗೆ ಇಷ್ಟವಿಲ್ಲʼ ಅಂತಾ ಆ ಮಹಿಳೆ ಕೋರ್ಟ್​ನಲ್ಲಿ ಹೇಳಿದ್ದಾಳೆ.

ನಾನು ತಪ್ಪು ಮಾಡಿದಾಗ ನನ್ನ ಪತಿ ಯಾವಾಗಲೂ ನನ್ನನ್ನು ಕ್ಷಮಿಸುತ್ತಾನೆ. ಆತನೇ ನನಗೆ ಗಿಫ್ಟ್ ತಂದುಕೊಟ್ಟು ಸಮಾಧಾನ ಮಾಡುತ್ತಾನೆ. ನಾನು ಅವನೊಂದಿಗೆ ವಾದ ಮಾಡಲು ಬಯಸುತ್ತಿದ್ದೆ. ಆದರೆ ಆತ ಒಂದೇ ಒಂದು ದಿನವೂ ನನ್ನೊಂದಿಗೆ ವಾದ ಮಾಡಲಿಲ್ಲ, ಜಗಳವಂತೂ ಆಡಲೇ ಇಲ್ಲʼವೆಂದು ಹೇಳಿದ್ದಾಳೆ.

ಇದನ್ನೂ ಓದಿ: ಮತ್ತೊಂದು ಅವಧಿಗೆ ಅರುಣಾಚಲ ಪ್ರದೇಶದ ಸಿಎಂ ಆಗಿ ಪೆಮಾ ಖಂಡು ನಾಳೆ ಪ್ರಮಾಣ ವಚನ ಸ್ವೀಕಾರ

ಆಕೆಯ ಪತಿ ತಾನು ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ. ನಾನು ಪರಿಪೂರ್ಣ ಮತ್ತು ಉತ್ತಮ ಪತಿಯಾಗಲು ಬಯಸುತ್ತೇನೆ. ಆದರೆ ನನ್ನ ಒಳ್ಳೆಯತನವೇ ನನ್ನ ಪತ್ನಿಗೆ ತೊಂದರೆಯಾಗಿದೆ. ನಾನು ಇದಕ್ಕೆ ಏನು ಮಾಡಬೇಕು ಅಂತಾ ಆತ ಪ್ರಶ್ನಿಸಿದ್ದಾನೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News